ಗೋಲ್ಡನ್ ಕೇವ್ ಬುದ್ಧ ವಿಹಾರ ಭಾರತೀಯ ಬೌಧ್ಧ ಮಹಾಸಭಾ ಸಭೆ

0
12

ನಮ್ಮ ಮೇಲೆ ನಿತ್ಯ ಅನ್ಯಾ ದೌರ್ಜನ್ಯ ನಡೆಯುತ್ತಿವೆ

ಸುರಪುರ:ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಮಹಿಳಾ ಬೌದ್ಧ ಪರಿಷತ್ ಹಾಗೂ ಭಾರತೀಯ ಬೌದ್ಧ ಮಹಾಸಭಾ ಯಾದಗಿರಿ ಜಿಲ್ಲೆ ವತಿಯಿಂದ ಸಂವಿಧಾನ ಅರಿವಿನಯಾನ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಾನಿದ್ಯ ವಹಿಸಿದ್ದ ಸಂಘ ಜ್ಯೋತಿ ಭಂತೇಜಿಯವರಿಂದ ಶೀಲವನ್ನು ಪಡೆದುಕೊಳ್ಳುವದರ ಮುಖಾಂತರ ಬುದ್ದ ವಂದನೆಯನ್ನು ಸಲ್ಲಿಸಿ ಸಭೆಯನ್ನು ಪ್ರಾರಂಭಿಸಿಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಭಾರತೀಯ ಬೌಧ್ಧ ಮಹಾಸಭಾದ ಜಿಲ್ಲಾಧ್ಯಕ್ಷ ಮರೆಪ್ಪ ಬುಕ್ಕಲ್ ಮಾತನಾಡಿ, ಭಾರತದಲ್ಲಿ ಸಂವಿಧಾನ ಜಾರಿಯಾಗಿ 75 ವರ್ಷಗಳಾದರು ಇನ್ನು ಶೋಷೀತ ಸಮಾಜದವರು ಡಾ.ಅಂಬೇಡ್ಕರ್ ರವರ ಅನುಯಾಯಿಗಳು ನಾವೂ ಸಂವಿಧಾನವನ್ನು ಅರ್ಥ ಮಾಡಿಕೊಂಡಿಲ್ಲ ಇದರಿಂದ ನಮ್ಮ ಮೆಲೆ ನಿತ್ಯ ಅನ್ಯಾಯಗಳು ದೌರ್ಜನ್ನಯಗಳು ನಡೆಯುತ್ತಿವೆ ಎಂದರು.

Contact Your\'s Advertisement; 9902492681

ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೊಸಮನಿ ಮಾತನಾಡಿ, ನಮ್ಮನ್ನಾಳುವ ಸರಕಾರಗಳು ಸಂವಿಧಾನದ ಒಂದೋಂದು ಪುಟಗಳನ್ನು ತಿರುಚುವ ಮುಖಾಂತರ ಪೆಟ್ಟು ನೀಡುತ್ತಿವೆ, ಆದಕಾರಣ ನಾವೂ ಬುದ್ಧ ಧಮ್ಮವನ್ನು ಅಪ್ಪಿಕೊಳ್ಳದೆ ಅಂಬೇಡ್ಕರ್ ರವರ ಹೋರಾಟ ಮುಂದುವರೆಸುವದು ಕಷ್ಟ ಎಂದರು.

ಸಮಾಜದಲ್ಲಿ ಮಹಿಳೆಯರನ್ನು ಗುರುಯಾಗಿಸಿಕೊಂಡು ಅವರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮುಂದಿನ ತಿಂಗಳು ಮಾರ್ಚ 10 ರಂದು ಕೆಂಬಾವಿಯಲ್ಲಿ ಮಾತೆ ಸಾವಿತ್ರೀ ಭಾಯಿ ಫುಲೇ ಯವರ ಪುಣ್ಯಾನುರಾದ ದಿನದ ಅಂಗವಾಗಿ “ ಸಂವಿಧಾನ ಅರಿವಿನ ಯಾನ ಮಹಿಳಾ ಜಾಗೃತಿ ಕಾರ್ಯಾಕ್ರಮ ವನ್ನು ಆಯೋಜಿಸಲು ಎಲ್ಲರು ಸಲಹೆ ನೀಡಿದ್ದು ಸಭೆಯಲ್ಲಿ ಒಮ್ಮತದಿಂದ ತಿರ್ಮಾನಿಸಲಾಗಿದೆ ಎಂದರು.

ಸಾಹಿತಿ ನೀಲಮ್ಮ ಬಿ ಮಲ್ಲೆ,ಜಿಬಿಟಿ ಟ್ರಸ್ಟ್ಟ್ ಪ್ರಧಾನ ಕಾರ್ಯಾದರ್ಶಿ ರಾಹುಲ್ ಹುಲಿಮನಿ ಮಾತನಾಡಿದರು. ಮಾಳಪ್ಪ ಕಿರದಳ್ಳಿ ಸ್ವಾಗತಿಸಿ ಸಭೆಯನ್ನು ನಿರೂಪಿಸಿದರು, ಸುರೇಶ ಕಾನೆಕರ್, ರಣಧೀರ ಹೊಸಮನಿ, ಕೇಶವ್ ಕಟ್ಟಿಮನಿ, ಹಣಮಂತ ಹಸನಕಲ್, ಮಲ್ಲಿಕಾರ್ಜುನ್ ಕರಡಕಲ್, ಬಸವರಾಜ್ ಮಲ್ಲೆ, ಭಿಮರಾಯ ಸಿಂದಗೇರಿ ಆದಪ್ಪ ಹೊಸಮನಿ, ವೆಂಕಟೇಶ್ವರ ಸುರಪುರ, ಹಣಮಂತ ಬಾಂಬೆ, ಸುರೇಶ ಬೊಮ್ಮನ್, ಚಂದ್ರಶೆಖರ್ ಯಾದಗಿರ, ಶಿವಶಂಕರ ಹೊಸಮನಿ, ಗುರುಲಿಂಗ ಯಾದಗಿರ, ಶರಣಪ್ಪ ತಳವಾರಗೇರಾ, ರಾಜು ಶಖಾಪೂರ, ಡಾ.ಸಂದ್ಯಾ, ನೀಲಮ್ಮ ಮಲ್ಲೆ, ಶರ್ಮಿಳಾ ಕರಡಕಲ್, ಅಶ್ವಿನಿರೆಡ್ಡಿ ಶಿಲ್ಪಾ ಹುಲಿಮನಿ, ಭೀಮಭಾಯಿ ಕಲ್ಲದೇವನಹಳ್ಳಿ, ಸುನಿತಾ ಕಿರದಳ್ಳಿ, ಮಂಜುಳಾ ಸುರಪಿರ, ಶಿವಮೊಗ್ಗೆಮ್ಮ ಹೊಸಮನಿ ಬಸಮ್ಮ ಬೊಮ್ಮನಹಳ್ಳಿ, ಯಲ್ಲಮ್ಮ ತೇಲ್ಕರ್, ಮಲ್ಲಪ್ಪ ತಳವಾರಗೇರಾ, ನಾಗರಾಜ ಬೇವಿನಗೀಡ, ಭೀಮಾಶಂಕರ ಹೊಸಮನಿ, ಹಣಂಂತ ಕೊಡ್ಲಿ, ಭೀಮಣ್ಣ ಬನ್ನೆಟ್ಟಿ, ಹಣಮಂತ ಕೊಡ್ಲಿ, ತಿಮ್ಮಣ್ಣ ಬೇವಿನಾಳ, ಆನಂದ ಕಟ್ಟಿಮನಿ, ಮತ್ತು ಗದಗ ಜಿಲ್ಲೆ , ರಾಯಚೂರ ಜಿಲ್ಲೆ, ಕಲಬುರ್ಗಿ ಜಿಲ್ಲೆಯ ರಾಜ್ಯ ಪಧಾದಿಕಾರಿಗಳು ಜಿಬಿಟಿ ಸದಸ್ಯರುಗಳು ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here