ಕಲಬುರಗಿ: ಭಾರತೀಯ ಆಹಾರ ವಿಜ್ಞಾನ ಸಂಘ- ಕಲಬುರಗಿ ಅಧ್ಯಾಯದ 34 ನೇ ವಾರ್ಷಿಕ ಸಮ್ಮೇಳನವನ್ನು ಶ್ರೀಮತಿ ವೀರಮ್ಮ ಗಂಗಾಸಿರಿ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಹೇಮಾ ಸಿಂಹಾಸನೆ ಅವರು, ಬಂಜೇತನ, ಕ್ಯಾನ್ಸರ್ ಹಾಗೂ ಬದಲಾದ ಆಹಾರ ಪದ್ದತಿ ಬಗ್ಗೆ ಮಾತನಾಡಿದರು. ಮತ್ತು ಭಾರತದಲ್ಲಿ ಬಂಜೇತನ ಶೇಕಡ 40% ಪ್ರತಿಶತ ಏರಿರುವಬಗ್ಗೆ ಕಳವಳ ವ್ಯಕ್ತಪಡಿಸಿದರು.
ಭಾರತೀಯ ಆಹಾರ ವಿಜ್ಞಾನ ಸಂಘದ ಆಜೀವ ಸದಸ್ಯರು ಆದ ಡಾ: ಶೀಲಾ ಸಿದ್ದರಾಮ ಅವರು ಕಲಬುರಗಿ ಅಧ್ಯಯನ ಬೆಳವಣಿಗೆ ಮತ್ತು ಅಭಿವೃದ್ದಿಯಲ್ಲಿ ಶ್ರಮಿಸಿದ ಎಲ್ಲರಿಗೂ ಗೌರವ ಪೂರ್ವಕ ಶ್ರದ್ಧಾಂಜಲಿ ಅರ್ಪಿಸಿದರ.
ಭಾರತೀಯ ಆಹಾರ ವಿಜ್ಞಾನ ಸಂಘದ ಸಂಚಾಲಕರು ಆದ ಶ್ರೀಮತಿ ವಿಶಾಖಾ ವರದಾಪಾಂಡೆ ಸಂಘದ ವಾರ್ಷಿಕ ವರದಿಯನ್ನು ಹಾಗೂ ಇದರ ಅಡಿಯಲ್ಲಿ ಹಮ್ಮಿಕೊಳ್ಳಲಾದ ಅನೇಕ ಚಟುವಟಿಕೆಗಳ ಕುರಿತು ವಿವರಣೆ ನೀಡಿದರು ಮತ್ತು ಶ್ರೀಮತಿ ರೇಖಾ ಡಿ ಟಿ ಅವರನ್ನು ಮುಂದಿನ ಸಂಚಾಲಕರಾಗಿ ನೇಮಿಸಿದರು.
ಈ ಸಂದರ್ಭದಲ್ಲಿ ಡಾ. ಅರುಂಧತಿ ಪಾಟೀಲ ಅವರು ಸಿರಿಧಾನ್ಯಗಳ ಕುರಿತು ಕವನವನ್ನು ಓದಿದರೂ ಹಾಗೂ ಆಹಾರ ಪದ್ಧತಿಯ ಬಗ್ಗೆ ವಿವರವಾಗಿ ಮಾತನಾಡಿದರು. ಕಾಲೇಜಿನ ಉಪ ಪ್ರಾಚಾರ್ಯರು ಆದ ಡಾ. ವೀಣಾ. ಹೆಚ್ ಅವರು ತಯಿಯ ಹಾಲಿನ ಮಹತ್ವ ತಿಳಿಸುವ ಹಾಡನ್ನು ಹಾಡಿದರು.
ಕಾಲೇಜಿನ ಪ್ರಾಚಾರ್ಯರು ಆದ ಡಾ. ರಾಜೇಂದ್ರ ಕೊಂಡಾ ಅಧ್ಯಕ್ಷೀಯ ಮಾತನ್ನಾಡುತ್ತ ಕಾರ್ಯಕ್ರಮದ ಕುರಿತು ಹರ್ಷ ವ್ಯಕ್ತ ಪಡಿಸಿದರು.
ರೇಖಾ ಡಿ ಟಿ ಅವರು ಅಥಿತಿಗಳನ್ನು ಪರಿಚಯಿಸಿದರು, ಡಾ. ರೇಣುಕಾ ಹಾಗರಗುಂಡಗಿ ಹಾಗೂ ತಂಡದವರು ವಂದೇ ಮಾತರಂ ಗೀತೆ ಯನ್ನು ಹಾಡಿದರು. ಕು. ಪಲ್ಲವಿ ಕನಾಟೆ ಕಾರ್ಯಕ್ರಮವನ್ನೂ ನಿರೂಪಿಸಿದರು, ಡಾ. ಶೀಲಾ ತುಪ್ಪದ ವಂದನಾರ್ಪೆಯನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಭಾರತೀಯ ಆಹಾರ ವಿಜ್ಞಾನ ಸಂಘ- ಕಲಬುರಗಿ ಅಧ್ಯಾಯದ ಸದಸ್ಯರು, ನಿವೃತ್ತ ಹೊಂದಿದ ಬೋಧಕ ಸಿಬ್ಬಂದಿಗಳು, ಕಾಲೇಜಿನ ಬೋಧಕ, ಬೋಧಕೇತರ ಮತ್ತು ವಿದ್ಯಾರ್ಥಿಗಳು ಉಪಸ್ತಿತರಿದ್ದರು.