ನಿಷೇಧಾಜ್ಞೆ ಸಡಿಲಿಕೆ; ಸಹಜ ಸ್ಥಿತಿಗೆ ಮರಳಿದ  ವಾಡಿಯ ಜನ ಜೀವನ

0
16

ಕಲಬುರಗಿ: ಶ್ರೀರಾಮ ಮೂರ್ತಿ ಮೆರವಣಿಗೆ ಸಂದರ್ಭದಲ್ಲ ಗಲಾಟೆ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಜಾರಿಯಲ್ಲಿದ್ದ ಸಿ.ಆರ್.ಪಿ.ಸಿ ಕಲಂ 144 ರ ಅಡಿಯಲ್ಲಿ ಜಾರಿಗೊಳಿಸಿದ್ದ ನಿಷೇಧಾಜ್ಞೆ ಸಾರ್ವಜನಿಕರ ಹಿತದೃಷ್ಟಿಯಿಂದ ಸಡಿಲಿಕೆ ಮಾಡಲಾಗಿದೆ.

ಚಿತ್ತಾಪುರ ತಾಲೂಕ ತಹಶೀಲ್ದಾರ್, ಹಾಗೂ ತಾಲೂಕು ದಂಡಾಧಿಕಾರಿ ಸೈಯದ್ ಷಾಷಾವಲಿ ಅವರು ಬುಧವಾರ ಬೆಳಿಗ್ಗೆ ಈ ಕುರಿತು ಆದೇಶ ಹೊರಡಿಸಿದ್ದಾರೆ.

Contact Your\'s Advertisement; 9902492681

ಕೆಲವು ನಿಭಂದನೆಗಳ ಮೇರೆಗೆ ನಿಷೇಧಾಜ್ಞೆ ಸಡಿಲಿಕೆ ಮಾಡಲಾಗಿದ್ದು ಐದು ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪಾಗಿ ಸೇರುವಂತಿಲ್ಲ, ಯಾವುದೇ ಸಭೆ ಸಮಾರಂಭ, ಹಾಗೂ ಸಮಾವೇಶಗಳಿಗೆ ಪೊಲೀಸ್ ಪರವಾನಿಗೆ ಕಡ್ಡಾಯವಾಗಿ ಪಡೆಯಬೇಕು,ಕತ್ತಿ, ಚಾಕು, ಇತ್ಯಾದಿ ಮಾರಕಾಸ್ತ್ರಗಳನ್ನು ಒಯ್ಯುವುದು, ಸಂಗ್ರಹಿಸುವುದು ನಿಷೇಧಿಸಲಾಗಿದೆ, ತುರ್ತು ಸೇವೆಗಳ ಜೊತೆಗೆ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಯಾಗದಂತೆ ಷರತ್ತಿಗೆ ಒಳಪಟ್ಟು ಎಲ್ಲಾ ವ್ಯಾಪಾರ ಅಂಗಡಿ ಮುಂಗಟ್ಟುಗಳು ತೆರೆಯಲು ಅನುಮತಿ ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಬಂದೋಬಸ್ತ್ ಮುಂದು ವರದಿಯಲಿದೆ.

ತಡವಾಗಿ ನಿಷೇಧಾಜ್ಞೆ ಸಡಿಲಿಕೆ ಆದೇಶ ಬಂದಿರುವುದರಿಂದ ಬಹುತೇಕ ಹೋಟೆಲ್ ಗಳು, ಅಂಗಡಿ ಮುಂಗಟ್ಟುಗಳು ಬಾಗಿಲು ತೆಗೆಯಲಿಲ ಇದರಿಂದಾಗ ಊಟಕ್ಕಾಗಿ ಹೋಟೆಲ್ ನಂಬಿದ ಕಾರ್ಮಿಕರು, ಲಾರಿ ಚಾಲಕರು, ಇತರರೂ ಪರದಾಡುವಂತಾಯಿತು.

ಮೂರು ದಿನಗಳಿಂದ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ಇಂದು ಜನ ಜೀವನ ಸಹಜ ಸ್ಥಿತಿಗೆ ಬಂದಿರುವುದು ಸಾರ್ವಜನಿಕರಲ್ಲಿ ನಿರಾಳತೆ ಹಾಗೂ ನೆಮ್ಮದಿ ತಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here