ಕಲಬುರಗಿಯಲ್ಲಿ ಕರುನಾಡಿನ ನಟಿಮಣಿಯರನ್ನ ಹುಡುಕುವ ಮಹಾನಟಿ ಕಾರ್ಯಕ್ರಮ

0
16

ಕಲಬುರಗಿ: ನಟಿಯಾಗುವ ಕನಸಿಗೆ ನೀರೆರೆಯಲಿದೆ ಮಹಾನಟಿ ಕಾರ್ಯಕ್ರಮ, ತನ್ನ ವಿಭಿನ್ನ ರಿಯಾಲಿಟಿ ಶೋಗಳ ಮೂಲಕ ಸಾಕಷ್ಟು ಯುವ ಪ್ರತಿಭೆಗಳನ್ನ ಕರುನಾಡಿಗೆ ಪರಿಚಯಿಸಿರುವ ಜೀ ಕನ್ನಡ ವಾಹಿನಿ, ಈ ಬಾರಿ ಮತ್ತೊಂದು ಹೊಸ ರಿಯಾಲಿಟಿ ಶೋ ಮೂಲಕ ಕರುನಾಡಿನ ಯುವ ನಾಯಕನಟಿಯರನ್ನ ಹುಡುಕುವ ಕೆಲಸ ಶುರುಮಾಡಿದೆ.

ಕರುನಾಡಿನ ಧೀಮಂತ ನಾಯಕ ನಟಿಯರ ಸಾಲಿಗೆ ಸೇರಲು ಬಯಸುವ ಎಲ್ಲಾ ಯುವ ನಾಯಕ ನಟಿಯರಿಗೆ ವೇದಿಕೆ ಕಲ್ಪಿಸಿಕೊಡುವ ಈ ಮಹಾನಟಿ ಕಾರ್ಯಕ್ರಮವು ,ನಿಮ್ಮ ಕನಸನ್ನ ನನಸು ಮಾಡುವ ನಿಟ್ಟಿನಲ್ಲಿ ನಿಮ್ಮೂರಿಗೆ ಬಂದು, ನಿಮ್ಮ ಪ್ರತಿಭಯೆನ್ನ ಗುರುತಿಸಿ, ನಿಮ್ಮನ್ನ ಈ ವೇದಿಕೆ ಕರೆತರುವ ಕೆಲಸವನ್ನ ಈ ಮೂಲಕ ಮಾಡಲಿದೆ.

Contact Your\'s Advertisement; 9902492681

ಮಹಾನಟಿ ಎಂಬ ಈ ರಿಯಾಲಿಟಿ ಶೋಗಾಗಿ ಕರ್ನಾಟಕದ ಆಯ್ದ ಜಿಲ್ಲೆಗಳಲ್ಲಿ ಆಡಿಷನ್ ಪ್ರಕ್ರಿಯೆ ನಡೆಸಲ್ಲಿದ್ದು ,ಇದರ ಆರಂಭಿಕ ಹಂತವೆಂಬಂತೆ ಇದೇ ಮಂಗಳವಾರ,13-02-2024 ರಂದು ಬೆಳಿಗ್ಗೆ 9 ಗಂಟೆಗೆ ಎ.ಸಿ.ಟಿ – ಎನ್.ವಿ ಇಂಟನ್ರ್ಯಾಷನಲ್ ಸ್ಕೂಲ್ ಎನ್.ವಿ ಗ್ರೌಂಡ್,ಬ್ರಹ್ಮಪುರ, ಕಲಬುರಗಿ. ಇಲ್ಲಿ ಆಡಿಷನ್ಸ್ ನಡೆಯಲ್ಲಿದ್ದು.ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಚಿಸುವವರು 2 ಪಾಸ್ ಪೆÇೀರ್ಟ್ ಸೈಜ್ ಪೆÇೀಟೋ ಜೊತೆ ಅಡ್ರಸ್ ಪ್ರೂಫ್ ಜೆರಾಕ್ಸ್ ತೆಗೆದುಕೊಂಡು ಬಂದು ಭಾಗವಹಿಸಬಹುದಾಗಿದ್ದು, ಜೀ ಕನ್ನಡ ನಡೆಸುವ ಈ ಆಡಿಷನ್ ಪ್ರಕ್ರಿಯೆಯಲ್ಲಿ ಯಾವುದೇ ಹಣವನ್ನ ಪಡೆಯಲಾಗುವುದಿಲ್ಲವೆಂದು ವಾಹಿನಿ ತಿಳಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here