ಡಾ. ಡಿ.ವಿರೇಂದ್ರ ಹೆಗ್ಗಡೆಯವರದು ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಗುರಿ

0
28

ಸುರಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್,ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಯಾದಗಿರಿ ಜಿಲ್ಲೆ ವತಿಯಿಂದ ನಗರದ ರಂಗಂಪೇಟೆಯ ಜೀಹ್ವೇಶ್ವರ ಕಲ್ಯಾಣ ಮಂಟಪದಲ್ಲಿ ಮಧ್ಯವರ್ಜನ ಶಿಬಿರಕ್ಕೆ ಸೇರಿ ದುಶ್ಚಟದಿಂದ ಕೂಡಿದ ಜೀವನದಿಂದ ಹೊರಬಂದು ನವಜೀವನ ನಡೆಸುತ್ತಿರುವ ಪಾನಮುಕ್ತರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ನಡೆಸಲಾಗಿದೆ.

ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟದ ಜನಜಾಗೃತಿ ವೇದಿಕೆಯ ಕೋಶಾಧಿಕಾರಿಯಾದ ಸೂಗುರೇಶ್ ವಾರದ್ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಡಾ. ಡಿ.ವಿರೇಂದ್ರ ಹೆಗ್ಗಡೆಯವರು ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ. ಇದರಂತೆ ಕಳೆದ 01 ವರ್ಷದಿಂದ ಸುರಪುರ ತಾಲೂಕಿನಲ್ಲಿ ಮಧ್ಯವರ್ಜನ ಶಿಬಿರ ಏರ್ಪಡಿಸಿದ್ದು, ಒಟ್ಟು-54 ಜನ ಶಿಬಿರಾರ್ಥೀಗಳಾಗಿ ಭಾಗವಹಿಸಿರುತ್ತಾರೆ. 08 ದಿನಗಳ ನಡೆದ ಮಧ್ಯವರ್ಜನ ಶಿಬಿರಕ್ಕೆ ಸೇರಿ ತಮ್ಮ ಜೀವನದ ದಿಕ್ಕನ್ನು ಬದಲಾಯಿಸಿಕೊಂಡ ನವಜೀವನ ಸದಸ್ಯರ ನವಜೀವನೋತ್ಸವ. ಆಚರಣೆ ಮಾಡಿರುವುದು ಅತ್ಯಂತ ಸಂತೋಷದ ವಿಚಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸ್ಥೆಯ ಜಿಲ್ಲಾ ನಿರ್ದೇಶಕ ಕಮಲಾಕ್ಷ ಮಾತನಾಡಿ, ಅಮಲಿನ ಜೀವನದಿಂದ ಸುಂದರ ಬದುಕಿಗೆ ಹೊಸ ಅಧ್ಯಾಯ ಪ್ರಾರಂಭ ಮಾಡಿದ ನವಜೀವನದ ಸದಸ್ಯರ ಬದಲಾವಣೆಯ ಬಗ್ಗೆ ಸಾಕಷ್ಟು ಉದಾಹರಣೆಗಳನ್ನು ನೀಡಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯ ಚಿಂತನೆಗಾಗಿ ಪೂಜ್ಯ ಹೆಗ್ಗಡೆಯವರು ಸಾವಿರಾರು ಕಾರ್ಯಕ್ರಮಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಅದರಲ್ಲಿ ಮಹತ್ವವಾದ ಕಾರ್ಯಕ್ರಮವಾದ ಮಧ್ಯವರ್ಜನ ಶಿಬಿರ ಹಲವಾರು ಜನರ ಜೀವನವನ್ನೇ ಬಲಾಯಿಸಿದೇ ಇದೇ ಮಾದರಿಯಲ್ಲಿ ದುಶ್ಚಟದಿಂದ ಮುಕ್ತಿ ಹೊಂದಿದ ಒಂದು ಕುಟುಂಬದ ಆದಾಯ ಮಾನಸಿಕ ನೆಮ್ಮದಿ ಸರ್ಮೋತೊಮುಖ ಅಭಿವೃದ್ಧಿ ತನ್ನಿಂದ ತಾನೇ ಆಗುತ್ತದೆ ಎಂದು ಆಶಯ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಆಗಮಿಸಿದ ನವಜೀವನ ಸಮಿತಿಯ ಸದಸ್ಯರ ಪರಿವರ್ತನೆ ಕಂಡು ಒಬ್ಬ ವ್ಯಕ್ತಿ ಮನಸ್ಸನ್ನು ಪರಿವರ್ತನೆ ಮಾಡಿಕೊಂಡರೆ ಇಂತಹ ದೊಡ್ಡ ಸಾಧನೆ ಬೇಕಾದ್ರು ಮಾಡಬಹುದು ಎಂದು ಬಸವರಾಜ್ ಸ್ಥಾವರಮಠ್‍ರವರು ಶುಭವನ್ನು ಹಾರೈಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಪ್ರಕಾಶ್.ಎಸ್ ಅಂಗಡಿ, ಅಮರಯ್ಯ ಸ್ವಾಮಿ ಜಾಲಿಬೆಂಚಿ, ಡಿ.ಸಿ ಪಾಟೀಲ್ ಕಾರ್ಯಕ್ರಮದಲ್ಲಿ ನವಜೀವನ ಸಮಿತಿಯ ಸದಸ್ಯರನ್ನು ಅಭಿನಂದಿಸುವ ಮೂಲಕ ನವಜೀವನೋತ್ಸವ ಕಾರ್ಯಕ್ರಮಕ್ಕೆ ಮೇರಗು ತಂದರು.

ಕಾರ್ಯಕ್ರಮದಲ್ಲಿ ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ವಿಭಾಗದ ಯೋಜನಾಧಿಕಾರಿ, ಜನಜಾಗೃತಿ ವೇದಿಕೆಯ ಕಾಂiÀರ್iವೈಕರಿಯ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಸಂತೋಷ್.ಎ.ಎಸ್ ಉಪಸ್ಥಿರಿದ್ದರು, ಮೇಲ್ವಿಚಾರಕರು ಮತ್ತು ಸೇವಾಪ್ರತಿನಿಧಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here