ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

0
25

ಸುರುಪುರು : ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ “ಮಹಿಳೆಯರಲ್ಲಿ ಹೂಡಿಕೆ ಪ್ರಗತಿಯನ್ನು ವೇಗಗೊಳಿಸುತ್ತದೆ” ಎಂಬ ವಿಷಯದ ಮೇಲೆ ಉಪನ್ಯಾಸ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಡಾ.ಕವಿತಾ ಮಿಶ್ರ, ಶ್ರೀಗಂಧದ ಬೆಳೆಗಾರರು ಮತ್ತು ಪ್ರಗತಿಪರ ರೈತರು ಹಾಗೂ ಡಾ.ಶಾಂತೆಶ್ವರಿ ರೇಡಿಯೋಲೋಜಿಸ್ಟ್ ಕಲಬುರ್ಗಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿತು.

Contact Your\'s Advertisement; 9902492681

ಅಥಿತಿಗಳಾದ ಡಾ.ಕವಿತಾ ಮಿಶ್ರ ರವರು ಉಪನ್ಯಾಸ ನೀಡಿ, ಸಾವಯವ ಕೃಷಿ ಮತ್ತು ಹನಿ ನೀರಾವರಿ ಮೂಲಕ 10 ಎಕರೆ ಬಂಜರು ಭೂಮಿಯನ್ನು ಸ್ವರ್ಗದ ತುಂಡಾಗಿ ಪರಿವರ್ತಿಸಿದ್ದೇನೆ. 20 ವರ್ಷಗಳ ಹಿಂದೆ ಇಂನ್ಫೋಸಿಸ್ ಕಂಪನಿ ಇಂದ ಬಂದ ಉದ್ಯೋಗವನ್ನು ನಿರಾಕರಿಸಿದ್ದೇನೆ, ಮದುವೆಯಾಗಿ ಗಂಡನ ಮನೆಗೆ ಬಂದಾಗ ಛಲದಿಂದ ಬರಡು ಭೂಮಿಯನ್ನು ಸ್ವರ್ಗವಾಗಿ ಮಾರ್ಪದಿಸಿದ್ದೇನೆ ಎಂದರು.

ಹಾಗೆ ಜಮೀನಲ್ಲಿ 2100 ಶ್ರೀಗಂಧ, 1500 ದಾಳಿಂಬೆ, 90 ಮಾವು, 300 ನಿಂಬೆ, 800 ಪೇರಲ,150 ಜಾಮೂನ್, 150 ನೆಲ್ಲಿಕಾಯಿ, 150 ಡ್ರಮ್ ಸ್ಟಿಕ್, 100 ಕರಿಬೇವಿನ ಎಲೆಗಳು, 100 ಮಲ್ಲಿಗೆ, 100 ತೆಂಗಿನಕಾಯಿ, 100 ಸೀತಾಫಲ, ಇಲ್ಲಿ ಬೆಳೆಯುವ ಇತರ ಸಸ್ಯಗಳಲ್ಲಿ ಸಿಹಿ ಸಪೋಟ, ಬಾಳೆ, ಶ್ರೀಗಂಧ, ಕಾಫಿ, ಮೆಣಸು, ಅರಿಶಿನ ಸೇರಿವೆ ಎಂದು ಬಹಳ ಪ್ರೀತಿಯಿಂದ ಬೆಳೆದ ಬೆಳೆಗಳ ವಿವರವನ್ನು ಹಂಚಿಕೊಂಡರು ಹಾಗೆ ಹೆಣ್ಣು ವಿಶ್ವ ಸ್ವರೂಪಿ, ಮಹಾ ಶಕ್ತಿ ಹೆಣ್ಣು ಮನಸು ಮಾಡಿದರೆ ಏನು ಬೇಕಾದರೂ ಸಾದಿಸಬಳ್ಳಲು ಎಂದರು ಜೊತೆಗೆ ತಾವು ನಡೆದು ಬಂದ ಕಷ್ಟದ ಹೆಜ್ಜೆಗಳ ಹೇಳುಬೀಳುವಿನ ಕತೆಯನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು.

ಜೀವನದಲ್ಲಿ ಏನೇ ಹಾಗಲಿ ಮುನ್ನುಗ್ಗಿ ಸಾಧನೆ ಮಾಡಿ ಎಂದು ಮುಖ್ಯವಾಗಿ ಮಹಿಳಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಹೆಣ್ಣಿನಿಂದ ಆರಂಭ ಹೆಣ್ಣಿನಿಂದನೆ ಹಂತ್ಯ ಎನ್ನುವ ನುಡಿಯೊಂದಿಗೆ ತಮ್ಮ ನುಡಿಗಳನ್ನು ಮನದಟ್ಟು ಮಾಡಿದರು.

ಮತ್ತೊರ್ವ ಅಥಿತಿಗಳಾದ ಡಾ.ಶಾಂತೆಶ್ವರಿ ರೇಡಿಯೋಲೋಜಿಸ್ಟ್ ರವರು ಮಹಿಳೆಯರ ಆರೋಗ್ಯವನ್ನು ಸುಧಾರಿಸುವುದು ಕೇವಲ ವೈದ್ಯಕೀಯ ಅಥವಾ ಸಾರ್ವಜನಿಕ ಆರೋಗ್ಯ ಸಮಸ್ಯೆಯಲ್ಲ. ಇದು ಸಾಮಾಜಿಕ ಸಮಸ್ಯೆಯೂ ಆಗಿದೆ, ಮತ್ತು ಆ ಸಮಸ್ಯೆಯನ್ನು ಪರಿಹರಿಸುವುದು ಸಾಮಾಜಿಕ ಪ್ರತಿಫಲವನ್ನು ತರುತ್ತದೆ. ಆರೋಗ್ಯವಂತ, ವಿದ್ಯಾವಂತ, ಸಶಕ್ತ ಮಹಿಳೆಯರು ತಮ್ಮ ಸ್ವಂತ ಪೀಳಿಗೆಯ ಆರ್ಥಿಕ ಉತ್ಪಾದಕತೆಗೆ ಉತ್ತಮ ಕೊಡುಗೆ ನೀಡಲು ಸಮರ್ಥರಾಗಿದ್ದಾರೆ ಮತ್ತು ಮುಂದಿನ ಪೀಳಿಗೆಗೆ ಈ ಪ್ರಗತಿಯನ್ನು ರವಾನಿಸಲು ಸಾಧ್ಯವಾಗುತ್ತದೆ. ಮಹಿಳೆಯರು ಮತ್ತು ಪುರುಷರು ಸ್ಥಾನಮಾನದಲ್ಲಿ ತುಲನಾತ್ಮಕವಾಗಿ ಸಮಾನವಾಗಿರುವ ಸಮಾಜಗಳಲ್ಲಿ, ಆರ್ಥಿಕತೆಯು ವೇಗವಾಗಿ ಬೆಳೆಯುತ್ತದೆ ಮತ್ತು ಪ್ರತಿಯೊಬ್ಬರ ಆರೋಗ್ಯ ಮತ್ತು ಯೋಗಕ್ಷೇಮ ವು ಕೂಡ ಸುಧಾರಣೆಗೊಳ್ಳುತ್ತದೆ ಹಾಗೆ ಹಲುವು ಮಹಿಳಾ ಅರೋಗ್ಯ ಕಿವಿಮಾತುಗಳನ್ನು ಹಂಚಿಕೊಂಡರು.

ಪ್ರಾಚಾರ್ಯರಾದ ಡಾ.ಶರಣಬಸಪ್ಪ ಸಾಲಿಯವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಪಾರ್ವತಿ ಪಾಟೀಲರವವು ಅಥಿತಿಗಳನ್ನ ಸನ್ಮಾನಿಸಿದರು, ಡಾ.ಅಶೋಕ್ ಪಾಟೀಲ್, ಪರೀಕ್ಷಾ ವಿಭಾಗದ ಡೀನ್, ಪ್ರೊ.ಶರಣಗೌಡ ಪಾಟೀಲ್, ಅಕಾಡೆಮಿಕ್ ಡೀನ್ ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಜ್ಯೋತಿ, ಸಿಂಚನ,ಪೂಜಾ ಹಾಗೂ ಅನುಷಾ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here