ಸಾಹಿತಿ ಸಾಯಿಲಕ್ಷ್ಮಿ.ಎಸ್ ಬದುಕಿನ ಒಂದು ಮಜಲೂ

0
18
  • ಕಾಲಕ್ಕೆ ಎಂತಹ ಅದ್ಭುತ ಶಕ್ತಿಯಿದೆಯೂ..!
  • ಸಾಹಿತಿ ಸಾಯಿಲಕ್ಷ್ಮಿ.ಎಸ್ ಬದುಕಿನ ಒಂದು ಮಜಲೂ
  • ಕೆ.ಶಿವು.ಲಕ್ಕಣ್ಣವರ

ಇಂದು ಸಾಹಿತಿ ಸಾಯಿಲಕ್ಷ್ಮಿ.ಎಸ್.ರವರ ಪುಸಕವಾದ ‘ಹೂಬತ್ತಿ’ ಬಂದಿತು. ಏಕೋ ಏನೋ ಈ ಪುಸ್ತಕದ ‌ಬಗೆಗೆ ಏನಾದರೂ ನನ್ನ ಅನಿಸಿಕೆ ಬರೆಯುದಕ್ಕೂ ಮೊದಲು ಈ ಸಾಹಿತಿ ಸಾಯಿಲಕ್ಷ್ಮಿ.ಎಸ್.ರವರ ಬದುನಲ್ಲಿಯ ಕೆಲ ವಿಷಯ-ವಿಚಾರಗಳನ್ನು ಹಂಚಿಕೊಳ್ಳಬೇಕೆನಿಸಿತು. ಹಾಗಾಗಿ‌ ಈ ಲೇಖನ ಬರೆದನು…

ಈ ಸಾಯಿಲಕ್ಷ್ಮಿ.ಎಸ್.ರವರ ಬಗೆಗಿನ ಈ ಲೇಖನ ಪ್ರತಿಯೊಬ್ಬ ಮಹಿಳೆಯರ ಬದುಕಿನಲ್ಲಿಯೂ ಒಂದು ಉದಾಹರಣೆಯಾಗಿರಲೂಬಹುದು.

Contact Your\'s Advertisement; 9902492681

ಈಗ ಸರಿಯಾಗಿ ನಲವತ್ತು ವರುಷಗಳ ಹಿಂದೆಯೇ ಬರಹಗಾರ್ತಿ ಸಾಯಿಲಕ್ಷ್ಮಿಯವರು, ಜಯೂ ಹಾಗೂ ಉಮಾರವರು ಬೆಂಗಳೂರು ದೂರವಾಣಿಯಲ್ಲಿ ಟೆಲಿಪೋನ್ ಆಪರೇಟರ್ ಉದ್ಯೋಗಕ್ಕೆ ಸೇರಿಕೊಂಡವರು. ಅವರೆಲ್ಲಾ ಬಿ.ಎಸ್ಸಿ ಪದವಿಯನ್ನು ಮೊದಲ ದರ್ಜೆಯಲ್ಲಿ‌ ಪಡೆದಿದ್ದವರು. ಮೂವರೂ ಮಧ್ಯಮ ವರ್ಗದ‌ ಕುಟುಂಬದ ಹಿನ್ನೆಲೆಯವರು.

ಇದನ್ನೂ ಓದಿ: ಆರೋಪಿ ಈಶ್ವರಪ್ಪ ಬಂಧನವಾಗಲಿ: ಶಾಸಕ ಡಾ. ಅಜಯ್ ಸಿಂಗ್ ಆಗ್ರಹ

ಮನೆಯಲ್ಲಿ ಅವರು ಕೆಲಸಕ್ಕೆ ಹೋಗಬೇಕಾದ ಅನಿವಾರ್ಯವೂ ಕೂಡ ನಾನಾ ಕಾರಣಗಳಿಂದ ಅವರಿಗಿತ್ತು.
ಅದು ಹುಡುಗಾಟದ ವಯಸ್ಸು. ಆಗ ಟೆಲಿಫೋನ್ ಆಪರೇಟರ್ ಕೆಲಸಕ್ಕೆ ಸೇರಿಕೊಂಡರು.
ಅಲ್ಲಿ ಕೆಲಸ‌ ಮಾಡುವ ಸೀನಿಯರ್ ಆಪರೇಟರ್ ಅವರು ರನ್ನಿಂಗ್ ಆಪರೇಟರ್ ಎಂದೇ ಕರೆಸಿಕೊಳ್ಳುತ್ತಿದ್ದ ಅವರನ್ನು ಕೇವಲವಾಗಿ ನಡೆಸಿಕೊಳ್ಳುತ್ತಿದ್ದರು. ಇನ್ನು ಸೂಪರವೈಸರ್‌ ಇವರ ವರ್ತನೆಯಂತೂ ಹೇಳುವುದೇ ಬೇಡ.

ಸರ್ಕಾರ ಅವರನ್ನು ಆಳಲೆಂದು ಅವರನ್ನು ನೇಮಕ ಮಾಡಿರುವಂತೇ ಸಿಡಿದಾಡುವರು. ಸಾಯಿಲಕ್ಷ್ಮಿ, ಜಯೂ‌ ಅವರು ವಿಪರೀತ ‌ಮಾತಿನ ದಾಹದವರು. ಉಮಾ‌‌ ಅವರು ಮಾತ್ರ‌ ಮಿತಭಾಷಿಯಾಗಿದ್ದವರು. ಆಡಿದರೆ ನೆನಪಿನಲ್ಲಿಟ್ಟುಕೊಳ್ಳುವಂತಹ ನುಡಿಮುತ್ತು ಅವರದು. ಹೇಗೋ ಈ ಮೂವರು ಆಪ್ತರಾದರು.

ಅದೊಂದು ಸಂದರ್ಭ. ಡಿಸೆಂಬರ್ ತಿಂಗಳ ವರ್ಷದ‌ ಕಡೆಯ ದಿನ. ಅವರು ಒಟ್ಟಾಗಿ ಅದ್ಯಾವ ಭಗವತ್ ಪ್ರೇರಣೆಯಾಯಿತೋ ಕಾಣೆ ಎಂ.ಜಿ.ರಸ್ತೆಯ
ಜಿ.ಕೆ.ವೇಲ್ ಸ್ಟುಡಿಯೋಗೆ ಹೊಕ್ಕು ಒಂದು ಪೋಟೋ ಕ್ಲಿಕ್‌ ಮಾಡಿಸಿಕೊಂಡರು. ಮೂರು ಕಾಪಿ‌ ಪಡೆದುಕೊಂಡರು. ಅದು ಅವರ ನೆನಪಿನ ಖಜಾನೆ ಸೇರಿತು.

ಇದನ್ನೂ ಓದಿ: ಅಂಬೇಡ್ಕರ್ ಜಯಂತ್ಯುತ್ಸವ: ಚಿಂತನೆಗೆ ವೇದಿಕೆಯಾಗಲಿ-ಗುರುರಾಜ ಸಂಗಾವಿ

ಅವರಲ್ಲಿ ಉಮಾರವರು ಲೆಕ್ಕದಲ್ಲಿ ಅಸಾಧ್ಯ ಬುದ್ದಿವಂತೆಯಾಗಿದ್ದವರು. ಆಕೆಗೆ ಬ್ಯಾಂಕ್, ಎಲ್ಐಸಿ‌ ಮುಂತಾದ ಹಲವು ಸರ್ಕಾರದ ಒಡೆತನದ ಸಂಸ್ಥೆಗಳಿಂದ ಕೆಲಸಕ್ಕೆ ಆಯ್ಕೆಯಾದ ಪತ್ರ ಬಂದಿತು. ಡಿಫೆನ್ಸ್ ಕಡೆಯಿಂದಲೂ ಕರೆ ಬಂದಾಗ ಅದನ್ನು ಸ್ವೀಕರಿಸಿ ದೂರದೂರಿನ ವರ್ಗದ ಸುಖ-ದು:ಖವನ್ನು ಅನುಭವಿಸಿ ಅಲ್ಲೇ ಲೆಕ್ಕಾಧಿಕಾರಿಯಾಗಿ ಸಾರ್ಥಕ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಾಯಿತು. ಏಳೂವರೆ ವರ್ಷ ಅವಧಿ ಪೂರ್ವ ಉದ್ಯೋಗವನ್ನು ಸಂಸಾರಕ್ಕಾಗಿ‌ ತ್ಯಜಿಸಿ ಬರಬೇಕಾಯಿತು ಅವರು.

ಜಯೂರವರು ಸೇರಿದ್ದ ಸಂಸ್ಥೆಯಲ್ಲಿ ನಿವೃತ್ತಿಯವರೆಗೂ‌ ಮುಂದುವರೆದು ಉತ್ತಮ ಕೆಲಸಗಾರ್ತಿ ಎಂಬ ಪುರಸ್ಕಾರದೊಂದಿಗೆ ಹೊರಬಂದರು.

ಇನ್ನೂ ಸಾಯಿಲಕ್ಷ್ಮಿಯವರು ಲೆಕ್ಕದಲ್ಲಿ ಅಸಾಧಾರಣ ಪ್ರವೀಣೆಯಾಗಿದ್ದವರು. ಹಾಗಾಗಿ ಬ್ಯಾಂಕ್, ಎಲ್ಐಸಿ ಹೀಗೆಯೇ ಯಾವ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲಿಲ್ಲ. ಫಲಿತಾಂಶ ಹೇಗೋ ಗೊತ್ತಿತ್ತು. ಅಹಲ್ಯೆ‌ ಕಲ್ಲಾಗಿ ರಾಮನ ಬರವಿಗೆ ನಿಂತಂತೆ ಸಾಯಿಲಕ್ಷ್ಮಿಯವರು ಹತ್ತು ವರ್ಷ ಟೆಲಿಪೋನ್ ಸಂಸ್ಥೆಯಲ್ಲಿ ಯಾವ ಬದಲಾವಣೆಯನ್ನು ಕಾಣುವ ಕನಸು, ಭರವಸೆಯಿಲ್ಲದೇ ಓದು ಮುಂದುವರೆಸುತ್ತ ಕೆಲಸ ಮಾಡಿದರು.

ಇದನ್ನೂ ಓದಿ: ಅಂಬೇಡ್ಕರ್ ದೇಶದ ಶ್ರಮಿಕ, ಕಾರ್ಮಿಕ, ಶೋಷಿತರ ಶಕ್ತಿಯಾಗಿದ್ದರು

ಕಡೆಗೊಂದು ದಿನ‌ ಯುಪಿಎಸ್ ಸಿ ಜಾಹೀರಾತು ನೋಡಿ ಇಲಾಖೆ ಮೂಲಕ ಅರ್ಜಿ ಸಲ್ಲಿಸಿ, ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕಿಯಾಗಿ ವೃತ್ತಿಗೆ ಆಯ್ಕೆಯಾದರು. ಸಾಯಿಲಕ್ಷ್ಮಿಯವರ ವಿದ್ಯಾಭ್ಯಾಸ ‌ಅವರ ಕೈಹಿಡಿದು ತೊರೆಯಲ್ಲಿ‌ ಈಜುತ್ತಿದ್ದ‌ ಅವರನ್ನು ಸಮುದ್ರಕ್ಕೆ ತಂದು ಬಿಟ್ಟಿತು. ಅದು ಸಾಯಿಲಕ್ಷ್ಮಿಯವರ ಬದುಕು ಜೀವನಾನುಭವದಿಂದ ಸಮೈದ್ಧವಾಗಲು ಕಾರಣವಾಯಿತು.

ಸಾಯಿಲಕ್ಷ್ಮಿಯವರ ಬದುಕಿನ ಈ ಅಭಿವೃದ್ಧಿಗೆ
ಟೆಲಿಪೋನ್ ಇಲಾಖೆಯ ಕರ್ತವ್ಯವೇ‌ ಮೂಲ ಕಾರಣವಾಯಿತು. ಅಲ್ಲಿ ದೊರೆಯುತ್ತಿದ್ದ ಸಂಬಳ ಮತ್ತು ಓವರ್ ಟೈಂ ಕೆಲಸದ ಭತ್ಯದಿಂದ ಸಾಯಿಲಕ್ಷ್ಮಿಯವರು ಮುಂದೆ ಓದಲು ಸಾಧ್ಯವಾಯಿತು. ಅಂದಿನ ಸಣ್ಣ ಸಂಬಳದಲ್ಲೇ ಅಲ್ಲಿಯ ಸೊಸೈಟಿಯಿಂದ ಕಂತಿನ‌ ಮೇಲೆ‌ ನಿವೇಶನ ಕೊಳ್ಳಲು ಸಾಧ್ಯವಾಯಿತು.

ಈಗಿನ ವಿಶ್ರಾಂತ ಬದುಕಲ್ಲಿ‌ ಬಾಡಿಗೆ ಕಟ್ಟುವ, ಬಾಡಿಗೆದಾರರನ್ನು ಅನುಸರಿಸಿ ಬಾಳ್ವೆ ನಡೆಸುವ‌ ಸಮಸ್ಯೆಯಿಂದ ಸ್ವಗೃಹ ಪಾರು ಮಾಡಿತು. ಅಲ್ಲಿಯ ಸೇವಾವಧಿ, ರಜೆ ಎಲ್ಲವೂ ಆಕಾಶವಾಣಿಗೆ ಸೇರಿಕೊಂಡಿತು.

ವಿವಿಧ ರಂಗದಲ್ಲಿನ ಉದ್ಯೋಗ ತಂದೊಡ್ಡಿದ ಕವಲು ದಾರಿ ಅವರನ್ನು ಬೇರ್ಪಡಿಸಿದರೂ ಅಂತರಾಳದಲ್ಲಿನ ಸ್ನೇಹದ ಕಾರಂಜಿಯ ಆತ್ಮೀಯ ಸಿಂಚನದಲ್ಲಿ ಆ ಹಳೆಯ ಗೆಳತಿಯವರ ಬಂಧನ ಗಾಢವಾಗುತ್ತ ಪಕ್ವವಾಗುತ್ತಿದ್ದುದು ದಿಟ.

ಇದನ್ನೂ ಓದಿ: ನಾನು ಮಣ್ಣಿಗೆ ಹೋಗುವುದರೊಳಗೆ ಜೆಡಿಎಸ್‌ʼನಿಂದ ದಲಿತ ಸಿಎಂ ಮಾಡುವೆ: ಕುಮಾರಸ್ವಾಮಿ ಘೋಷಣೆ

ದೇವರು ಎಷ್ಟು ಬಿಡುವಾಗಿ, ಚಂದವಾಗಿ ಗೌರವಯುತವಾಗಿ‌ ಅವರ ಮೂವರ‌ ಬದುಕನ್ನು ಅರಳಿಸಿದ ಎಂದು ಕೊಳ್ಳತ್ತಾರೆ ಅವರು. ಆ ದೇವರಿಗೆ ವಂದನೆ ಸಲ್ಲಿಸಲು ಪದಗಳು ಸೋಲುತ್ತವೆ ಅವರಿಗೀಗ.

ಇಂದು ಈ ಮೂವರ‌ ಮೈತ್ರಿ ಬದುಕಿನ‌ ಕಾಲಘಟ್ಟಕ್ಕೆ ಅನುಗುಣವಾಗಿ ವಿಕಸಿಸುತ್ತಿದೆ. ಈಗಂತೂ ಪ್ರಶಾಂತ, ಗಂಭೀರ ಹೊಳೆಯಂತೆ ಸಾಗಿದೆ ಬದುಕು.

ಈ ಮೂವರೂ ಸ್ನೇಹಿತೆಯರು ಮತ್ತೊಮ್ಮೆ ಅರಮನೆ ನಗರಿಯ ಸುತ್ತಮುತ್ತ ಪ್ರವಾಸಕ್ಕೆ ಇತ್ತೀಚೆಗೆ ಹೊರಟರು. ಆವರ ರೈಲು ಪ್ರಯಾಣದಲ್ಲಿ ಆಡದೆ ಅಡಗಿಕೂತ ಅದೆಷ್ಟೋ ಮಾತುಗಳೆಲ್ಲ ಅಭಿವ್ಯಕ್ತಿ ರೂಪ ತೊಟ್ಟವು.

ವರನಾಥ ಕಲ್ಲಹಳ್ಳಿಯ ಹೇಮಾವತಿ ಹಿನ್ನೀರಿನ ತೆಪ್ಪದ ಯಾತ್ರೆಯಲ್ಲಿ ಅವರ ಸಡಗರ ಹೇಳತೀರದು. ಕಾಲ ಇಲ್ಲಿ ಸ್ವಲ್ಪ ಕಾಲ ಹೀಗೆಯೇ ನಿಲ್ಲಬಾರದೇ ಎಂದು ಅವರಿಗೆ ಎನ್ನಿಸಿದ್ದೂ ಉಂಟು. ಅದು ಹಾಗೆ ನಿಂತರ ಜೀವಜಾತ್ರೆಯ ಲಯದ ಗತಿಯೇನು? ಜೊತೆಯಲ್ಲಿ ಒಂದು‌ ಪೋಟೋ ಸೇರಿಕೊಂಡಿತು ಅಂದಿನ ಸಾಕ್ಷಿಯಾದ ಭಾವಚಿತ್ರದ ಮುಂದುರುಳಿದ ಬದುಕಿನ ರೂಪವಾಗಿ ಅವರಿಗೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here