ಕಲಬುರಗಿ: ಶ್ರೀ ಸರಡಗಿ ಮಹಾಲಕ್ಷ್ಮೀ ಶಕ್ತಿಪೀಠದ ಸಂಭ್ರಮದ ಜಾತ್ರಾ ಮಹೋತ್ಸವ ಹಾಗೂ ಪೂಜ್ಯ ಶ್ರೀ ಡಾ: ಅಪ್ಪಾರಾವ ದೇವಿ ಮುತ್ಯಾ (ಮಹಾರಾಜರು) ಶಕ್ತಿ ಪೀಠಾಧಿಪತಿಗಳು, ಇವರ 60 ವರ್ಷದ ಷಷ್ಠಿಪೂರ್ತಿ ಕಾರ್ಯಕ್ರಮದ ನಿಮಿತ್ಯ ಸಾಮೂಹಿಕ ವಿವಾಹ, ವೈದಕೀಯ ಕ್ಷೇತ್ರ, ಕೃಷಿ ಕ್ಷೇತ್ರ, ಸೈನಿಕರಿಗೆ, ಶೈಕ್ಷಣಿಕ ಕ್ಷೇತ್ರ, ಸಾಹಿತಿಗಳು, ಸಮಾಜ ಸೇವಕರಿಗೆ ಪ್ರಶಸ್ತಿ ಪ್ರಧಾನ ಮತ್ತು ಧರ್ಮ ವೇದಿಕೆ ಕಾರ್ಯಕ್ರಮ, ಹಾಗೂ ಮಹಾನಗರ ಪಾಲಿಕೆಯ ಮಹಿಳಾ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಶ್ರೀಮದ್ ಕಾಶೀ ಜ್ಞಾನಸಿಂಹಾಸನಾದೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ವಾರಣಾಶಿ (ಕಾಶಿ) ಅವರು ಉದ್ಘಾಟಿಸಿದರು.
ಪೂಜ್ಯಶ್ರೀ ಷ.ಬ್ರ. ಡಾ. ಚನ್ನಮಲ್ಲ ಶಿವಾಚಾರ್ಯರು, ಪೂಜ್ಯಶ್ರೀ ಷ.ಬ್ರ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಪೂಜ್ಯಶ್ರೀ ಷ.ಬ್ರ. ಶ್ರೀಕಂಠ ಶಿವಾಚಾರ್ಯರು, ಪೂಜ್ಯಶ್ರೀ ಷ.ಬ್ರ. ರೇವಣಸಿದ್ದ ಶಿವಾಚಾರ್ಯರು, ಪೂಜ್ಯಶ್ರೀ ಷ.ಬ್ರ ಅಭಿನವ ಮುರಘಂದ್ರ ಶಿವಾಚಾರ್ಯರು, ಪೂಜ್ಯಶ್ರೀ ಷ.ಬ್ರ ಅಭಿನವ ಪರುತೇಶ್ವರ ಶಿವಾಚಾರ್ಯರು, ಪೂಜ್ಯಶ್ರೀ ಷ.ಬ್ರ ಡಾ. ಘನಲಿಂಗ ರುದ್ರಮುನಿ ಶಿವಾಚಾರ್ಯರು, ಮಾಜಿ ಸಚಿವ ರೇವುನಾಯಕ ಬೆಳಮಗಿ, ಸಮಾಜ ಸೇವಕಿ ಜಯಶ್ರೀ ಬಿ.ಮತ್ತಿಮಡು, ಮಾಜಿ ಮೇಯರ್ ಚಂದ್ರಿಕಾ ಪರಮೇಶ್ವರ ಸೇರಿದಂತೆ ನಾಡಿನ ಅನೇಕ ಮಠಾಧೀಶರು ಹಾಗೂ ರಾಜ್ಯದ ರಾಜಕೀಯ ಧುರಣಿಯ ಮುಖಂಡರು, ವಿವಿಧ ಗ್ರಾಮಸ್ಥರು, ಭಕ್ತಾಧಿಗಳು ಇದ್ದರು. ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 60 ಜನ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.