ಟ್ರಸ್ಟ ಮೂಲಕ ಸಾಮಾಜಿಕ ಕಳಕಳಿ ಹೆಚ್ಚಳ

0
94

ಕಲಬುರಗಿ: ಸಾಮಾಜಿಕ ಕಳಕಳಿಯ ದೃಷ್ಟಿಯಿಂದ ಆರಂಭಿಸಿರುವ ಟ್ರಸ್ಟ ಮೂಲಕ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಆಯೋಜಿಸಿ,ಸ್ವ ಉದ್ಯೋಗಕ್ಕೆ ಉತ್ತೇಜಿಸಿ ಸ್ವಾಲಂಬಿಗಳನ್ನಾಗಿ ಮಾಡಬೇಕು ಎಂದು ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಬಸವರಾಜ ಬಿರಬಿಟ್ಟಿ ಅಭಿಪ್ರಾಯಪಟ್ಟರು.

ನಗರದ ಕೋರ್ಟ ರಸ್ತೆಯಲ್ಲಿರುವ ಸುಸ್ವಾದ ಹೋಟೆಲ್ ನಲ್ಲಿ ಆಯೋಜಿಸಿದ ರಿತ್ವಿಕ ಗ್ರಾಮೀಣ ಅಭಿವೃದ್ಧಿ ಚಾರಿಟೇಬಲ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಉಳ್ಳವರು ಮತ್ತು ಇಲ್ಲದವರ ನಡುವೆ ಕೊಂಡಿಯಾಗಿ ಕೆಲಸ ಮಾಡಿದಾಗ ಹಿಂದುಳಿದ ಸಮುದಾಯದ ಕುಟುಂಬಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ ಎಂದರು.

Contact Your\'s Advertisement; 9902492681

ಚಾರಿಟೇಬಲ್ ಟ್ರಸ್ಟ್‍ನ ಆರೋಗ್ಯ ಕಾಳಜಿ ಉಪಕ್ರಮಕ್ಕೆ ಕೊಡುಗೆಯು ಸಂಗೀತ ಮತ್ತು ಸಾಮಾಜಿಕ ಆಶಯಗಳ ಅದರ ಪ್ರಯತ್ನಗಳ ಜೊತೆಗೆ ಗ್ರಾಮೀಣ ಭಾರತದಲ್ಲಿ ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಸುಲಭವಾಗಿ ಮತ್ತು ಕೈಗೆಟುಕುವ ದರದಲ್ಲಿ ಆರೋಗ್ಯ ಕಾಳಜಿಯನ್ನು ಒದಗಿಸುವ ಕಡೆಗೆ ಒಂದು ಹೆಜ್ಜೆಯಾಗಿದೆ. ನಮ್ಮ ಬೆಂಬಲದೊಂದಿಗೆ, ಟ್ರಸ್ಟ್ ತನ್ನ ಉದಾರ ಕೆಲಸಗಳನ್ನು ಮುಂದುವರೆಸಬಹುದು ಮತ್ತು ನಮ್ಮ ಪ್ರದೇಶದ ಜನರ ಜೀವನವನ್ನು ಸುಧಾರಿಸಬಹುದು.ಇದು ವೃದ್ಧರಿಗೆ ಉತ್ತಮ ವೃದ್ಧಾಶ್ರಮವಾಗಲಿದೆ ಎಂದರು.

ಸಾಹಿತಿ ಹಾಗೂ ಯುವ ಹೋರಾಟಗಾರ ನಾಗಲಿಂಗಯ್ಯ ಮಠಪತಿ ಮಾತನಾಡಿ,ಉತ್ತಮ ಸದುದ್ದೇಶದಿಂದ ಟ್ರಸ್ಟ್ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಪದಾಧಿಕಾರಿಗಳು ನಿರಂತರವಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಮಹಿಳೆಯರು, ಯುವಜನರು ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.ಸಮಾಜ ಸೇವೆ ಮಾಡುವುದರಿಂದ ಪುಣ್ಯ ದೊರೆಯುತ್ತದೆ.ಇನ್ನೂ ಹೆಚ್ಚಿನ ಸಮಾಜ ಮುಖಿ ಕೆಲಸಗಳನ್ನು ಮಾಡುವಂತೆ ಅವರು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬರಾಯ ಬೆಳಕೋಟ, ಮುಖ್ಯ ಅತಿಥಿಗಳಾಗಿ ಛಾಯಾಗ್ರಾಹಕ ರಾಜಕುಮಾರ ಉದನೂರ, ಶಾಮರಾವ್ ಸೂರನ್,ಅನೀಲಕುಮಾರ ಡೊಂಗರಗಾಂವ, ಮಧುಕರ ಕಾಂಬಳೆ ಆಗಮಿಸಿದ್ದರು.ಕಾರ್ಯಕ್ರಮದ ನೇತೃತ್ವವನ್ನು ರವಿ ಎ.ಸಿಂಗೆ ವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here