ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ಗುರಿ ತಲುಪಿ

0
56

ಶಹಾಬಾದ: ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ಸೋಮಾರಿಗಳಾಗದೆ,ಕಠಿಣ ಪರಿಶ್ರಮದಿಂದ ಉತ್ತಮ ವಿದ್ಯಾಭ್ಯಾಸ ಮಾಡಿ ತಮ್ಮ ಗುರಿ ತಲುಪಬೇಕು ಎಂದು ನಗರದ ಎಸ್‍ಬಿಐ ಬ್ಯಾಂಕ್ ವ್ಯವಸ್ಥಾಪಕ ಸುಭಾಷಚಂದ್ರ ಹಿಟ್ಟನ್‍ಹಳ್ಳಿ ಹೇಳಿದರು.

ಅವರು ನಗರದ ಸಿಎ ಇಂಗಿನಶೆಟ್ಟಿ ಕಾಲೇಜಿನಲ್ಲಿ ಪಿಯುಸಿ ದ್ವಿತೀಯ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ವಾಣಿಜ್ಯ ಶಾಸ್ತ್ರದಲ್ಲಿ ಓದಿದವರಿಗೆ ಬ್ಯಾಂಕಿಂಗ್ ಕ್ಷೇತ್ರ, ಐಟಿ ಬಿಟಿ, ವಾಣಿಜ್ಯ ತೆರಿಗೆ ವಿಭಾಗ, ಲೆಕ್ಕಪರಿಶೋಧನಾ ವಿಭಾಗ ಮತ್ತಿತರರ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿವೆ. ಆದ್ದರಿಂದ ಬಿ.ಕಾಂ.ಪದವಿ ಪಡೆದವರು ಪದವಿ ಹಂತದಲ್ಲಿ ಇಂಗ್ಲಿμï ಜ್ಞಾನವನ್ನು ಪಡೆದುಕೊಂಡರೆ ಉದ್ಯೋಗಕ್ಕೆ ಸೇರಲು ಸುಲಭವಾಗುತ್ತದೆ.

Contact Your\'s Advertisement; 9902492681

ವಾಣಿಜ್ಯ ವಿಭಾಗದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದವರು ವಿಶ್ವದ ಯಾವುದೇ ಭಾಗದಲ್ಲಿ ಕೆಲಸವನ್ನು ಸುಲಭವಾಗಿ ಗಿಟ್ಟಿಸಬಹುದಾಗಿದೆ. ಆದರೂ ಸ್ಪರ್ಧಾತ್ಮಕ ಯುಗವಾಗಿರುವುದರಿಂದ ಉತ್ತಮ ದರ್ಜೆಯಲ್ಲಿ ಉತ್ತೀರ್ಣ ಹೊಂದಲು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು ಎಂದರು.ಅಲ್ಲದೇ ಸಿಎ ಇಂಗಿನಶೆಟ್ಟಿ ಕಾಲೇಜಿನ ವಿದ್ಯಾರ್ಥಿಗಳು ಸಿಎಗಳಾಗುವ ಮೂಲಕ ಓದಿದ ಶಾಲಾ-ಕಾಲೇಜಿಗೆ, ಪೆÇೀಷಕರಿಗೆ ಹಾಗೂ ಪಾಠ ಹೇಳಿದ ಗುರುಗಳಿಗೆ ಕೀರ್ತಿ ತರಬೇಕು ಎಂದು ಹೇಳಿದರು.

ಉಪನ್ಯಾಸಕ ಪ್ರವೀಣ ರಾಜನ್ ಮಾತನಾಡಿ, ಪ್ರಪಂಚದಲ್ಲಿ ವಾಣಿಜ್ಯಶಾಸ್ತ್ರ ಪದವಿಯು ಹೆಚ್ಚು ಬೇಡಿಕೆಯನ್ನು ಹೊಂದಿದ ಪದವಿಯಾಗಿದೆ. ವಾಣಿಜ್ಯ ಶಾಸ್ತ್ರದಲ್ಲಿ ಶಿಕ್ಷಣ ಪಡೆದರೆ ಹೆಚ್ಚು ಉದ್ಯೋಗಾವ ಕಾಶಗಳು ವಿಶ್ವದ ಯಾವುದೇ ಭಾಗದಲ್ಲಿ ಸುಲಭವಾಗಿ ದೊರೆಯು ತ್ತವೆ. ಹಾಗಾಗಿ ವಾಣಿಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡುವ ಮೂಲಕ ಉತ್ತಮ ದರ್ಜೆಯಲ್ಲಿ ಉತ್ತೀರ್ಣ ಹೊಂದಿ ತಮ್ಮ ಗುರಿ ತಲುಪಬೇಕು ಎಂದು ಸಲಹೆ ನೀಡಿದರು.

ಉಪನ್ಯಾಸಕ ಶರಣು ಹಲಕರ್ಟಿ, ಶಿಕ್ಷಕ ಬಾಬಾಸಾಹೇಬ ಸಾಳುಂಕೆ ಮಾತನಾಡಿದರು.ರಾಷ್ಟ್ರ ಭಾಷಾ ಶಿಕ್ಷಣ ಸಮಿತಿಯ ಅಧ್ಯಕ್ಷ ಬಾಲಕಿಶನ್ ವರ್ಮಾ, ಕಾರ್ಯದರ್ಶಿ ದಿಲೀಪ್ ಯಲಶೆಟ್ಟಿ, ಪ್ರಭಾರಿ ಪ್ರಾಂಶುಪಾಲ ರಮೇಶ ವಾಲಿ ವೇದಿಕೆಯ ಮೇಲಿದ್ದರು.

ಉಪನ್ಯಾಸಕರಾದ ದೀಪಾ.ಡೇವಿಡ್, ಅಶ್ವಿನಿ ಮೋಹಿತೆÉ ಶ್ವೇತಾ ಪವಾರ,ಸಾಬಣ್ಣ ಗುಡ್ಲಾ, ಪದ್ಮಶ್ರೀ ಜೋಷಿ, ಸುಗಯ್ಯ ಮಠ, ವೀರಯ್ಯ ಹಿರೇಮಠ, ರಮೇಶ ಮಹೀಂದ್ರಕರ್ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here