ಕಲಬುರಗಿ: ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳು ಒಪಿಡಿ ಚಿಟಿ ಪಡೆಯಲು ಮೂರು ಗಂಟೆಗಳ ಕಾಲ ಪರದಾಡುವ ಮೂಲಕ ಹರಸಹಾಸ ಮಾಡುತ್ತಿರುವ ದೃಶ್ಯ ಕಂಡುಬಂತು.
ಈಡಿ ಜಿಲ್ಲಾ ಆಸ್ಪತ್ರೆಯಲ್ಲಿ ಓಪಿಡಿ ನೀಡಲು ಮೂರು ಕೌಂಟರ್ಗಳು ಮಾತ್ರ ಇವೆ. ಈ ಆಸ್ಪತ್ರೆಗೆ ಸರಿ ಸುಮಾರು ಹತ್ತಕ್ಕಿತ್ತು ಹೆಚ್ಚು ಕೌಂಟರ್ಗಳು ತೆರೆಯಬೇಕು. ಒಂದು ಮಹಿಳಾ ಕೌಂಟರಎರಡು ಪುರುಷರ ಕೌಂಟರಗಳಿಗೆ ಸಾಲಿನಲ್ಲಿ ವಯಸ್ಸಾದವರು. ಮಕ್ಕಳು ನಿಲ್ಲಲು ಆಗುತ್ತಿಲ್ಲ. ಆರೋಗ್ಯ ಅಧಿಕಾರಿಗಳು ಇತ್ತಕಡೆ ಗಮನಹರಿಸಿ ರೋಗಿಗಳ ಸರಳ ವ್ಯವಸ್ಥೆ ಮಾಡಬೇಕು ಎಂದು ಸರದಿ ಶಾಲಿನಲ್ಲಿ ನಿಂತು ಇ ಮೀಡಿಯಾ ಸುದ್ದಿ ವಾಹಿನಿಯ ಮೂಲಕ ಒತ್ತಾಯಿಸಿದರು.
ಆಸ್ಪತ್ರೆಯಲ್ಲಿ ಸರಿಸುಮಾರು ಸಾವಿರಕ್ಕಿಂತ ಹೆಚ್ಚು ಒಳ ಮತ್ತು ಹೊರ ರೋಗಿಗಳು ನೊಂದಣಿ ಮಾಡಿಕೊಳ್ಳುತ್ತಾರೆ ಚುನಾಯಿತ ಪ್ರತಿನಿಧಿಗಳು ಆರೋಗ್ಯ ಸಚಿವರು, ಜಿಲ್ಲಾಡಳಿತ, ಜನಸಾಮಾನ್ಯರ ಕಷ್ಟವನ್ನು ತಿಳಿಕೊಳ್ಳುವ ಅಗತ್ಯ ವಿದೆ.
ಕೌಂಟರ್ ಕಮ್ಮಿ ಇವುದರಿಂದ ಚಿಕಿತ್ಸೆ ಬರುತ್ತಿರುವ ರೋಗಿಗಳ ಆರೋಗ್ಯ ಮತ್ತಷ್ಟು ಹದಗೆಡುವಂತಹ ವ್ಯವಸ್ಥೆ ಆಸ್ಪತ್ರೆಯಲ್ಲಿ ನಿರ್ಮಾಣವಾಗಿದ್ದು, ಜನ ಸ್ನೇಹಿ ವ್ಯವಸ್ಥೆ ನಿರ್ಮಿಸುವ ಕಡೆಗೆ ಜಿಲ್ಲಾ ಆರೋಗ್ಯ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಒತ್ತಾಯಿಸಿದರು.