ಕಾರಾಗೃಹದ ಖೈದಿಗಳಿಗೆ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ತರಬೇತಿ 

0
26

ಕಲಬುರಗಿ; ಕೇಂದ್ರ ಕಾರಾಗೃಹದಲ್ಲಿರುವ ಬಂದಿಗಳಿಗೆ ಪಶುಪಾಲನಾ ಮತ್ತು ಪಶು ವೈದ್ಯ ಇಲಾಖೆ ಕಲಬುರಗಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳಿಗೆ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಮಾಡುವ ಬಗ್ಗೆ ಅರಿವು ಮೂಡಿಸಲು ಒಂದು ದಿನದ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಡಾ. ಎಸ್.ಡಿ. ಅವಟಿ, ಉಪ ನಿರ್ದೇಶಕರು, ಪಶುಪಾಲನಾ ಇಲಾಖೆ ಕಲಬುರಗಿ ರವರು ಸಸಿಗೆ ನೀರು ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ತಮ್ಮ ಮನಃ ಪರಿವರ್ತನೆ ಹಾಗೂ ಸ್ವಾವಲಂಭಿ ಬದುಕಿಗಾಗಿ ಪಶುಪಾಲನೆ ಇಲಾಖೆಯು ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಮಾಡುವ ಅರಿವುವನ್ನು ಮೂಡಿಸುವ ಸಲುವಾಗಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ತಾವುಗಳು ಇದರ ಸದುಪಯೋಗವನ್ನು ಪಡೆದುಕೊಂಡು ಉತ್ತಮ ಬದುಕನ್ನು ಕಟ್ಟಿಕೊಳ್ಳಲಿಕ್ಕೆ ಸಹಾಯವಾಗಲೆಂದು ಶುಭ ಹಾರೈಸಿದರು.

Contact Your\'s Advertisement; 9902492681

ಇನ್ನೋರ್ವ ಅತಿಥಿ ಹಾಗೂ ಉಪನ್ಯಾಸಕರಾಗಿ ಆಗಮಿಸಿದ ಡಾ. ಯಲ್ಲಪ್ಪ ಇಂಗಳಗಿ, ಸಹಾಯಕ ಉಪನಿರ್ದೇಶಕರು, ಪಶು ಇಲಾಖೆ, ಶಹಬಾದ್ ರವರು ಮಾತನಾಡುತ್ತಾ, ಪ್ರತಿಯೊಬ್ಬ ವ್ಯಕ್ತಿಯ ಸಮಾಜಿಕ ಮತ್ತು ಅರ್ಥಿಕ ಬೆಳವಣಿಗೆಯಲ್ಲಿ ಜಾನುವಾರುಗಳ ಪಾತ್ರ ಬಹು ಮುಖ್ಯ ಏಕೆಂದರೆ ಕುರಿ ಸಾಕಾಣಿಕೆಯು ವರ್ಷವಿಡಿ ನೀಡುವ ಉದ್ಯೋಗ ಇದು, ಸಾಮಾನ್ಯವಾಗಿ ಕುರಿ ಸಾಕಿ ಕುಬೇರರಾಗಿ ಎಂಬಂತೆ ಕುರಿ ಸಾಕಾಣಿಕೆಯಿಂದ ಸಾಕಷ್ಟು ಲಾಭವನ್ನು ತಂದುಕೊಡುತ್ತದೆ. ಇದಕ್ಕೆ ಕಡಿಮೆ ಶ್ರಮ ಅಧಿಕ ಲಾಭವನ್ನು ತಂದುಕೊಡುತ್ತದೆ.

ಕರ್ನಾಟಕದಲ್ಲಿ 5 ತಳಿಯ ಕುರಿಗಳು ಅಲ್ಲದೇ ದೇಶಿಯ ತಳಿಯ ಮೇಕೆಗಳನ್ನು ಸಾಕಲಾಗುತ್ತಿದೆ. ಹಾಗಾಗಿ ತಾವು ಉದ್ಯೋಗವನ್ನು ಮಾಡುವುದಕ್ಕೆ ಯಾವುದೇ ವಿದ್ಯಾಭ್ಯಾಸ ಅವಶ್ಯಕತೆ ಇರುವುದಿಲ್ಲ. ಕುರಿ ಸಾಕಾಣಿಕೆಯ ಬಗ್ಗೆ ತರಬೇತಿಯನ್ನು ಪಡೆದು ಅವುಗಳ ಪಾಲನೆ, ಪೋಷಣೆ ಮತ್ತು ರಕ್ಷಣೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಲ್ಲಿ ಅತ್ಯಂತ ಯಶಸ್ವಿಯಾಗಿ ಉದ್ಯೋಗ ನಿಂತ ನೀರಾಗದೇ ಹರಿಯುವ ನೀರಾಗಬಹುದು. ಕಸದಿಂದ ರಸವನ್ನಾಗಿ ಮಾಡಿ ರಸದಿಂದ ನಿಮ್ಮ ಬದುಕು ಸಮೃದ್ಧಿ ಆಗಬಹುದೆಂದು ಕುಲಂಕುಷವಾಗಿ ಸ್ಕ್ರೀನ್ ಮೂಲಕ ವಿವರವಾಗಿ ವಿಷಯವನ್ನು ಮನ ಮುಟ್ಟುವಂತೆ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಪಿ.ರಂಗನಾಥ್ರವರು ಮಾತನಾಡುತ್ತಾ, ಮುಂದಿನ ದಿನಗಳಲ್ಲಿ ಪಶುಗಳ ಪಾಲನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳುವುದರೊಂದಿಗೆ ತರಬೇತಿಯನ್ನು ಹಮ್ಮಿಕೊಂಡ ಪಶು ಪಾಲನಾ ಇಲಾಖೆಯ ಅಧಿಕಾರಿ ವೃಂದದವರಿಗೆ ಅಭಿನಂದನೆ ಸಲ್ಲಿಸಿದರು. ಪಶು ಇಲಾಖೆ ವತಿಯಿಂದ ತರಬೇತಿಯಲ್ಲಿ ಭಾಗವಹಿಸಿದ ಬಂದಿಗಳಿಗೆ ಕುರಿ, ಮೇಕೆ ಸಾಕಾಣಿಕೆಯ ತರಬೇತಿಯ ಕೈಪಿಡಿ ಹಾಗೂ ಹಣ್ಣುಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧೀಕ್ಷಕ ಬಿ.ಎಂ. ಕೊಟ್ರೇಶ್, ವೈದ್ಯಾಧಿಕಾರಿಗಳಾದ ಡಾ. ಎಸ್.ಕೆ ಠಕ್ಕಳಿಕೆ, ಸಹಾಯಕ ಉಪನಿರ್ದೇಶಕರು, ಪಶು ಆಸ್ಪತ್ರೆ ಕಲಬುರಗಿ, ಸಂಸ್ಥೆಯ ಪಶು ಪರಿವೀಕ್ಷ ಮೀರ್ ಮಂಜೂರ್ ಅಲಿ ಖಾನ್, ಜೈಲರ್ ಆದ ಸಾಗರ್ ಪಾಟೀಲ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಂಸ್ಥೆಯ ಶಿಕ್ಷಕರಾದ ನಾಗರಾಜ ಮುಲಗೆ, ನೆರವೇರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಬಂದಿಗಳಿಂದ ಪ್ರಾರ್ಥನಾ ಗೀತೆಗಳನ್ನು ಹಾಡಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here