6ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಯಲ್ಲಿ ದಲಿತ, ಮುಸ್ಲಿಮರ ಬಗ್ಗೆ ಅಸಹ್ಯಕಾರಿ ಪ್ರಶ್ನೆ.!

0
514

ಚೆನ್ನೈ: ಭಾರತದಲ್ಲಿ ಜಾತಿಯ ಮದ ಯಾವ ಮಟ್ಟಕ್ಕೆ ಏರಿದೆ ಎನ್ನುವುದು ಈವರದಿಯಿಂದ ತಿಳಿದುಕೊಳ್ಳಬಹುದು. ಶಾಲಾ ಮಕ್ಕಳಲ್ಲೂ ಜಾತಿಯ ವಿಷ ಬೀಜವನ್ನು ಬಿತ್ತುವ ವ್ಯವಸ್ಥಿತ ಷಡ್ಯಂತ್ರ ನಡೆದಿದ್ದು, ತಮಿಳುನಾಡಿನಲ್ಲಿ ಕೇಂದ್ರ ಸರಕಾರ ನಡೆಸುವ ಶಾಲಾ ಪರೀಕ್ಷೆಯಲ್ಲಿ ಜಾತಿ, ಧರ್ಮಗಳ ಬಗ್ಗೆ ಅವಮಾನಕರ ಪ್ರಶ್ನೆಗಳನ್ನು ಕೇಳಲಾಗಿದ್ದು, ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಕೇಂದ್ರೀಯ ವಿಶ್ವವಿದ್ಯಾಲಯದ 6ನೇ ತರಗತಿಯ ಮಕ್ಕಳಿಗೆ ಕೇಳಲಾಗಿರುವ ಪ್ರಶ್ನೆಗಳನ್ನು ಗಮನಿಸಿದರೆ ನೀವು ಅಸಹ್ಯಪಡುತ್ತೀರಿ. ಇಂತಹ ಪ್ರಶ್ನೆಗಳನ್ನು ಕೇಳ ಬೇಕಾದರೆ, ಪ್ರಶ್ನೆ ಪತ್ರಿಕೆ ತಯಾರು ಮಾಡಿರುವ ವ್ಯಕ್ತಿಯ ಮಾನಸಿಕ ಸ್ಥಿತಿ ಯಾವ ರೀತಿಯಲ್ಲಿರಬಹುದು ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇಂತಹ ಪ್ರಶ್ನೆಗಳಿಂದ ಮಕ್ಕಳ ಮನಸ್ಸಿಗೆ ಜಾತಿ ಮತ್ತು ಧರ್ಮದ ಅಸಹ್ಯ ಸಂಪ್ರದಾಯಗಳನ್ನು ಹೇರುವ ವ್ಯವಸ್ಥಿತ ಕೆಲಸ ಇದು ಎನ್ನುವ ವಿಮರ್ಶೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿವೆ.

Contact Your\'s Advertisement; 9902492681

ಏನಿದು ಅಸಹ್ಯಕಾರಿ ಪ್ರಶ್ನೆ?

ಕೇಂದ್ರೀಯ ವಿಶ್ವವಿದ್ಯಾಲಯದ 6ನೇ ತರಗತಿಯ ಮಕ್ಕಳಿಗೆ ಕೇಳಲಾಗಿರುವ ಪ್ರಶ್ನೆಯಲ್ಲಿ ದಲಿತರು ಮತ್ತು ಮುಸಲ್ಮಾನರ ಬಗ್ಗೆ ಕೀಳು ಭಾವನೆ ಉಂಟು ಮಾಡುವಂತಹ ಪ್ರಶ್ನೆಗಳನ್ನು ಕೇಳಲಾಗಿದೆ.

  1. ದಲಿತರು ಎಂದರೆ ಯಾರು? ಎನ್ನುವ ಪ್ರಶ್ನೆಯನ್ನು ಕೇಳಲಾಗಿದ್ದು, ಈ ಪ್ರಶ್ನೆಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಈ ಆಯ್ಕೆಗಳು ಹೀಗಿವೆ.                                                      A.ವಿದೇಶಿಯರು B. ಅಸ್ಪೃಶ್ಯರು C. ಮಧ್ಯಮ ವರ್ಗದವರು D. ಮೇಲ್ಜಾತಿಯವರು
  2. ಮತ್ತೊಂದು ಪ್ರಶ್ನೆಯಲ್ಲಿ, ಮುಸಲ್ಮಾನರ ಸಾಮಾನ್ಯ ಗ್ರಹಿಕೆ ಯಾವುದು ? ಎಂದು ಕೇಳಲಾಗಿದೆ. ಇದಕ್ಕೂ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ.

A. ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸದೇ ಇರುವುದು. B. ಅವರು ಶುದ್ಧ ಸಸ್ಯಾಹಾರಿಗಳು C. ರೋಜಾ ಸಮಯದಲ್ಲಿ ಅವರು ನಿದ್ದೆ ಮಾಡುವುದಿಲ್ಲ D. ಎಲ್ಲವೂ ಸರಿಯಾಗಿದೆ.

ಹೀಗೆ ಮುಸಲ್ಮಾನರು ಮತ್ತು ದಲಿತರನ್ನು ಗುರಿ ಮಾಡಿಕೊಂಡು ಅವರ ಬಗ್ಗೆ ಮಕ್ಕಳಲ್ಲಿ ತಪ್ಪು ಕಲ್ಪನೆಗಳು ಬರುವಂತಹ ಪ್ರಶ್ನೆಗಳನ್ನು ಕೇಳಲಾಗಿದೆ. ಈ ಪ್ರಶ್ನೆಗಳು ಮಕ್ಕಳ ಮನಸ್ಸಿನಲ್ಲಿ ಕೆಟ್ಟ ಭಾವನೆಗಳನ್ನು ಉಂಟು ಮಾಡಲಿ ಎನ್ನುವ ಕಾರಣಕ್ಕಾಗಿ ಉದ್ದೇಶ ಪೂರ್ವಕವಾಗಿ ಕೇಳಲಾಗಿರುವಂತೆ ಕಂಡು ಬಂದಿದೆ.

6ನೇ ತರಗತಿಯ ಪುಟ್ಟ ಮಕ್ಕಳಿಗೆ ಸಿಬಿಎಸ್ ಇ ಕೇಳಿರುವ ಪ್ರಶ್ನೆಗಳು ಇಡೀ ದೇಶವೇ ತಲೆ ತಗ್ಗಿಸುವಂತೆ ಮಾಡಿವೆ. ಇದು ದೇಶದಲ್ಲಿ ಈಗ ಬದಲಾಗುತ್ತಿರುವ ಮನಸ್ಥಿತಿಗಳನ್ನು ಮತ್ತೆ ಜಾತಿ ತಾರತಮ್ಯ, ಧರ್ಮ ದ್ವೇಷಗಳಂತಹ ಕೆಟ್ಟ ಸಂಪ್ರದಾಯಗಳನ್ನು ಹುಟ್ಟು ಹಾಕಲು ಕಾರಣವಾಗುತ್ತದೆ. ಚಿಕ್ಕ ಮಕ್ಕಳ ಮನಸ್ಸಿನಲ್ಲಿಯೇ ಇಂತಹದ್ದನ್ನು ತುಂಬುವ ಪ್ರಶ್ನಾ ತಯಾರಿಕೆವವರು ದೇಶದಲ್ಲಿ ಜಾತಿ ಮತ್ತು ಧರ್ಮದ ಅಮಲನ್ನು ಜೀವಂತವಾಗಿರಿಸಲು ವ್ಯವಸ್ಥಿತವಾಗಿ ಪ್ರಯತ್ನಿಸಿರುವುದು ಕಂಡು ಬಂದಿದೆ.

ಪ್ರಶ್ನೆ ಪತ್ರಿಕೆ ಸಮಾಜಿಕ ಜಾಲಾ ತಾಣಗಳಲ್ಲಿ ಭಾರಿ ಟ್ರೋಲ್ ಆಗುತ್ತಿದ್ದು, ಆಕ್ರೋಶ ವ್ಯಕ್ತವಾಗುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here