ಕಲಬುರಗಿ: ಜಿಲ್ಲಾ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಶ್ರೀ ಸಂತ ಸೇವಾಲಾಲ್ ಮಹಾರಾಜರ 285 ನೇ ಜಯಂತಿಯನ್ನು ಜಿಲ್ಲಾ ಅಧ್ಯಕ್ಷರಾದ ಬಾಲರಾಜ್ ಎಸ್. ಗುತ್ತೇದಾರ ರವರ ಆದೇಶ ಮೇರೆಗೆ ಆಚರಣೆ ಮಾಡಲಾಯಿತು.
ಈ ಶುಭ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಶಾಮರಾವ್ ಸೂರನ್, ದೇವೇಗೌಡ ತೆಲ್ಲೂರ, ವಿಶ್ವನಾಥ್ ನಾಡಗೌಡ್, ಬಸವರಾಜ್ ಬೀರಬಿಟ್ಟಿ, ಡಾ.ಸಿದ್ದಣ್ಣ ಪಾಟೀಲ್, ಮಲ್ಲಿಕಾರ್ಜುನ ಸಂಗಾಣಿ, ಶಂಕರ್ ಕಟ್ಟಿಸಂಗಾವಿ, ರಾಮಚಂದ್ರ ಅಟ್ಟೂರ್, ಪ್ರವೀಣ್ ಜಾಧವ, ಹೋಬಸಿಂಗ್ ಚವ್ಹಾಣ, ಮಾರುತಿ ಚವ್ಹಾಣ, ಹಣಮಂತ ಸನಗುಂದಿ, ಹಣಮಂತ ಕಂದಲ್ಲಿ, ಚಂದು ಮೋರೆ, ವಲ್ಸಲ್ ಕುಮಾರ್, ಮಲಿಕ್ ನಾಗನಳ್ಳಿ, ರೇವಣಸಿದ್ಧ, ಸುನಿಲ್ ಗಾಜರೆ, ವಿಜಯಕುಮಾರ, ಎಸುನಾಥ್, ದೇವಿಂದ್ರ ಹಸನಾಪುರ, ಗಂಗಾಧರ್ ಪಂಚಾಳ್, ಸಂಜು ಮಡಕಿ, ನಾಗಣ್ಣ ವಾರದ ಸೇರಿದಂತೆ ಇತರರು ಇದ್ದರು.