ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 2024-2025 ನೇ ಸಾಲಿನ ಪತ್ರಕರ್ತರ ಸದಸ್ಯತ್ವ ನವೀಕರಣ ಮತ್ತು ಹೊಸ ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ ತಿಳಿಸಿದ್ದಾರೆ.
ಪತ್ರಕರ್ತರ ಪ್ರಾತಿನಿಧಿಕ ಮತ್ತು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ರಾಜ್ಯದ ಏಕೈಕ ಪತ್ರಕರ್ತರ ಸಂಘಟನೆ ಇದಾಗಿದ್ದು, ಕೆಯುಡಬ್ಲ್ಯೂ ಜೆ ಗೌರವ, ಘನತೆಗೆ ತದ್ವಿರುದ್ಧವಾಗಿ ನಡೆದುಕೊಳ್ಳುವ ಮೂಲಕ ಪರ್ಯಾಯ ಸಂಘಟನೆಯಲ್ಲಿ ಗುರುತಿಸಿಕೊಂಡು ಗೊಂದಲು ಮೂಡಿಸುತ್ತಿರುವವರಿಗೆ ಸದಸ್ಯತ್ವ ನೀಡಲಾಗದು. ಆದ್ದರಿಂದ ಸದಸ್ಯತ್ವ ಪಡೆಯುವಾಗ ಮಾರ್ಗಸೂಚಿಗಳು ಪಾಲಿಸುವುದು ಕಡ್ಡಾಯವಾಗಿದೆ.
ನಗರದಲ್ಲಿರುವ ಪತ್ರಕರ್ತರು ತಮ್ಮ ಸ್ಥಳೀಯ ಸಂಪಾದಕರ ದೃಢಿಕರಣ ಪತ್ರದೊಂದಿಗೆ ಏಕಕಾಲಕ್ಕೆ ಸಲ್ಲಿಸಬೇಕು. ತಾಲೂಕು ಸಂಘಗಳು ಕಾರ್ಯಕಾರಿ ಸಮಿತಿ ಸಭೆ ನಡೆಸಿ ಪಟ್ಟಿ ಸಿದ್ಧಪಡಿಸಿ ಫೆ.೨೦ ರೊಳಗೆ ಅರ್ಜಿಗಳು ಪಡೆದು ಭರ್ತಿ ಮಾಡಿ ಪತ್ರಿಕಾ ಭವನದಲ್ಲಿ ಸಲ್ಲಿಸಬೇಕೆಂದು ಅವರು ಕೋರಿದ್ದಾರೆ.