ವಿದ್ಯಾರ್ಥಿಗಳು ಮತ್ತು ಯುವಕರ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ದ; ಸಚಿವ ಶರಣಪ್ರಕಾಶ್ ಪಾಟೀಲ್

0
14
  • ಪ್ರತಿಯೊಬ್ಬರಿಗೂ ಉದ್ಯೋಗ ಒದಗಿಸುವುದು ಸವಾಲಿನ ಕೆಲಸ

  • ಪ್ರತಿಯೊಬ್ಬರ ಸ್ವಾವಲಂಬನೆಗೆ ಸರ್ಕಾರದಿಂದ ಪ್ರಾಮಾಣೀಕ ಪ್ರಯತ್ನ

ಬೆಂಗಳೂರು; ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಉತ್ತಮ ಭವಿಷ್ಯ ರೂಪಿಸಿ ಅವರಿಗೆ ಉದ್ಯೋಗ ಅವಕಾಶಗಳನ್ನು ಒದಗಿಸಿಕೊಡಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಕೌಶಲ್ಯಾಭಿವೃದ್ದಿ, ಜೀವನೋಪಾಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ(ಎಪ್ ಕೆಸಿಸಿಐ) ಸಹಭಾಗಿತ್ವದಲ್ಲಿ ನಡೆದ ಉದ್ಯಮಶೀಲತೆ ಅಭಿವೃದ್ಧಿ ವಿಚಾರಣಾ ಸಂಕೀರ್ಣ ಉದ್ಘಾಟಿಸಿ ಸಚಿವರು ಮಾತನಾಡಿದರು.

Contact Your\'s Advertisement; 9902492681

ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಅವರ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಉದ್ಯೋಗ ಒದಗಿಸಿಕೊಡುವುದು ಯಾವುದೇ ಸರ್ಕಾರಕ್ಕೂ ಸವಾಲಿನ ಕೆಲಸ. 130 ಕೋಟಿ ಜನಸಂಖ್ಯ ಇರುವ ಭಾರತದಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ನೀಡುವುದು ಅಷ್ಟು ಸುಲಭವಲ್ಲ ಎಂದು ಪಾಟೀಲ್ ಅಭಿಪ್ರಾಯಪಟ್ಟರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರತಿಯೊಬ್ಬರನ್ನು ಸ್ವಾವಲಂಬಿಯಾಗಿಸಲು ವಿಶೇಷ ಗಮನಹರಿಸಿದ್ದೇವೆ‌ಇದಕ್ಕಾಗಿ ಯುವನಿಧಿ ಎಂಬ ವಿಶೇಷ ಯೋಜನೆಯನ್ನು ಅನುಷ್ಠಾನ ಮಾಡಿದ್ದೇವೆ. ಇದು ಹೊಸ ಕ್ರಾಂತಿಯನ್ನು ಸೃಷ್ಟಿಸಲಿದೆ ಎಂಬ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದರು.

ಪದವಿ ಮುಗಿಸಿದವರಿಗೆ ಪ್ರತಿ ತಿಂಗಳು 3 ಸಾವಿರ ಹಾಗೂ ಡಿಪ್ಲೊಮಾಚಮುಗಿಸಿದವರಿಗೆ 1.5 ಸಾವಿರ ಆರ್ಥಿಕ ನೆರವು ನೀಡುವ ಯೋಜನೆ ಇದಾಗಿದೆ. ಈಗಾಗಲೇ ಯೋಜನೆ ಅನುಷ್ಠಾನಗೊಂಡಿದ್ದು, ರಾಜ್ಯಾಧ್ಯಂತ ನಿರೀಕ್ಷೆಗೂ ಮೀರಿದ ಅರ್ಹ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇದು ನಮ್ಮ ಸರ್ಕಾರದ ಬದ್ದತೆ ಎಂದರು.

ಕರ್ನಾಟಕ ಅಭಿವೃದ್ದಿಶೀಲ ರಾಜ್ಯವಾಗಿದೆ. ಕೇಂದ್ರಕ್ಕೆ ಹೆಚ್ಚು ತೆರಿಗೆ ನೀಡುವ ಕೆಲವೇ ರಾಜ್ಯಗಳಲ್ಲಿ ನಮ್ಮ ರಾಜ್ಯವೂ ಒಂದು. ಇಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಾಲೇಜುಗಳಿವೆ. ಅಂತಾರಾಷ್ಟ್ರೀಯ ಮಟ್ಟದ ಮೂಲಭೂತ ಸೌಕರ್ಯಗಳು, ಅತ್ಯುತ್ತಮ ಶಿಕ್ಷಣ ಸಿಗುತ್ತದೆ. ಹೀಗಾಗಿ ಇಡೀ ದೇಶವೇ ನಮ್ಮ ಕಡೆ ನೋಡುತ್ತದೆ ಎಂದರು.

ಇಂದು ಕರ್ನಾಟಕವನ್ನು ನವೋದ್ಯಮದ ರಾಜಧಾನಿ ಎಂದು ಕರೆಯುತ್ತಾರೆ. ಏಕೆಂದರೆ ಪ್ರತಿದಿನ ಇಲ್ಲಿ ಒಂದಿಲ್ಲೊಂದು ಐಟಿಬಿಟಿ ಸೇರಿದಂತೆ ವಿವಿಧ ವಲಯಗಳ ಕಂಪನಿಗಳು ಪ್ರಾರಂಭವಾಗುತ್ತವೆ. ಸರ್ಕಾರ ಉದ್ಯಮಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುತ್ತದೆ. ಉದ್ಯಮಿಗಳು ಉದ್ಯೋಗ ನೀಡುವುದರ ಜೊತೆಗೆ ಉದ್ಯಮಿಯಾಗುವಂತೆ ಪೆÇ್ರೀತ್ಸಾಹಿಸುವ ಅಗತ್ಯವಿದೆ ಎಂದು ಶರಣಪ್ರಕಾಶ್ ಪಾಟೀಲ್ ಅಭಿಪ್ರಾಯಪಟ್ಟರು.

ಪ್ರತಿ ವರ್ಷ ಎಂಜಿನಿಯರಿಂಗ್ ಪದವಿ ಮುಗಿಸಿದವರಿಗೆ ಶೇ.20ರಷ್ಟು ಉದ್ಯೋಗಗಳು ಲಭಿಸುತ್ತವೆ. ಆದರೆ ಕಲೆ, ವಿಜ್ಞಾನ, ಡಿಪ್ಲೊಮಾ, ಐಟಿಐ, ಸೇರಿದಂತೆ ಇತರೆ ಕೋಸ್ ಮುಗಿಸಿದವರಿಗೆ ಶೇ. 10ರಿಂದ 15ರಷ್ಟು ಉದ್ಯೋಗ ಸಿಗುತ್ತದೆ. ಎಪ್ ಕೆಸಿಸಿಐ ಇದಕ್ಕೆ ಪರ್ಯಾಯ ಚಿಂತನೆಗಳನ್ನು ನಡೆಸಬೇಕೆಂದು ಸಲಹೆ ಮಾಡಿದರು.

ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಉದ್ಯೋಗ, ಉದ್ಯೋಗಕ್ಕೆ ಬೇಕಾದ ತರಬೇತಿ, ತರಬೇತಿ ನೀಡುವ ಸಿಬ್ಬಂದಿ ಒದಗಿಸಲು ಕೌಶಲ್ಯಾಭಿವೃದ್ದಿ ಇಲಾಖೆ ಪ್ರಮಾಣಿಕ ಪ್ರಯತ್ನ ಮಾಡುತ್ತದೆ. ಇದಕ್ಕಾಗಿ ನಾವು ಕೌಶಲ್ಯ ಕೌನ್ಸಿಲ್ ಪ್ರಾರಂಭಿಸಿದ್ದೇವೆ. ಇದರಡಿ ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ಒದಗಲಿದೆ. ಪ್ರತಿಯೊಬ್ಬರು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಚಿವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಎïಕೆಸಿಸಿಐನ ಅಧ್ಯಕ್ಷ ಅರ್ ಸಿ ಲಾಹೋಟಿ ಉಪಾಧ್ಯಕ್ಷರಾದ ಎಂ.ಜಿ.ಬಾಲಕೃಷ್ಣ, ಉಮಾ ರೆಡ್ಡಿ, ಸಮಾಜ ಕಲ್ಯಾಣ ಮತ್ತು ಉದ್ಯೋಗ ಸಮಿತಿ ಅಧ್ಯಕ್ಷ ಪೆರುಮಾಳ್.ಸಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here