ಭಗವದ್ಗೀತಾ ಅಭಿಯಾನಕ್ಕೆ ಚಾಲನೆ: ಗೀತಾ ಪಠಣದಿಂದ ಸಮಸ್ಯೆಗಳಿಗೆ ಪರಿಹಾರ: ಪಂ. ಪುರಾಣಿಕ

0
39

ಯಾದಗಿರಿ: ಅಧುನಿಕ ಕಾಲದಲ್ಲೂ ವೇದಗಳು ಪ್ರಸ್ತುತ. ವೇದಗಳಲ್ಲಿನ ಜ್ಞಾನವನ್ನು ಅರಿಯಬೇಕು. ಆದರೆ ಅದನ್ನು ಸಾಮಾನ್ಯ ಜನತೆ ಅರ್ಥಮಾಡಿಕೊಳ್ಳುವುದ ಅಷ್ಟು ಸುಲಬದ ಮಾತಲ್ಲ. ಅದಕ್ಕಾಗಿ ವೇದವ್ಯಾಸರು ಮಾಹಾಭಾರತ ರಚಿಸಿದರು. ಅದಕ್ಕಾಗಿ ಅದನ್ನು ೫ ನೆಯ ವೇದ ಎಂದು ಕರೆಯಲಾಗುತ್ತಿದೆ ಎಂದು ಪಂ. ನರಸಿಂಹಾಚಾರ್ಯ ಪುರಾಣಿಕ ಹೇಳಿದರು.

ಅವರು ಶನಿವಾರ ಸಂಜೆ ನಗರದ ಮಾತಾ ಮಾಣಿಕೇಶ್ವರಿ ಬಡಾವಣೆಯ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ಸೋಂದಾಸ್ವರ್ಣವಲ್ಲಿ ಮಠದ ಭಗವದ್ಗೀತಾ ಅಭಿಯಾನ ಕರ್ನಾಟಕ ಯಾದಗಿರಿ ಘಟಕ ಮತ್ತಿ ಶ್ರೀ ವೀರಾಂಜನೇಯ ದೇವಸ್ಥಾನ ಸಮಿತಿ ಹಮ್ಮಿಕೊಂಡ ಭಗವದ್ಗೀತಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಾಭಾರತದಲ್ಲಿ ಒಂದು ಭಾಗದ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಅರ್ಜುನನ ನೆಪ ಮಾಡಿಕೊಂಡು ೧೮ ಅದ್ಯಾಯಗಳ ಮೂಲಕ ಸಾಮಾನ್ಯ ಜನತೆಗೆ ಹೇಗೆ ಬದಕಬೇಕು ಎಂಬುದನ್ನು ಹೇಳಿಕೊಟ್ಟಿದ್ದಾನೆ. ಅದಕ್ಕಾಗಿ ಗೀತೆ ಹಿಂದುಗಳಿಗೆಲ್ಲ ಒಂದು ಪ್ರಮುಖ ಗ್ರಂಥವಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ದಿನನಿತ್ಯ ಗೀತೆಯ ಒಂದು ಶ್ಲೋಕ ಪಠಣೆ ಮಾಡಿದರೆ ಸಾಕು ನಮ್ಮ ಬದಕು ಪಾವನವಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರ ಮನೆಯಲ್ಲಿ ಗೀತಾ ಪುಸ್ತಕವನ್ನು ಪೂಜಿಸಬೇಕು ಎಂದು ಹೇಳದ ಅವರು, ಕಳೆದ ಮೂರು ವರ್ಷದಿಂದ ಅಭಿಯಾನವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದ ಶ್ಲಾಘನೀಯ ಎಂದರು. ಜಿಲ್ಲಾ ಸಂಚಾಲಕ ಅನಿಲ ದೇಶಪಾಂಡೆ ಅವರು ಪ್ರಾಸ್ತವಿಕವಾಗಿ ಮಾತನಾಡಿ, ಸ್ವರ್ಣವಲ್ಲಿ ಮಠದ ಶ್ರೀಗಳ ಅಕ್ಞಾನುಸಾರ ಜಿಲ್ಲೆಯಲ್ಲಿ ಭಘವದ್ಗೀತಾ ಅಭಿಯಾನ ನಡೆಸುತ್ತಾ ಬರಲಾಗಿದೆ. ಗೀತಾ ಜಯಂತಿಯಂದು ಗೀತಾ ಪಠಣ ಮಾಡುವುದರೊಂದಿಗೆ ಸಮರ್ಪಣೆ ಮಾಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಶ್ರೀರಕ್ಷಾ ಸಂಗೀತಾ ಪಾಠ ಶಾಲೆಯ ಸಂಸ್ಥಾಪಕ ಶರಣಬಸವ ವಠಾರ ಹಾಜರಿದ್ದರು. ಇನ್ನೋರ್ವ ಸಂಚಾಲಕರಾದ ರವೀಂದ್ರ ಕುಲಕರ್ಣಿ ಅವರು ಸ್ವಾಗಿತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಮೂರ್ತಿ ಕುಲಕರ್ಣಿ ವಂದಿಸಿದರು. ಸಂಗೀತ ಪಾಠಶಾಲೆಯ ಮಕ್ಕಳು ಪ್ರಾರ್ಥನ ಗೀತೆಯನ್ನು ಹಾಡಿದರು.

ಕಾರ್ಯಕ್ರಮದಲ್ಲಿ ಬಿಂದುರಾವ ಕುಲಕರ್ಣಿ, ಬಸವರಾಜ ಹೆಡಗಿಮದ್ರಾ, ಶ್ರೀನಿವಾಸ ಕುಲಕರ್ಣಿ, ಭೀಮಶೇನರಾವ ಕುಲಕರ್ಣಿ, ಗುರುನಾಥ ಭಟ್ ಜಹಾಗಿರದಾರ, ರಾಮರಾವ ಕುಲಕರ್ಣಿ, ಸ್ನೇಹಾ ಕುಲಕರ್ಣಿ, ನೇಹಾ ಪಾಟೀಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here