ನಿಮ್ಮೆಲ್ಲರ ಆಶಿರ್ವಾದ ಶಾಸಕನಾಗಿದ್ದು ಅಭಿವೃಧ್ಧಿಗೆ ಶ್ರಮಿಸುವೆ; ಶಾಸಕ ಆರ್.ವಿ ನಾಯಕ

0
9

ಸುರಪುರ:ನಿಮ್ಮೆಲ್ಲರ ಆಶಿರ್ವಾದ ದಿಂದ ನಾಲ್ಕನೇ ಬಾರಿಗೆ ಶಾಸಕನಾಗಿದ್ದು,ಕ್ಷೇತ್ರದ ಸಮಗ್ರ ಅಭಿವೃಧ್ಧಿಗೆ ಶ್ರಮಿಸುವುದಾಗಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿದರು.

ನಗರದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿ ತಾಲುಕು ಆಡಳಿತ ಹಮ್ಮಿಕೊಂಡಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಸ್ವಾತಂತ್ರ್ಯ ನಂತರ ದೇಶದಲ್ಲಿ ಯಾವುದೇ ಸಂವಿಧಾನ ಇಲ್ಲದ ಸಂದರ್ಭದಲ್ಲಿ ಡಾ:ಬಿ.ಆರ್.ಅಂಬೇಡ್ಕರ್ ಅವರು ಹಲವು ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ನಂತರ ಸಂವಿಧಾನವನ್ನು ರಚನೆ ಮಾಡಿ ಕೊಟ್ಟಿದ್ದಾರೆ.ಅಂತಹ ಸಂವಿಧಾನವನ್ನು ಜಾರಿಗೊಂಡ ದಿನವನ್ನು ಗಣರಾಜ್ಯೋತ್ಸವವನ್ನಾಗಿ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಸಂಗೊಳ್ಳಿ ರಾಯಣ್ಣನವರನ್ನು ಸ್ಮರಿಸಿದರು.

Contact Your\'s Advertisement; 9902492681

ಕಾರ್ಯಕ್ರಮದ ಆರಂಭದಲ್ಲಿ ತಹಸೀಲ್ದಾರ್ ಕೆ.ವಿಜಯಕುಮಾರ ಮಹಾತ್ಮ ಗಾಂಧಿಜಿ ಹಾಗು ಡಾ:ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.ಅಲ್ಲದೆ ಪೊಲೀಸರು ಹಾಗೂ ಗೃಹ ರಕ್ಷಕದಳ ಪಥಸಂಚಲನ ನಡೆಸಿದರು,ಶಾಸಕರು ಗೌರವ ವಂದನೆ ಸ್ವೀಕರಿಸಿದರು.

ನಂತರ ವಿವಿಧ ರಂಗಗಳಲ್ಲಿ ಸಾಧನೆಗೌದ ಹಿರಿಯ ಸಂಗೀತ ಕಲಾವಿದ ಮೋಹನ್ ಮಾಳದಕರ್,ಪತ್ರಕರ್ತರಾದ ಗವಿಸಿದ್ದೇಶ ಹೊಗರಿ,ಕಲಿಮುದ್ದೀನ್ ಫರೀದಿ,ಪ್ರಗತಿಪರ ರೈತ ಶಂಕರ ಬಡಿಗೇರ,ಕೆಂಭಾವಿ ಉಪ ತಹಸೀಲ್ದಾರ್ ರಾಜಾಸಾಬ್ ಕಂದಗಲ್,ಶಿಕ್ಷಕ ಸ್ಯಾಮುವೆಲ್ ಮ್ಯಾಥ್ಯೂ,ಕಂದಾಯ ನೌಕರರ ಸಂಘದ ಅಧ್ಯಕ್ಷ ಚನ್ನಬಸವ ಚಲುವಾದಿ ಇತರೆ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.ನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಕೆ.ವಿಜಯಕುಮಾರ,ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ ಮಾತನಾಡಿದರು.

ವೇದಿಕೆ ಮೇಲೆ ತಾ.ಪಂ ಇಓ ಬಸವರಾಜ ಸಜ್ಜನ್,ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ,ಪಿ.ಎಸ್.ಐ ಕೃಷ್ಣಾ ಸುಬೇದಾರ,ಅಬಕಾರಿ ನಿರೀಕ್ಷಕ ಕೇದಾರನಾಥ,ಕ್ಷೇತ್ರ ಸಮನ್ವಯಾಧಿಕಾರಿ ಪಂಡಿತ ನಿಂಬೂರ,ಸಮಾಜ ಕಲ್ಯಾಣ ಇಲಾಖೆ ಪ.ಜಾ ಸಹಾಯಕ ನಿರ್ದೇಶಕಿ ಶೃತಿ,ಪ.ಪಂ ವಿಭಾಗದ ವಿಸ್ತೀರ್ಣಾಧಿಕಾರಿ ಮಹ್ಮದ್ ಸಲೀಂ,ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತಿಪ್ಪರಡ್ಡಿ ಮಾಲಿ ಪಾಟೀಲ್,ಗೃಹರಕ್ಷಕದ ದಳದ ಕಂಪನಿ ಕಮಾಂಡರ್ ಯಲ್ಲಪ್ಪ ಹುಲಿಕಲ್,ಲೋಕೊಪಯೋಗಿ ಇಲಾಖೆ ಎಇಇ ಎಸ್.ಜಿ.ಪಾಟೀಲ್,ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಹಣಮಂತ್ರಾಯ ಫಾಟೀಲ್ ಸೇರಿದಂತೆ ಅನೇಕರಿದ್ದರು.

75ನೇ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃಧ್ಧಿ ಇಲಾಖೆಯಿಂದ ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಭಿತ್ತಿ ಪತ್ರಗಳನ್ನು ಶಾಸಕ ರಾಜಾ ವೆಂಕಟಪ್ಪ ನಾಯಕ ಪ್ರದರ್ಶಿಸಿದರು.ಇಲಾಖೆಯ ಯೋಜನಾಧಿಕಾರಿ ಅನಿಲಕುಮಾರ ಕಾಂಬ್ಳೆ ಹಾಗೂ ಇಲಾಖೆಯ ಮಹಿಳಾ ಮೇಲ್ವಿಚಾರಕಿಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here