ಸೇಡಂ; ಪಟ್ಟಣದ ಹೊರವಲಯದ ಪೂರ್ಣಾನಂದ ಹೋಟೆಲ್ ಸಮೀಪದಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡವರನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ತಮ್ಮದೇ ಕಾರಿನಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದರು.
ಸಚಿವರು ಭಾನುವಾರ ರಾತ್ರಿ ಖಾಸಗಿ ಕಾರ್ಯಕ್ರಮವನ್ನು ಮುಗಿಸಿಕೊಂಡು ಕಲಬುರಗಿ ಕಡೆ ತೆರಳುತ್ತಿದ್ದರು. ಸೇಡಂ-ಕಲಬುರಗಿ ರಾಜ್ಯ ಹೆದ್ದಾರಿ-10ರ ಪೂರ್ಣಾನಂದ ಹೋಟೆಲ್ ಸಮೀಪ ಅಪಘಾತ ಸಂಭವಿಸಿತು. ಕಲಬುರಗಿಯ ಜಿಡಿಎ ಕಾಲೊನಿ ನಿವಾಸಿ ವೀರಭದ್ರಯ್ಯ ನಾಗಯ್ಯ (38) ಅವರು ಗಾಯಗೊಂಡಿದ್ದರು. ರಸ್ತೆ ಬದಿಯಲ್ಲಿ ಬಿದ್ದು ನರಳುತ್ತಿದ್ದ ಗಾಯಾಳುವನ್ನು ಗಮನಿಸಿದ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಸೇಡಂನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.
ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಟ್ರಾಮಾ ಸೆಂಟರ್‌ಗೆ ದಾಖಲಿಸುವಂತೆ ಸೂಚಿಸಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.