ಶಾಸಕರು ನಮ್ಮ ಕುಟುಂಬ ವಿದ್ಯಾರ್ಥಿಗಳ ಏಳಿಗೆಗೆ ಸದಾ ಶ್ರಮಿಸಲಿದೆ
ಸುರಪುರ:ಹಿಂದಿನಿಂದಲೂ ವಿದ್ಯಾರ್ಥಿಗಳ ಏಳಿಗೆಗಾಗಿ ನಮ್ಮ ಶಾಸಕರಾದ ರಾಜಾ ವೆಂಕಟಪ್ಪ ನಾಯಕರು ಹಾಗೂ ನಮ್ಮ ಇಡೀ ಕುಟುಂಬ ಸದಾ ಕಾಲ ಶ್ರಮಿಸುತ್ತದೆ,ಮುಂದೆಯೂ ನಿಮ್ಮ ಜೊತೆಗಿರಲಿದ್ದೇವೆ ಎಂದು ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ ತಿಳಿಸಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಎನ್.ಎಸ್.ಎಸ್,ಕ್ರೀಡೆ,ಸಾಂಸ್ಕøತಿಕ,ರೆಡ್ ರಿಬ್ಬನ್ ಕ್ಲಬ್ ಘಟಕಗಳ ಉದ್ಘಾಟನೆ ಹಾಗೂ ಪ್ರಥಮ ಸೆಮ್ ಸ್ನಾತಕ,ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಮತ್ತು ಅಂತಿಮ ವರ್ಷದ ಸ್ನಾತಕ,ಸ್ನಾತಕೋತ್ತರ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ,ಈಗ ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಸರಕಾರ ಯುವ ನಿಧಿ ಯೋಜನೆ ಜಾರಿಗೆ ತಂದಿದ್ದು,ಪದವಿಧರರು ಹಾಗೂ ಡಿಪ್ಲೋಮಾ ಪಡೆದವರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೋ:ಆನಂದಕುಮಾರ ಜೋಶಿ ವಹಿಸಿ ಮಾತನಾಡಿದರು,ಮುಖ್ಯ ಅತಿಥಿಗಳಾಗಿ ವಿಶ್ರಾಂತ ಪ್ರಾಂಶುಪಾಲರು ಹಾಗೂ ನ್ಯಾಕ್ ಸಲಹೆಗಾರರಾದ ಡಾ:ರಾಘವೇಂದ್ರ ಗುಡಗುಂಟಿ ಭಾಗವಹಿಸಿ ಮಾತನಾಡಿದರು,ವೇದಿಕೆಯಲ್ಲಿ ಶಹಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜ ಪ್ರಾಧ್ಯಾಪಕರಾದ ಪ್ರೋ.ಸಿದ್ದಪ್ಪ ದಿಗ್ಗಿ,ಶೋಭಾ ಎಂ.ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೋ.ರೆಡ್ಡಿ ವಿಶ್ವನಾಥ,ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೋ.ಬಲಭೀಮರಾಯ ದೇಸಾಯಿ,ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಡಾ.ಶಾಜಿಯಾ ಅಂಜುಮ್,ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೋ.ವೆಂಕೋಬ ಬಿರಾದಾರ,ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶರಣಗೌಡ ಪಾಟೀಲ,ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೋ.ಹಣಮಂತ ವಗ್ಗರ್,ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರಮೇಶ ಬಿ.ಶಹಾಪುರಕರ್,ಅಧೀಕ್ಷಕರಾದ ರೂಪಲಕ್ಷ್ಮೀ ಕುಲಕರ್ಣಿ,ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೋ.ದೇವಿಂದ್ರಪ್ಪ ಪಾಟೀಲ್,ಗಣಕವಿಜ್ಞಾನ ವಿಭಾಗ ಮುಖ್ಯಸ್ಥ ಡಾ. ಗುರುರಾಜ ನಾಗಲೀಕರ,ವಾಣಿಜ್ಯಶಾಸ್ತ್ರ ವಿಭಾಗದ ಡಾ:ಪ್ರಮೋದ ಕುಲಕರ್ಣಿ,ಅತಿಥಿ ಉಪನ್ಯಾಸಕರಾದ ದೇವು ಹೆಬ್ಬಾಳ, ಗ್ರಂಥಪಾಲಕರಾದ ಶಶಿಕಲಾ ಎಸ್.ಪಾಟೀಲ್ ಹಾಗೂ ಕಾಲೇಜಿನ ಬೋಧಕ,ಬೋಧಕೇತರ ಸಿಬ್ಬಂದಿ,ವಿದ್ಯಾರ್ಥಿಗಳು ಹಾಗೂ ಕಾಲೇಜು ಅಭಿವೃಧ್ಧಿ ಮಂಡಳಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಅತಿಥಿ ಉಪನ್ಯಾಸಕ ದೇವು ಹೆಬ್ಬಾಳ ನಿರೂಪಿಸಿದರು,ಕನ್ನಡ ವಿಭಾಗದ ಮುಖ್ಯಸ್ಥ ಬಲಭೀಮದೇಸಾಯಿ ಸ್ವಾಗತಿಸಿದರು,ಉಪನ್ಯಾಸಕ ಹಣಮಂತ್ರಾಯ ದೊಡ್ಮನಿ ವಂದಿಸಿದರು.