ಶ್ರೀಶೈಲ ಮಲ್ಲಿಕಾರ್ಜುನನ ವಿದ್ಯಾವರ್ಧಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಯೋಗಾಭ್ಯಾಸ

0
53

ವಾಡಿ; ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಸ್ಥೆಯ ಬಾಲ ವಿಕಾಸ ಮಂದಿರದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಯೋಗಾಭ್ಯಾಸ ಮಾಡಿಸಿದರು.

ಪ್ರತಿನಿತ್ಯ ಯೋಗಾಭ್ಯಾಸಗಳನ್ನು ಮಾಡುವವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರುವುದಿಲ್ಲ ಎಂಬುದು ಎಷ್ಟು ಸತ್ಯವೋ, ಮಾನಸಿಕ ಆರೋಗ್ಯ ಕೂಡ ಸ್ಥಿರವಾಗಿ ಇರುತ್ತದೆ ಎಂಬುದು ಅಷ್ಟೇ ಸತ್ಯ. ಇದನ್ನು ಇಡೀ ಜಗತ್ತೇ ಒಪ್ಪಿಕೊಂಡಿದೆ ಎಂದು ಯೋಗಾಭ್ಯಾಸ ಮಾಡಿಸುತ್ತಾ ವೀರಣ್ಣ ಯಾರಿ ಹೇಳಿದರು.

Contact Your\'s Advertisement; 9902492681

ಈಗಿನ ವಿದ್ಯಾರ್ಥಿಗಳು ಮೊಬೈಲ್ ಗೀಳು ಬಿಟ್ಟು ದೈಹಿಕ ಬೆಳವಣಿಗೆಗೆ ಸಹಕಾರಿ ಯಾದ ಆಟಗಳಲ್ಲಿ ತೊಡಗಿದಾಗ ಮಾತ್ರ ಸದೃಢ ಆರೋಗ್ಯವಂತ ದೇಶ ನಿರ್ಮಾಣ ಸಾಧ್ಯ, ಚಿಕ್ಕ ವಯಸ್ಸಿನಲ್ಲಿ ಯೋಗ ಪಾಠ ಕಲಿಯುವುದರಿಂದ ಮಿದಳು, ಕಣ್ಣು ಸೇರಿದಂತೆ ಇತ್ಯಾದಿ ಸೂಕ್ಷ್ಮಅಂಗಗಳು ಚುರುಕುಗೊಳ್ಳತ್ತವೆ ಈ ರೀತಿ ವಿದ್ಯಾರ್ಥಿಗಳಿಗೆ ಯೋಗ ಹಲವು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ ಎಂದು ಹೇಳಿದರು.

ಈ‌ ಸಂಧರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಚಂದ್ರಶೇಖರ ಕಲ್ಲೂರ, ಶಿವಕುಮಾರ ಮಲ್ಕಂಡಿ, ನಾಗರಾಜ ತಳವಾರ, ಶಿವಕುಮಾರ ಕೊಳಿ,ಸಂತೋಷ ಕುಮಾರ ಪಾಟೀಲ,ಜಿ ಅನಿತಾ,ಚಂದ್ರಕಲಾ ಶೆಳ್ಳಗಿ, ಪದ್ಮಾವತಿ ಕುಲಕರ್ಣಿ, ಕವಿತಾ ಪಾಟೀಲ ಸೇರಿದಂತೆ ಶಿಕ್ಷಕ ವೃಂದದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here