ಮಾನವ ಮಾನವನನ್ನು ದೂರೀಕರಿಸುವ ಹುನ್ನಾರ: ವಿವಿ ಕುಲಪತಿ ಪ್ರೊ.ಎಸ್.ಪಿ.ಮೇಲ್ಕೇರಿ

0
92

ಕಲಬುರಗಿ: ಮಾನವ ಮಾನವನನ್ನು ದೂರೀಕರಿಸುವ ಹುನ್ನಾರ ನಡೆಯುತ್ತಿದೆ. ನಿಜವಾದ ಇತಿಹಾಸವನ್ನು ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ತಿಳಿಸಿ ಸರಿ ಮಾಡಬೇಕಿದೆ ಎಂದು ಕಲಬುರಗಿ ವಿವಿ ಕುಲಪತಿ ಪ್ರೊ.ಎಸ್.ಪಿ.ಮೇಲ್ಕೇರಿ ಅಭಿಪ್ರಾಯಪಟ್ಟಿದ್ದಾರೆ.

ರವಿವಾರದಂದು ನಗರದಲ್ಲಿ ನಡೆದ ಎಸ್ಎಫ್ಐ ರಾಜ್ಯ ಅಧ್ಯಯನ ಶಿಬಿರದ ಅಧ್ಯಯನ ಶಿಬಿರದಲ್ಲಿ ಅವರು ಮಾತನಾಡಿದರು. ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ದೈವೀಕರಿಸಿ ಮನುಷ್ಯ ಮನುಷ್ಯನನ್ನು ದೂರೀಕರಿಸುವ ಪ್ರಯತ್ನ ನಡೆಯುತ್ತಿದೆ. ಗ್ರಾಮೀಣ ಭಾರತದ ಬದುಕನ್ನು ರೂಪಿಸುವ ನೀತಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಇಲ್ಲ. ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ಶಿಕ್ಷಕರಿಲ್ಲ, ಮೂಲಭೂತ ಸೌಕರ್ಯಗಳಿಲ್ಲ, ಇಂಟರ್ನೆಟ್ ಇಲ್ಲ, ರಸ್ತೆ, ಸಾರಿಗೆ ಇಲ್ಲ. ಇವುಗಳ ಬಗ್ಗೆ ಆಳುವ ವರ್ಗ ವ್ಯವಸ್ಥಿತವಾಗಿ ನಿರ್ಲಕ್ಷ್ಯಿಸಲಾಗಿದೆ ಎಂದು ಆರೋಪಿಸಿದರು.

Contact Your\'s Advertisement; 9902492681

ಶೋಷಿತರನ್ನು ಮೇಲೆತ್ತುವುದಕ್ಕಾಗಿ ಮೀಸಲಾತಿ ನೀಡಲಾಗುತ್ತಿದೆ. ಇನ್ನೂ ನಮ್ಮಲ್ಲಿ ಜಾತಿಯತೆ, ಅಸ್ಪೃಶ್ಯತೆ, ಅಸಮಾನತೆ ಇದೆ. ಇಲ್ಲಿಯವರೆಗೂ ಅದನ್ನು ಸಂಪೂರ್ಣವಾಗಿ ತೊಡೆದು ಹಾಕಲು ಹಾಗಿಲ್ಲ. ಇದಕ್ಕೆ ಕಾರಣ ನಾವು ಪಡೆಯುತ್ತಿರುವ ಶಿಕ್ಷಣ ಪಿಉರಕವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮೌಲ್ಯಯುತ ಶಿಕ್ಷಣ ಎಲ್ಲೂ ಕಳೆದಿಲ್ಲ. ಬದಲಾಗಿ ನಾವು ನಡೆದಾಡುವ ದಾರಿಯಲ್ಲಿ ಅದನ್ನು ಕಳೆದುಕೊಂಡಿದ್ದೇವೆ. ನಮ್ಮ ಆಶಯಗಳನ್ನು ಕಾಪಾಡುವವರು ಯಾರು ಅನ್ನೋದನ್ನು ನಾವು ಯೋಚಿಸಬೇಕಿದೆ ಎಂದರು.

ಸಂಸ್ಕೃತ ವನ್ನು ಇಂದು ವಿಜ್ಞಾನ ಎಂದು ಪರಿಗಣಿಸಲು ಹೇಳಲಾಗುತ್ತಿದೆ. ಇದನ್ನು ನಾವು ಘಟ್ಟಿಯಾಗಿ ತಿರಸ್ಕರಿಸಬೇಕಿದೆ. ಸಂವಿಧಾನವನ್ನು ಓದಿದಾಗ ಮಾತ್ರ ತನ್ನ ಹಕ್ಕುಗಳ ಬಗ್ಗೆ ಮಾತನಾಡಬಹುದು ಎಂದರು. ರಾಜ್ಯ ಅಂಗನವಾಡಿ ನೌಕರರ ಸಂಘಟನೆ ರಾಜ್ಯ ಮುಖಂಡೆ ಗೌರಮ್ಮ ಪಾಟೀಲ್ ಮಾತನಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕದ ಪ್ರಾಂತ ರೈತ ಸಂಘಟನೆ ಜಿಲ್ಲಾಧ್ಯಕ್ಷ ಶರಣಪ್ಪ ಮಮಶೆಟ್ಟಿ, ಕಾರ್ಯದರ್ಶಿ ಅಶೋಕ್ ಮ್ಯಾಗೇರಿ, ಸಿಐಟಿಯುನ ಕೃಷ್ಣ, ಪಾಂಡುರಂಗ, ಅಸ್ಪಕ್, ಸುದಾಮ್ ದನ್ನಿ, ಪೌರ ಕಾರ್ಮಿಕ ಸಂಘಟನೆಯ ಚಿತ್ರಾಬಾಯಿ, ಎಸ್ಎಫ್ಐ ರಾಜ್ಯಾಧ್ಯಕ್ಷ ವಿ.ಅಮರೇಶ್, ಕಾರ್ಯದರ್ಶಿ ಗುರುರಾಜ್ ದೇಸಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here