ಕಲಬುರಗಿ: ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಸ್ಟುಡೆಂಟ್ ಎಕ್ಟಿವಿಟಿ ಸೆಂಟರ್‍ನಲ್ಲಿ ಫೆ. 12ರಂದು ಬೆಳಗ್ಗೆ 10 ಗಂಟೆಗೆ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜ್ಯುಕೇಶನ್‍ನ 52ನೇ ವಾರ್ಷಿಕ ಫ್ಯಾಕಲ್ಟಿ ಘಟಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಎಚ್ಕೆಇ ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ತಿಳಿಸಿದರು.
ಸಂಸದ ಡಾ. ಉಮೇಶ ಜಾಧವ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಬೆಳಗಾವಿ, ಗ್ವಾಲಿಯಾರ್, ನವದೆಹಲಿ, ಚನೈ ಸೇರಿದಂತೆ ವಿವಿಧ ವಿವಿಗಳ ಪರಿಣತರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಡಾ. ಭೀಮಾಶಂಕರ ಬಿಲಗುಂದಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಮರು ದಿನ ಫೆ. 13ರಂದು ಬೆಳಗ್ಗೆ 10 ಗಂಟೆಗೆ ಪಿಡಿಎ ಕಾಲೇಜು, ನ್ಯಾಶನಲ್ ಸ್ಕಿಲ್ ಡೆವಲಪ್‍ಮೆಂಟ್ ಮತ್ತು ಎಥ್ನೋಟೆಕ್ ಅಕಾಡೆಮಿ ಸಹಯೋಗದಲ್ಲಿ ಪೂಜ್ಯ ಬಸವರಾಜ ದೊಡ್ಡಪ್ಪ ಅಪ್ಪ ಸೆಂಟರ್ ಫಾರ್ ಫ್ಯೂಚರ್ ಸ್ಕಿಲ್ಸ್ ತರಬೇತಿ ಕೇಂದ್ರದ ಉದ್ಘಾಟನೆ ಸಮಾರಂಭ ನಡೆಯಲಿದ್ದು, ಆದಿ ಚುಂಚನಗಿರಿ ಮಠದ ಜಗದ್ಗುರು ಡಾ. ನಿರ್ಮಲಾನಂದ ಸ್ವಾಮೀಜಿ, ಡಾ. ಪ್ರಕಾಶನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ಸಂಸದ ಭಗವಂತ ಖೂಬಾ ಈ ಕೇಂದ್ರವನ್ನು ಉದ್ಘಾಟಿಸಲಿದ್ದು, ಕೇಂದ್ರ ಸಚಿವ ಸುಭಾಷ ಸರ್ಕಾರ ಮುಖ್ಯ ಅತಿಥಿಗಳಾಗಿ ಭಾಗವಹಿಲಿದ್ದಾರೆ ಎಂದು ತಿಳಿಸಿದರು.
ಐಎಸ್‍ಟಿಇ ಅಧ್ಯಕ್ಷ ಪ್ರತಾಪಸಿನ್ಹ ಕೆ. ದೇಸಾಯಿ, ಎಥೋಟೆಕ್ ಗ್ರೂಪ್ ಆಫ್ ಕಂಪನಿಯ ಚೇರ್‍ಮನ್ ಡಾ. ಕಿರಣ ಕೆ. ರಾಜಣ್ಣ, ಪ್ರಾಚಾರ್ಯ ಡಾ. ಶಶಿಕಾಂತ ಮೀಸೆ, ರವೀಂದ್ರ ಲಠ್ಠೆ, ಬಾಬುರಾವ ಶೇರಿಕಾರ ಇತರರಿದ್ದರು.