SSLC ವಿದ್ಯಾರ್ಥಿಗಳಿಗೆ ಪಠ್ಯಧಾರಿತ ರಸಪ್ರಶ್ನೆ ಕಾರ್ಯಕ್ರಮ

0
15

ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಗುರುಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ ಇವರ ಸಹಯೋಗದಲ್ಲಿ ತಾಲೂಕಿನ ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢಶಾಲೆಗಳ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪಠ್ಯಧಾರಿತ ರಸಪ್ರಶ್ನೆ ಕಾರ್ಯಕ್ರಮವನ್ನು ಕ್ಷೇತ್ರದ ಶಿಕ್ಷಣಾಧಿಕಾರಿಗಳಾದ ಶ್ರೀ ಮೈಲೇಶ್ ಬೇವೂರ್ ಅವರ ನೇತೃತ್ವದಲ್ಲಿ ನಡೆಸಲಾಯಿತು.

ಮೈಲೇಶ್ ಬೇವೂರ್ ಅವರು ಮಾತನಾಡಿ ಮುಂಬರುವ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಪೂರ್ವ ತಯಾರಿಯಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ದಲಿತ ವಿದ್ಯಾರ್ಥಿ ಪರಿಷತ್ ಕಾರ್ಯ ಶ್ಲಾಘನೀಯವಾಗಿದೆ. ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚು ಹೆಚ್ಚು ಇಂತಹ ಕಾರ್ಯಕ್ರಮಗಳನ್ನು ನಡೆಸುವಂತಾಗಲಿ ಎಂದರು

Contact Your\'s Advertisement; 9902492681

ಈ ಕಾರ್ಯಕ್ರಮಕ್ಕೆ ಉಪಸ್ಥಿತರಾಗಿ ಪ್ರಭಾಕರ್, ಕೃಷ್ಣಾ ನಾಯ್ಕ, ರವಿಚಂದ್ರನ್ ನಾಯಕ್ , ಎಂಪಿ ಮಂಜುನಾಥ್, ಹ್ಯಾಟಿ ಲೋಕಪ್ಪ, ಗೋಪಿ ನಾಯ್ಕ್ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷರಾದ ಹನುಮೇಶ, ತಾಲೂಕು ಅಧ್ಯಕ್ಷರಾದ ಬಿ.ಬಿ‌.ಜಿ ಗೌತಮ್, ರಾಮ ನಾಯಕ್, ಬಿ.ಬಿ.ಜಿ ಬಾಬಾ ಹಾಗೂ 31 ಶಾಲೆಗಳ ಗುರುಗಳು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.

ಈ ಸ್ಪರ್ಧೆಯಲ್ಲಿ BNM ಸರ್ಕಾರಿ ಪ್ರೌಢಶಾಲೆ ತೆಲುಗೋಳಿ ವಿದ್ಯಾರ್ಥಿಗಳಾದ ವಿಠ್ಠಲ ಮತ್ತು ದ್ರಾವಿಡ್ ನಾಯಕ್ ಪ್ರಥಮ ಸ್ಥಾನ ಗಳಿಸಿದರು. ಸರ್ಕಾರಿ ಪ್ರೌಢಶಾಲೆ ಚಿಲಗೋಡು ವಿದ್ಯಾರ್ಥಿಗಳಾದ ಗಂಗಮ್ಮ ಮತ್ತು ಪಕೀರಮ್ಮ, ಸರ್ಕಾರಿ ಪ್ರೌಢಶಾಲೆ ಬ್ಯಾಸಿಗದೇರಿ ವಿದ್ಯಾರ್ಥಿಗಳಾದ ದೇವರಾಜ ಹಾಗೂ ಭುವನೇಶ್ವರಿ ಹಾಗೂ ತಂಬ್ರಹಳ್ಳಿ ಪ್ರೌಢಶಾಲೆ ವಿದ್ಯಾರ್ಥಿಗಳಾದ ನಿವೇದಿತಾ ಹಾಗೂ ಮರಳು ಸಿದ್ದಪ್ಪ ಕ್ರಮವಾಗಿ ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ಪಡೆದರು.

ಬಹುಮಾನಗಳು: ಪ್ರಶಸ್ತಿ ಪತ್ರ , ನೆನಪಿನ ಕಾಣಿಕೆ , ನಗದು ಬಹುಮಾನಗಳನ್ನು ಒಳಗೊಂಡಿತ್ತು. ಶಿಕ್ಷಕರಾದ ಎಮ್ ರಾಜು, ಮಂಜುನಾಥ ಎಂ.ಎಸ್, ತುಕಾರಾಂ ನಾಯಕ್ ನಿರ್ಣಾಯಕರಾಗಿ ಕಾರ್ಯವನ್ನು ನಿರ್ವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here