ಕಲಬುರಗಿ: ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸದೆ ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಪ್ರಾದೇಶಿಕವಾಗಿರುವ ಶೈಕ್ಷಣಿಕ ಅಸಮಾನತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಒಂದು “ರಾಜ್ಯ ಶಿಕ್ಷಣ ನೀತಿ” ರೂಪಿಸಬೇಕೆಂದು ಸ್ಪೂಡೆಂಟ್ ಇಸ್ಲಾಮಿಕ್ ಆರ್ಗನೈ ಜೆಷನ್ ಆಫ್ ಇಂಡಿಯಾ ಒತ್ತಾಯಿಸಿದೆ.
ಶನಿವಾರ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಸ್ಪೂಡೆಂಟ್ ಇಸ್ಲಾಮಿಕ್ ಆರ್ಗನೈ ಜೆಷನ್ ಆಫ್ ಇಂಡಿಯಾ ವತಿಯಿಂದ ರಾಜ್ಯ ಶಿಕ್ಷಣ ನೀತಿ ಶಿಕ್ಷಣದ ಮೂಲ ಭಾಗಿದಾರರೊಂದಿಗೆ ಸಮಾಲೋಚನೆ ಸಭೆಯಲ್ಲಿ ಗಣ್ಯರು ನಿರ್ಧಾರವನ್ನು ಕೈಗೊಂಡಿದ್ದರು.
ಭಾರತವು ಸಾಮಾಜಿಕ ಸಾಂಸ್ಕøತಿಕ ಮತ್ತು ಭೌಗೋಳಿಕವಾಗಿ ವೈವಿಧ್ಯಮಯವಾದಂತಹ ದೇಶವಾಗಿದೆ, ಶಿಕ್ಷಣವು ಸಂವಿಧಾನಬದ್ಧವಾದ ಮೂಲಭೂತ ಹಕ್ಕಾಗಿದೆ, ಭಾರತದ ಪ್ರತಿ ಮಗುವೂ ಕೂಡ ಶಿಕ್ಷಣದಿಂದ ವಂಚಿತವಾಗಬಾರದು ಎಂಬುದು ಸಂವಿಧಾನದ ಆಶಯವೂ ಕೂಡ ಆಗಿದೆ.
ಕೇಂದ್ರ ಸರ್ಕಾರವು 2020ರಲ್ಲಿ “ರಾಷ್ಟ್ರೀಯ ಶಿಕ್ಷಣ ನೀತಿ” ಯನ್ನು ಜಾರಿಗೊಳಿಸಿದೆ ಮತ್ತು ಅದನ್ನು ಜಾರಿಗೊಳಿಸಿದ ಮೊದಲ ರಾಜ್ಯವು ಕರ್ನಾಟಕವಾಗಿದೆ, ಅನೇಕ ರೀತಿಯ ಚರ್ಚೆ, ಸಂವಾದ ಮತ್ತು ಟೀಕೆ, ವಿಮರ್ಶೆಗಳ ನಂತರ ಸಂವಿಧಾನದ ಷೆಡ್ಯೂಲ್ 7ರ ಪ್ರಕಾರ ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿ ಬರುವುದರಿಂದ ಮತ್ತು ಭಾರತದ ಒಟ್ಟಾರೆ ಬಹುತ್ವತೆಯನ್ನು ಮುಂದಿಟ್ಟುಕೊಂಡು ಆಯಾ ರಾಜ್ಯಗಳಿಗೆ ಆಯಾ ರಾಜ್ಯಗಳ ಶೈಕ್ಷಣಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ರಾಜ್ಯ ಶಿಕ್ಷಣ ನೀತಿ ರೂಪಿಸಬೇಕು ಎನ್ನುವಂತಹ ಆಗ್ರಹಗಳು ಕೇಳಿ ಬಂದವು.
ಅದರ ಪ್ರಕಾರ ಈ ಬಾರಿಯ ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸದೆ ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಪ್ರಾದೇಶಿಕವಾಗಿರುವ ಶೈಕ್ಷಣಿಕ ಅಸಮಾನತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಒಂದು “ರಾಜ್ಯ ಶಿಕ್ಷಣ ನೀತಿ” ರೂಪಿಸಬೇಕೆನ್ನುವ ನಿರ್ಧಾರವನ್ನು ಕೈಗೊಂಡಿದೆ.ರಾಜ್ಯ ಸರ್ಕಾರವು ಈಗಾಗಲೇ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸುವುದಕ್ಕಾಗಿ ಒಂದು ಆಯೋಗವನ್ನು ಸಹ ರಚಿಸಿದೆ, ಆಯೋಗವು ನೀತಿಯ ಕರಡು ತಯಾರಿಕೆಯಲ್ಲಿ ತೊಡಗಿದೆ, ಆದರೆ ನಾಡಿನ ಜನ ಮತ್ತು ಅನೇಕ ಶಿಕ್ಷಣ ತಜ್ಞರ ಹಾಗೂ ವಿಷಯ ಪರಿಣಿತರ ಅಭಿಪ್ರಾಯದಂತೆ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸುವಾಗ ಪ್ರಾದೇಶಿಕವಾರು ವಿಭಿನ್ನವಾಗಿರುವ ಕರ್ನಾಟಕದ ಶೈಕ್ಷಣಿಕ ಸ್ಥಿತಿಗತಿಗಳು ಮತ್ತು ಅಲ್ಲಿ ಎದುರಾಗಿರತಕ್ಕಂತಹ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರ ರೂಪಿಸುವಂತಹ ಮತ್ತು ಒಟ್ಟಾಗಿ ರಾಜ್ಯದ ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣದಲ್ಲಿ ಪ್ರಸ್ತುತ ಸ್ಥಿತಿಗತಿಗಳನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಶಿಕ್ಷಣ ನೀತಿ ರೂಪಗೊಳ್ಳಬೇಕೆಂಬುದು ಶಿಕ್ಷಣ ತಜ್ಞರ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಪ್ರಕ್ರಿಯೆ ರಾಜ್ಯ ಶಿಕ್ಷಣ ನೀತಿಯ ಆಯೋಗದಿಂದ ನೆರವೇರುತ್ತಿಲ್ಲ ಎನ್ನುವಂತಹ ಆರೋಪಗಳು ಕೇಳಿ ಬರುತ್ತಿದೆ, ಈ ನಿಟ್ಟಿನಲ್ಲಿ ಎಸ್.ಐ.ಓ ಒಂದು ವಿದ್ಯಾರ್ಥಿ ಸಂಘಟನೆಯಾಗಿ ಈ ಬಗೆಯ ಕಾರ್ಯಯೋಜನೆಗಳನ್ನು ರೂಪಿಸುತ್ತಿದೆ, ಶಿಕ್ಷಣವನ್ನು ತನ್ನ ಆದ್ಯತೆಯನ್ನಾಗಿ ಸರ್ಕಾರಗಳು ಪರಿಗಣಿಸಬೇಕು ಎನ್ನುವಂತಹ ವಿಚಾರವನ್ನು ಎಸ್.ಐ.ಓ ಮುಂದಿಡುತ್ತದೆ.
ಈಗಾಗಲೇ ಆಯೋಗವು ನೀತಿಯ ತಯಾರಿಕೆಯಲ್ಲಿ ತೊಡಗಿರುವಾಗ ಆ ನೀತಿಗೆ ಕರ್ನಾಟಕದ ಪ್ರಾದೇಶಿಕವಾಗಿ ಶಿಕ್ಷಣದ ಕ್ಷೇತ್ರದಲ್ಲಿ ಕೆಲಸ ಮಾಡಿರತಕ್ಕಂತಹ ಮತ್ತು ಆಯಾ ವಿಷಯದ ಪರಿಣಿತರನ್ನು ಒಳಗೊಂಡಂತೆ ಶಿಕ್ಷಣದ ಮೂಲ ಬಾಗಿದಾರರೊಂದಿಗೆ ಚರ್ಚೆ, ಸಂವಾದಗಳನ್ನು ನಡೆಸಿ, ಸಭೆಯಲ್ಲಿ ಪ್ರಸ್ತಾಪವಾಗುವ ಅಂಶಗಳ ಮೇಲೆ ನಿರ್ಣಯ ಕೈಗೊಳ್ಳಲಾಗಿದೆ, ಅದು ನಾವು ಬಯಸುವಂತಹ ಶಿಕ್ಷಣ ನೀತಿ ಹೇಗಿರಬೇಕು ಎಂಬಂತಹ ಅಂಶಗಳನ್ನು ಪ್ರತಿನಿಧಿಸುತ್ತವೆ, ಇವುಗಳನ್ನು ಸರ್ಕಾರ ರಚಿಸಿರುವ ಶಿಕ್ಷಣ ನೀತಿ ಆಯೋಗಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವುದು ಸಮಾಲೋಚನಾ ಸಭೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಸಮಾಲೋಚನಾ ಸಭೆಯಲ್ಲಿ ಎಸ್.ಐ.ಓ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಪೀರ್ ಲಟಗೇರಿ, ಸಾಮಾಜಿಕ ಹೋರಾಟಗಾರ ರಝಾಕ್ ಉಸ್ತಾದ್, ಶಾಹಿನ್ ಶಿಕ್ಷಣ ಸಂಸ್ಥೆಯ ಸಿಇಓ ತೌಸೀಪ್ ಮಡಿಕೇರಿ, ಬೆಂಗಳೂರಿನ ರಿಯಾಜ್ ಕೊಪ್ಪಳ, ನಗರದ ಸಾಮಾಜಿಕ ಹೋರಾಟಗಾರ ಮಸ್ತಾನ್ ಬಿರಾದಾರ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಲ್ಲಯ್ಯ ಗುತ್ತೇದಾರ್, ಪೆÇ್ರ. ಸಂಜಯ್ ಮಕಲ್, ಉಪನ್ಯಾಸಕರಾದ ಜಾಹೇದಾ ಮೇಡಮ್, ಪೆÇ್ರ. ಜಾವೇದ್ ಅಖ್ತರ್, ಐಟಾ ಸ್ಥಾನೀಯ ಅಧ್ಯಕ್ಷರಾದ ಕಲೀಮ್ ಆಬಿದ್, ಉಪನ್ಯಾಸಕರಾದ ಅನಿಲ್ ತಿಂಗ್ಲೆ, ಸಂವಾದ ಸಂಸ್ಥೆಯ ದಿಲ್ಶಾದ್ ಹಾಗೂ ಎಸ್.ಐ.ಓ ನಗರದ ಅಧ್ಯಕ್ಷರಾದ ಸುಫಿಯಾನ್ ಜೈನ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.