ಶ್ರೀಜನನಿ ಪಿಯು ಕಾಲೇಜ್:ವಾರ್ಷಿಕ ಸ್ನೇಹ ಸಮ್ಮೇಳನ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

0
18

ಸುರಪುರ: ನಗರದ ಶ್ರೀಜನನಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯರಿಗೆ ಬೀಳ್ಕ್ಕೊಡುಗೆ ಸಮಾರಂಭ ನಡೆಸಲಾಯಿತು.

ಈ ಕಾರ್ಯಕ್ರವನ್ನು ಉದ್ಘಾಟಿಸಿದ ಶ್ರೀಪ್ರಭು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ ಮಾಲಿಪಾಟೀಲ್ ಮಾತನಾಡಿ, ಪ್ರಥಮ ವಾರ್ಷಿಕ ಸ್ನೇಹ ಸಮ್ಮೇಳನಲ್ಲಿ ಹೊರ ಹೋಗುತ್ತಿರುವ ವಿದ್ಯಾರ್ಥಿನಿಯರು ಮುಂದೊಂದು ದಿನ ಇತಿಹಾಸವಾಗುತ್ತಾರೆ ನೀವು ಈ ಕಾಲೇಜಿನಿಂದ ಕಲಿತ ಸಂಸ್ಕøತಿ ಭವ್ಯ ಭಾರತದ ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗುತ್ತದೆ ಈ ಕಾಲೇಜಿನಲ್ಲಿ ಕೇವಲ ವಿದ್ಯಾಭ್ಯಾಸವನ್ನು ಮಾತ್ರ ಕಲಿಸದೆ ಅನೇಕ ಮಾನವೀಯ ಅಂಶಗಳನ್ನು ಭಾವನಾತ್ಮಕ ಅಂಶಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿ ಅವರನ್ನು ಭಾವನಾಜೀವಿಗಳನ್ನಾಗಿಸಿದ ಉಪನ್ಯಾಸಕರ ಸೇವೆಯನ್ನು ಶ್ಲಾಘಿಸಿದರು.

Contact Your\'s Advertisement; 9902492681

ಸಂಸ್ಥೆಯ ಕಾರ್ಯದರ್ಶಿ ಡಾ. ಆದಿಶೇಷ ನೀಲಗಾರ ಪ್ರಾಸ್ರವಿಕವಾಗಿ ಮಾತನಾಡಿ, ಕೇವಲ ಎರಡು ವರ್ಷದಲ್ಲಿ ನಮ್ಮ ಕಾಲೇಜು ಸಾಧಿಸಿದ ಪ್ರಗತಿಯನ್ನು ಪ್ರಶಂಸಿ ಈ ಮಟ್ಟಕ್ಕೆ ಕಾಲೇಜು ಪ್ರಗತಿ ಹೊಂದಲು ಕಾರಣೀಭೂತರಾದ ಉಪನ್ಯಾಸಕವರ್ಗಕ್ಕೆÀ ಕೃತಜ್ಞತೆಯನ್ನು ಸಲ್ಲಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಕಾಲೇಜಿಗೆ ಇನ್ನೂ ಅವಶ್ಯಕವಿರುವ ಮೂಲಭೂತ ಸೌಲಭವನ್ನು ನೀಡುವುದಾಗಿ ಭರವಸೆ ನೀಡಿದರು.

ಈ ಕಾರ್ಯಕ್ರಮದಗಿ ಮುಖ್ಯ ಅತಿಥಿಗಳಾಗಿ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶರಣು ನಾಯಕ ಸುರಪುರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ತಿರುಪತಿ ಕೆಂಭಾವಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಂದ ವಿವಿಧ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು, ಉಪನ್ಯಾಸಕರಾದ ಅಂಬ್ರೇಶ ಚಿಲ್ಲಾಳ, ವೆಂಕಟೇಶ ಜಾಲಗಾರ, ನಬಿಸಾಬ ನಾಯ್ಕೋಡಿ, ಹಣಮಂತ್ರಾಯಗೌಡ, ಬೀರಲಿಂಗ ದೇವತ್ಕಲ, ಚಂದ್ರಶೇಖರ ನಾಯಕ, ಚಂದ್ರಶೇಖರ, ಮಹೇಶಕುಮಾರ ಗಂಜಿ, ಬಸವರಾಜೇಶ್ವರಿ ಗಂಟಿ, ಶ್ರೀದೇವಿ ನಾಯಕ, ನಂದಿನಿ ಅಸಗಳ್ಳಿ, ಪ್ರಿಯಾ, ಜ್ಯೋತಿ, ಶೋಭಾ, ಶಿವಕುಮಾರ ಕ್ವಾಟಿ, ಹಾಗೂ ಪ್ರಥಮ ದರ್ಜೆ ಸಹಂiÀiಕರಾದ ಹುಲಗಮ್ಮ ಮುಂತಾದವರು ಪಾಲ್ಗೂಂಡಿದ್ದರು, ಮೀನಾಕ್ಷಿ ಮತ್ತು ಕನಕಮ್ಮ ಕಾರ್ಯಕ್ರಮವನ್ನು ನಿರ್ವಹಿಸಿದರು, ಪಲ್ಲವಿ ಸ್ವಾಗತಿಸಿದರು, ಬಸಮ್ಮ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here