ಕಲಬುರಗಿ: ಗಣರಾಜ್ಯೋತ್ಸವ ನಿಮಿತ್ತ ಖೈದಿಗಳಿಂದ ಮೂಕಾಭಿನಯ ನಾಟಕ ಪ್ರದರ್ಶನ

0
21

ಕಲಬುರಗಿ: 75 ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಕಾರಾಗೃಹದ ಮುಖ್ಯ ದ್ವಾರದ ಮುಂಭಾಗದಲ್ಲಿ ಕಾರಾಗೃಹದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳೊಂದಿಗೆ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಕಾರಾಗೃಹದ ಒಳ ಭಾಗದಲ್ಲಿ ಕೂಡ ಬಂದಿಗಳಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ನಂತರ ದ್ವಜಾರೋಹಣದ ನಂತರ ಬಂದಿಗಳಿಂದ ದೇಶಭಕ್ತಿ ಗೀತೆಯೊಂದಿಗೆ ಸಾಂಸೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 75 ನೇ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ, ಸಜಾ ಮತ್ತು ವಿಚಾರಣಾ ಬಂದಿಗಳಿಂದ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಮೂಕಾಭಿನಯ ಮೂಲಕ ಕಿರು ನಾಟಕವನ್ನು ಪ್ರದರ್ಶಿಸಿದರು.

Contact Your\'s Advertisement; 9902492681

ಈ ನಾಟಕದಲ್ಲಿ ಭೂಮಿಯಲ್ಲಿ ದೊರೆತ ಶಿಲೆಯನ್ನು ಹಿಂದೂ, ಕ್ರೈಸ್ತ, ಮುಸ್ಲಿಂ, ಬೌದ್ಧÀ, ವೇಷ ಭೂಷಣಗಳನ್ನು ತೊಟ್ಟು ತಮ್ಮ ತಮ್ಮ ಧರ್ಮಕ್ಕೆ ಅನುಗುಣವಾಗಿ ಶಿಲೆಯನ್ನು ಕೆತ್ತಿ ತಮ್ಮದೇ ಆದ ಕಲ್ಪನೆಗೆ ಅನುಗುಣವಾಗಿ ಮೂರ್ತಿಯನ್ನು ಮಾಡಿ ನಾನೇ ಶ್ರೇಷ್ಠ ಮತ್ತು ನನ್ನ ಧರ್ಮವೇ ಶ್ರೇಷ ಎಂದು ಒಬ್ಬರಿಗೊಬ್ಬರು ಜಗಳವಾಡುವ ಸಮಯದಲ್ಲಿ ಗಾಂಧೀಜಿಯವರು ಆಗಮಿಸಿ ಭಾರತ ವಿವಿಧ ಸಂಸೃತಿ ಪರಂಪರೆಯನ್ನ ಹೊಂದಿದಂತ ದೇಶ ನಾವೆಲ್ಲರೂ ಒಂದೇ ಪ್ರತಿಯೊಂದ ಧರ್ಮದ ಸಾರಾಂಶ ಮಾನವಿಯತೇ ಒಂದು ಧರ್ಮ ಆ ಧರ್ಮದ ಅಡಿಯಲ್ಲಿ ನಾವು ಅಣ್ಣ ತಮ್ಮಂದಿಯರಾಗಿ ಒಗ್ಗಟಾಗಿ ದೇಶದ ಏಳಿಗೆಗಾಗಿ ನಾವೇಲ್ಲ ಶ್ರಮಿಸಬೇಕು ಎಂದು ಮೂಕಾಭಿನಯದ ಮೂಲಕ ಏಕತೆಯ ಮನೋಭಾವನೆಯನ್ನು ಮೂಡಿಸುವ ಸಂದೇಶ ಪ್ರದರ್ಶಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಈ ಸಂಸ್ಥೆಯ ಅಧೀಕ್ಷಕರಾದಂತಹ ಬಿ.ಎಂ. ಕೊಟ್ರೇಶ್, ಮಾತನಾಡುತ್ತಾ, ಮೊದಲಿಗೆ ಎಲ್ಲರಿಗೂ 75 ನೇ ಗಣರಾಜ್ಯೋತ್ಸವ ದಿನಾಚರಣೆಯ ಶುಭಾಶಯವನ್ನು ಕೋರಿ ನಂತರ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿದ ಅಧಿಕಾರಿ/ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ತಿಳಿಸುತ್ತಾ, ಶ್ಲಾಘನೀಯ ಪ್ರಮಾಣ ಪತ್ರ ನೀಡುವ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಪಿ.ರಂಗನಾಥ್‍ರವರು ದ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಉತ್ತಮ ಸೇವೆಯನ್ನು ಸಲ್ಲಿಸಿರುವ ಅಧಿಕಾರಿ/ಸಿಬ್ಬಂದಿಗಳಿಗೆ ಶ್ಲಾಘನೀಯ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡುತ್ತಾ, ಮೂಕಾಭಿನಯ ಮೂಲಕ ಕಿರು ನಾಟಕದ ಸಾರಂಶದಂತೆ ತಾವುಗಳು ಕಾರಾಗೃಹದಲ್ಲಿ ಒಳ್ಳೆಯ ನಡೆತೆ, ಗುಣವನ್ನು ಬೆಳೆಸಿಕೊಂಡು ನಾವೇಲ್ಲ ಭಾರತಾಂಬೆಯ ಮಕ್ಕಳೆಂಬ ಭಾವನೆಯನ್ನು ಬೆಳೆಸಿಕೊಂಡು ಇತರರಿಗೆ ಮಾದರಿಯಾಗಿ ಉದಾ: ಕಾರಾಗೃಹದಲ್ಲಿ ಹಮ್ಮಿಕೊಳ್ಳುವ ವಿವಿಧ ರೀತಿಯ ಕೌಶ್ಯಲ್ಯ ತರಬೇತಿಗಳು ಹಾಗೂ ಶಿಕ್ಷಣವನ್ನು ಪಡೆದು ತಾವುಗಳು ಸ್ವಾವಲಂಭಿ ಬದುಕಿಗೆ ದಾರಿ ದೀಪವನ್ನಾಗಿ ಮಾಡಿಕೊಂಡು ತಮ್ಮ ಕುಟುಂಬ ಮತ್ತು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕಾಗಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಈ ಸಂಸ್ಥೆಯ ವೈದ್ಯಾಧಿಕಾರಿಗಳಾದ ಡಾ. ಅಣ್ಣಾರಾವ್, ಡಾ. ರಾಹುಲ್ ಸಂಸ್ಥೆಯ ಸಹಾಯಕ ಅಧಿಕ್ಷಕರಾದ ಹುಸೇನಿ ಪೀರ್ ಮತ್ತು ಸಹಾಯಕ ಆಡಳಿತಾಧಿಕಾರಿಗಳಾದ ಭೀಮಾಶಂಕರ್ ಡಾಂಗೆ, ಕಛೇರಿ ಅಧೀಕ್ಷಕರಾದ ಗುರುಶೇಶ್ವರ ಶಾಸ್ತ್ರಿ ಮತ್ತು ಜೈಲರ್‍ಗಳಾದ ಸುನಂದ ವಿ., ಪರಮಾನಂದ ಹರವಾಳ, ಸಾಗರ ಪಾಟೀಲ ಹಾಗೂ ಕಾರಾಗೃಹದ ಅಧಿಕಾರಿ/ಸಿಬ್ಬಂದಿ ವೃಂದದವರು ಭಾಗವಹಿಸಿದರು.

ಕಾರ್ಯಕ್ರಮದ ಸ್ವಾಗತ ಮತ್ತು ವಂದನಾರ್ಪಣೆಯನ್ನು ಸಂಸ್ಥೆಯ ಸಹಾಯಕ ಅಧೀಕ್ಷಕರಾದ ಬಿ. ಸುರೇಶ ನಡೆಸಿಕೊಟ್ಟರು. ನಿರೂಪಣೆಯನ್ನು ಈ ಸಂಸ್ಥೆಯ ಶಿಕ್ಷಕರಾದ ಶ್ರೀ ನಾಗರಾಜ ಮುಲಗೆ, ನೆರವೇರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಬಂದಿಗಳಿಂದ ವಿವಿಧ ದೇಶ ಭಕ್ತಿ ಗೀತೆಗಳನ್ನು ಹಾಡಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here