ಹೊರ ದೇಶದವರು ನಿನ್ನ ಹಾಡಿ ಹೊಗಳಿ ಬೃಹತ್ ಸಂವಿಧಾನದ ಶಿಲ್ಪಿ ಎಂದು ಒಪ್ಪಿಕೊಂಡರೂ ನಿನ್ನ ದೇಶದ ನಿನ್ನದೇ ಜನರು ನಿನ್ನನ್ನು ಒಪ್ಪಿಕೊಳ್ಳಲಾರರು ಸಂವಿಧಾನದಡಿಯಲ್ಲಿ ಬದುಕುತ್ತಿದ್ದರು ಮನುಸ್ಮೃತಿಯ ಪಾಲಕರಾಗಿದ್ದಾರೆ. ನಿನ್ನ ತಾಯ್ತನದ ಹೃದಯ ಇಂದಿನ ಹೆಣ್ಣು ಸಿಕಾಮಣಿಗಳಿಗೆ ತಿಯದೇ ಹೋಯಿತು.
ಎಲ್ಲ ಕ್ಷೇತ್ರಗಳಲ್ಲಿ ಕಾರ್ಯನಿರತರಾದ ಮಹಿಳೆಯರು
ತಮ್ಮ ಯಶಸ್ಸಿಗೆ ದೇವರು ಕಾರಣ ಎನ್ನುತ್ತಾರೆ
ಬಂಧನಗಳಿಂದ ಹೊರ ತಂದದ್ದು ದೇವರು ಎನ್ನುತ್ತಾರೆ
ಹಿಂದು ಕೋಡ್ ಬಿಲ್ ಮಹಿಳೆಯರಿಗೆ ಅರಿವಿಗೆ ಬಾರದೇ ಹೋಯಿತಾ?ಮಹಿಳೆಯರಿಗಾಗಿಯೇ ತನ್ನ ಕಾನೂನು ಸಚಿವ ಹುದ್ದೆಗೆ ರಾಜೀನಾಮೆ ನೀಡಿದ ಅಂಬೇಡ್ಕರ್ ಕನಿಷ್ಟ ಪಕ್ಷ ಇವರಿಗೆ ನೆನಪಾಗದೆ ಹೋದರು. ಪ್ರತಿನಿತ್ಯ ದಲಿತ ಹಿಂದುಳಿದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ಸರದಿಯಂತೆ ನಡೆಯುತ್ತಿದ್ದರೂ ಯಾವಂದಕ್ಕು ಸ್ಪಂದಿಸದ ನಿಗ ವಹಿಸದ ಇಂಗಿನ ರಾಜಕಾರಣಿಗಳೆ ನಮ್ಮ ಹೆಣ್ಣು ಮಕ್ಕಳಿಗೆ ಗ್ರೇಟಾಗಿ ಕಾಣುತ್ತಿದ್ದಾರೆ
ಹೆಣ್ಣು ನೋವು ಸಂಟಗಳಿಂದ ನರಳುತ್ತಿದ್ದಾಗ ಪೂಜೆ ಮಾಡುವ ಯಾವ ದೇವರು ಬರಲಿಲ್ಲ ಕೊನೆಗೆ ಹೆಣ್ಣು ಜೀವಿಯ ತೊರಳಾಟದ ಧ್ವನಿ ಕೇಳಿಸಿಕೊಂಡವರು ತಾಯಿ ಹೃದಯದ ಅಂಬೇಡ್ಕರ್.. ಹೆಣ್ಣಿನ ನೋವು ಸಮಸ್ಯೆಗಳನ್ನು ಅರಿತುಕೊಂಡ ಅಂಬೇಡ್ಕರ್ ಅವರ ಬಂಧನದ ಬಿಡುಗಡೆಗಾಗಿ ಸಾಕಷ್ಟು ಪಣ ತೊಟ್ಟು ಹಿಂದು ಕೋಡ್ ಮಂಡಿಸುತ್ತಾರೆ ತಿರಸ್ಕಾರಗಳು ಎದುರಾದಾಗ ಹಿಂದು ಕೋಡ್ ಬಿಲ್ ಬಹುಮತ ಪಡೆಯದೇ ಬಿದ್ದೋಗುತ್ತೆ ಎಣ್ಣು ನನ್ನಷ್ಟೆ ಸಮಾನಳು ಎಂದು ಒಪ್ಪಿಕೊಳ್ಳದ , ಹೆಣ್ಣಿನ ಬಿಡುಗಡೆ ಬಯಸದ ಮನಸ್ಥಿತಿ ಇರುವ ಕಡೆ ಹೆಣ್ಣಿನ ಬಿಡುಗಡೆಯ ದಾರಿಗಳು ಮುಚ್ಚಲ್ಪಡುತ್ತವೆ ಎಂದು ತಮ್ಮ ಹುದ್ದೆಯನ್ನೆ ಬಿಟ್ಟು ಹೊರಬಂದ ಹೆಣ್ಣು ಜೀವಿಗಳ ಬಾಳುದ್ಧಾರಕ ಅಂಬೇಡ್ಕರ್.
ದಿನದಿಂದ ದಿನಕ್ಕೆ ಹೆಣ್ಣಿನ ಮೇಲಿನ ಅತ್ಯಾಚಾರ ದೌರ್ಜನ್ಯ ಶೋಷಣೆ ಹೆಚ್ಚಾಗುತ್ತಲೇ ಇದೇ ಈ ಪರಿಸ್ಥಿತಿಯಲ್ಲಿ ಇಂದು ಯಾವ ರಾಜಕಾರಣಿ ಮರಮರನೆ ಮರಗಿ ಮಹಿಳೆಯರ ಪರವಾಗಿದ್ದು ಯಾವ ಮಹಿಳೆಯರಿಗೆ ನ್ಯಾಯ ಕೊಡಿಸಿದ್ದಾರೆ , ನ್ಯಾಯ ಕೊಡಿಸಲು ಸಿದ್ದರಾಗಿದ್ದು ಫಲಿಸದ ವೇಳೆ ಯಾವ ರಾಜಕಾರಣಿ ತನ್ನ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ?
ಯಾವುದಕ್ಕು ಸ್ಪಂದಿಸದ ರಾಜಕಾರಣಿಗಳೆ ಇಂದಿನ ಮಹಿಳೆಯರಿಗೆ ಅಂಬೇಡ್ಕರ್ ಅವರಿಗಿಂತ ಗ್ರೇಟಾಗಿ ಕಾಣುತ್ತಾರೆ ಇಂದೆಂತ ಖೇದನಿಯ ಸಂಗತಿ ಅಲ್ಲವೇ?
ಪಂಜರದೊಳಗೆ ಶತಮಾನಗಳ ಕಾಲದಿಂದಲು ನರಳಾಡುತ್ತಾ ಬದುಕುತ್ತಿದ್ದ ಹೆಣ್ಣು ಮಕ್ಕಳು, ದೂರದಿಂದ ಈ ಸಂಕಟದ ಧ್ವನಿ ಕೇಳಿ ಹತ್ತಿರ ಬಂದು ಕಣ್ಣಾರೆ ಹೆಣ್ಣು ಮಕ್ಕಳ ಸಂಕಟ ನೋಡಿ ಸಹಿಸಿಕೊಳ್ಳಲಾಗದ ಅಂಬೇಡ್ಕರ್ ಹೇಗಾದರು ಮಾಡಿ ಇವರನ್ನ ಪಂಜರದಿಂದ ಹೊರತಂದು ಪುರುಷರಂತೆ ಸಮಾನ ಅವಕಾಶ ನೀಡಿ ಸ್ವತಂತ್ರವಾಗಿ ಬದುಕಲು ಬಿಡಬೇಕೆಂದು ಸಾಕಷ್ಟು ಪ್ರಯತ್ನ ಮಾಡಿ, ಪಂಜರದ ಸುತ್ತ ಅಪಾಯಕಾರಿ ಹುಳುಗಳು ( ಮನುವಾದಿಗಳು) ಇದ್ದವು ಅವುಗಳ ಕಣ್ಣು ತಪ್ಪಿಸಿ ಕೊನೆಗೆ ಒಂದು ಬಲಿಷ್ಠವಾದ ಕೀಲಿಗೈ ಸಿದ್ದ ಮಾಡಿಕೊಂಡು ಪಂಜರದ ಕಡೆ ಬಂದು ಹೆಣ್ಣು ಮಕ್ಕಳ ತೊಳಲಾಟ ಮತ್ತೆ ಮತ್ತೆ ಕಂಡು ಒಳಗೊಳಗೆ ಸಂಕಟ ಪಟ್ಟು , ತುಸು ನಗು ಮುಖದಿಂದ ಪಂಜರದ ಬೀಗ ತೆಗೆದರು .ಎಲ್ಲ ಹೆಣ್ಣು ಮಕ್ಕಳು (ಮಹಿಳೆಯರು) ಪಂಜರದ ಬೀಗ ತೆಗೆದೊಡನೆ ಹೊರಬಂದು ತಮಗೆ ಇಷ್ಟ ಬಂದ ಕಡೆಯಲೆಲ್ಲ ಹೋಗಲಾರಂಭಿಸಿದರು.
ತಮ್ಮ ಇಚ್ಚೆಯಂತೆ ಬದುಕಲಾರಂಭಿಸಿದರು ಸ್ವತಂತ್ರರಾದ ಅವರನ್ನು ಕಂಡು ಮನಸ್ಪೂರ್ತಿ ಸಂತಸ ಪಟ್ಟ ಬಾಬಾ ಸಾಹೇಬರು,,,, ಆದರೆ ಇಂದು ಅದೇ ಹೆಣ್ಣು ಮಕ್ಕಳು ತಮ್ಮನ್ನ ಬಂಧನವೆಂಬ ಪಂಜರದಿಂದ ಬಿಡಿಸಿದವರು ಅಂಬೇಡ್ಕರರೆ ಎಂದು ಒಪ್ಪಿಕೊಳ್ಳದ ಮನಸ್ಥಿತಿಯಲ್ಲಿದ್ದಾರೆ ..
ಮಹಿಳೆಯರನ್ನ ಬಂಧನದಿಂದ ಬಿಡುಗಡೆಗೊಳಿಸಿದ ಅಂಬೇಡ್ಕರ್ ಮುಖ್ಯನಾ? ಅಥವಾ ಯಾವುದಕ್ಕೂ ಸ್ಪಂದಿಸದ, ಎಷ್ಟೋ ಅತ್ಯಾಚಾರದ ಪ್ರಕರಣಗಳನ್ನ ಯಾವ್ಯಾವುದೋ ಕಾರಣಕ್ಕೆ ಮುಚ್ಚಿ ಹಾಕುವ ಹಾಕಿಸುತ್ತಿರುವ ಇಂದಿನ ರಾಜಕಾರಣಿಗಳು ಮುಖ್ಯನಾ? ಯೋಚಿಸಿ…
ಪ್ರಜ್ಞೆಯಿಂದ ಮಾನವೀಯತೆಯಿಂದ ಯೋಚಿಸಿದರೆ ನಿಜವಾದ ಬಂಧನದ ಬಿಡುಗಡೆದಾರರು ಅರಿವಿಗೆ ಬರಬಹುದು. ಸತ್ಯವನ್ನ ಒಪ್ಪಿಕೊಳ್ಳುವ ಮನಸ್ಥಿತಿ ನಮ್ಮೊಳಗೆ ತಂದುಕೊಳ್ಳಬೇಕಿದೆ.