ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು.
ಈ ವೇಳೆ ಬಿಜೆಪಿ ಪಕ್ಷದ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ ಮಾನವ ಮಹಾಮಾನವ ನಾಗುವ,ಮಾನವೀಯತೆಯ ಸಿದ್ದಾಂತವನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಪ್ರತಿಪಾದಿಸಿದ್ದಾರೆ ಎಂದರು.
ಈಗಿನ ಆಧುನಿಕ, ಒತ್ತಡದ ಕಾಲದಲ್ಲಿ ಮಾನವನು ಆಸೆ,ಅಸೂಯೆಗಳನ್ನು ತೊಡೆದು ಹಾಕಿ ಸಮಾಜದ ಒಳಿತಿಗಾಗಿ ಬದುಕುವುದು ಅವಶ್ಯಕವಾಗಿದೆ. ಭೇಧ ಭಾವಗಳನ್ನು ತೊಡೆದು ಹಾಕಿ ಸಮಾಜದಲ್ಲಿ ಸಮಾನತೆಯನ್ನು ಸಾರಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ಸಂದೇಶಗಳನ್ನು ಪಾಲಿಸುತ್ತ ಸಮಾಜದಲ್ಲಿ ಮೇಲು ಕೀಳು ಎನ್ನದೆ ಸಮಾನತೆಯ ಬದುಕು ನಮ್ಮದಾಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಚಂದ್ರ ರೇಡ್ಡಿ,ಹರಿ ಗಲಾಂಡೆ,ಕಿಶನ ಜಾಧವ,ಶರಣಗೌಡ ಚಾಮನೂರ, ಭೀಮರಾವ ದೊರೆ,ಶಿವಶಂಕರ ಕಾಶೆಟ್ಟಿ,ಚನ್ನಯ್ಯ ಸ್ವಾಮಿ, ಪ್ರಕಾಶ ಪುಜಾರಿ,ಅಯ್ಯಣ್ಣ ದಂಡೋತಿ,ರಾಜಶೇಖರ ಅರಳಗುಂಡಗಿ,ಸತೀಶ ಸಾವಳಗಿ, ಭಾರತ ರಾಠೋಡ,ಕಿಶನ ನಾಯಕ, ಚಂದ್ರಶೇಖರ ಬೆಣ್ಣೂರ,ಸತೀಶ ಸಾವಳಗಿ,ಮಲ್ಲಿಕಾರ್ಜುನ ಸಾತಖೇಡ, ಬಸವರಾಜ ಪಗಡಿಕರ, ನಿರ್ಮಲ ಇಂಡಿ,ಯಂಕಮ್ಮ ಗೌಡಗಾಂವ, ಉಮಾದೇವಿ ಗೌಳಿ,ಶರಣಮ್ಮ ಯಾದಗಿರಿ, ಬಾಲರಾರಾಜ ಪಗಡಿಕರ,ಉದಯ ಕುಮಾರ ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.