ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎಚ್ ಎಸ್. ಜಂಗೆ ಅವರು ಶ್ರೀಲಂಕಾದ ಸಬ್ರಗಮ್ ವಿಶ್ವವಿದ್ಯಾಲಯದಲ್ಲಿ ನಡೆದ “ಪ್ರಥಮ ಕ್ರೀಡಾ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ” ಸಂಪನ್ಮೂಲ ವ್ಯಕ್ತಿ ಆಗಿ ಭಾಗವಹಿಸಿ ಪ್ರಬಂಧ ಮಂಡನೆ ಮಾಡಿದ್ದಕ್ಕಾಗಿ ಅವರಿಗೆ ಇಂದು ಗುಲ್ಬರ್ಗ ವಿಶ್ವವಿದ್ಯಾಲಯದ 44 ನೇ ಸಂಸ್ಥಾಪನೆ ದಿನದ ಕಾರ್ಯಕ್ರಮದಲ್ಲಿ ಗುಲ್ಬರ್ಗ ವಿವಿ ವಿಶ್ರಾಂತ ಕುಲಪತಿ ಪ್ರೊ, ಎಂ. ಮುನಿಯಮ್ಮ ಅವರು ಸನ್ಮಾನಿಸಿದರು.
ಕುಲಪತಿ ಪ್ರೊ, ದಯಾನಂದ ಅಗಸರ್, ಕುಲಸಚಿವ ಡಾ. ಬಿ ಶರಣಪ್ಪ, ವಿತ್ತಾಧಿಕಾರಿ ಪ್ರೊ, ಲಕ್ಷ್ಮಣ ರಾಜನಳ್ಕರ್, ಇತರರು ಹಾಜರಿದ್ದರು.