ಹೋರಾಟದ ಭಾಗವಾಗಿ ಸ್ಥಾಪನೆಯಾದ ಕಂಪನಿ ಮುಚ್ಚುವಂತೆ ಆದೇಶಿದ್ದು ಖಂಡನೀಯ

0
17

ಸೇಡಂ: ಚಿಂಚೋಳೀ ಪಟ್ಟಣದ ಹೊರ ವಲಯದಲ್ಲಿರುವ ಸಿದ್ಧಸಿರಿ ಎಥೆನಾಲ್ ಹಾಗೂ ಪವರ್ ಘಟಕ ಬಂದ್ ಮಾಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಜಾರಿ ಮಾಡಿದ ನೋಟಿಸ್ ನಿಂದ ಕಲಬುತಗಿ ಜಿಲ್ಲೆಯ ಕಬ್ಬು ಬೆಳೆಗಾರರಲ್ಲಿ ತಲ್ಲಣ ಸೃಷ್ಟಿಯಾಗಿದೆ ಎಂದು ಸೇಡಂ ಮತಕ್ಷೇತ್ರದ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು ‘ಇದೊಂದು ರಾಜಕೀಯ ಸೇಡಿನ ಕ್ರಮವಾಗಿದ್ದಲ್ಲದೇ ರೈತ ವಿರೋಧಿ ನೀತಿ ಹಿಂದುಳಿದ ತಾಲ್ಲೂಕಿನ ಅಭಿವೃದ್ಧಿ ವಿರೋಧಿ ಕ್ರಮವಾಗಿದೆ, ಸರ್ಕಾರ ಯಾವುದೇ ಇರಲಿ ರೈತರ ಬದುಕಿನೊಂದಿಗೆ ಚೆಲ್ಲಾಟವಾಡಬಾರದು. ಈ ಕಾರ್ಖಾನೆ ಪ್ರಾರಂಭಕ್ಕೆ ತಾಲೂಕಿನ ರೈತರ ಹೋರಾಟದ ಭಾಗವಾಗಿ ಸ್ಥಾಪನೆಯಾದ ಕಂಪನಿ ಮುಚ್ಚುವಂತೆ ಆದೇಶಿದ್ದು ಖಂಡನೀಯ ‘ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ಮುಚ್ಚಿದ ಕಂಪನಿ ಪ್ರಾರಂಭಿಸಿ ಹಂಚಿಕೆಯಾದ ಗ್ರಾಮಗಳಲ್ಲಿನ ಕಬ್ಬು ಕಾರ್ಖಾನೆಗೆ ಸಾಗಿಸಿ ಕಾಲಮಿತಿಯಲ್ಲಿ ರೈತರಿಗೆ ಕಬ್ಬಿನ ಹಣ ಪಾವತಿಯಾಗುವಂತೆ ಕ್ರಮ ಕೈಗೊಳ್ಳಬೇಕು ಕಂಪನಿ ಬಂದ್ ಮಾಡಿದ ಸರ್ಕಾರದ ಕ್ರಮ ಸರಿಯಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Contact Your\'s Advertisement; 9902492681

ಕಾನೂನಿನ ದೃಷ್ಟಿಯಿಂದ ಇದನ್ನು ನೋಡದೇ ರೈತರ ಹಿತದೃಷ್ಟಿಯಿಂದ ನೋಡಬೇಕು. ಕಂಪನಿ ಬಂದ್ ಮಾಡಿದ್ದು ಸರಿಯಲ್ಲ’ ಕಲಬುರಗಿ ಜಿಲ್ಲೆಯಲ್ಲಿ ಅನೇಕ ಸಿಮೆಂಟ್ ಕಾರ್ಖಾನೆಗಳಿವೆ ಆ ಕಾರ್ಖಾನೆಗಳಿಂದಲೂ ಅನೇಕ ತ್ಯಾಜಾ ವಸ್ತು ನದಿಗೆ ಬೀಡಲಾಗುತ್ತಿದೆ , ಇದರಿಂದಲ್ಲೂ ಪರಿಸರ ಹಾಳಾಗುತ್ತಿದೆ ಆದಕಾರಣ ಅವುಗಳನ್ನೂ ಕೂಡ ಪರಿಶೀಲಿಸಬೇಕು ಪ್ರತಿಯೊಬ್ಬರಿಗೂ ಒಂದೆ ಕಾನೂನು ಇರಬೇಕು . ಕೂಡಲೇ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಜಿಲ್ಲೆಯ ರೈತರೊಂದಿಗೆ ಕಲಬುರಗಿ ಜಿಲ್ಲಾಧಿಕಾರಿ ಕಛೇರಿಮುಂದೆ ಬೃಹತ ಪ್ರತಿಭಟನೆ ಹಮ್ಮಿಕೋಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here