ಕಲಬುರಗಿಯಲ್ಲಿ ಮತದಾನದ ಜಾಗೃತಿ ಮೂಡಿಸಿ

0
40

ಕಲಬುರಗಿ: ಪ್ರಜಾಪ್ರಭುತ್ವದ ಈ ದೊಡ್ಡ ಹಬ್ಬದಲ್ಲಿ ಪ್ರತಿಯೊಬ್ಬರ ಮತವೂ ಅತ್ಯಂತ ಪವಿತ್ರವಾಗಿದ್ದು. ಈ ನಿಟ್ಟಿನಲ್ಲಿ ಕಡ್ಡಾಯ ಮತದಾನದ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಯುವಕರು ಮಾಡಬೇಕಿದೆ ಎಂದು ಕಲಬುರಗಿ ನಗರ ಪೋಲಿಸ್ ಉಪ ಆಯುಕ್ತೆ ಕನಿಕಾ ಸಿಕ್ರಿವಾಲ್ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಕಲಬುರಗಿ ಹಾಗೂ 32 ಕರ್ನಾಟಕ ಬಟಾಲಿಯನ್ ಎನ್.ಸಿ.ಸಿ. ಹಾಗೂ ಶರಣಬಸವ ವಿಶ್ವವಿದ್ಯಾಲಯ (ಎಸ್‍ಡಿ ಆಂಡ್ ಎಸ್‍ಡಬ್ಲ್ಯೂ), ಶರಣಬಸವೇಶ್ವರ ವಿಜ್ಞಾನ ಕಾಲೇಜು (ಎಸ್‍ಡಿ ಆಂಡ್ ಎಸ್‍ಡಬ್ಲ್ಯೂ), ಶರಣಬಸವೇಶ್ವರ ಕಲಾ ಮತ್ತು ವಾಣಿಜ್ಯ ಕಾಲೇಜು, ಸರ್ಕಾರಿ (ಸ್ವಾಯತ್ತ) ಕಾಲೇಜು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ವಿ.ಜಿ. ವುಮೆನ್ಸ್ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಇವರ ಸಂಯುಕ್ತಾಶ್ರಯದಲ್ಲಿ ಎಸ್.ಬಿ. ಕಾಲೇಜು ಮೈದಾನದ ಆವರಣದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಮತದಾರರ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಲೋಕಸಭೆ ಚುನಾವಣೆಯಲ್ಲಿ ಪಾರದರ್ಶಕ ಮತದಾನ ವ್ಯವಸ್ಥೆಗೆ ವಿರುದ್ದವಾದ ಯಾವುದೇ ವಿದ್ಯಮಾನ ನಡೆದರೂ ಯುವಕರು ಅಂತಹ ಪ್ರಯತ್ನಗಳನ್ನು ತಡೆಯಲು ಪೂರಕ ಕ್ರಮಕೈಗೊಳ್ಳಲು ಜಿಲ್ಲಾಡಳಿತದ ಗಮನಕ್ಕೆ ತರಬೇಕು ಮತದಾನದಲ್ಲಿ ಎಲ್ಲರೂ ಭಾಗವಹಿಸುವಂತೆ ಈ ಸಂದಂರ್ಭದಲ್ಲಿ ಕರೆ ನೀಡಿದರು.

ಮಹಾನಗರ ಪಾಲಿಕೆಯ ಉಪ ಆಯುಕ್ತ ಮಾಧವ ಗಿತ್ತೆ ಮಾತನಾಡಿ, ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ನಮ್ಮ ಜನನಾಯಕರನ್ನು ಆಯ್ಕೆ ಮಾಡುವ ಅಧಿಕಾರ ನಮಗೆ ಕೊಟ್ಟಿದೆ. 18 ವರ್ಷ ಮೀರಿದ ಯುವಕರು ಇದೇ ಮೊದಲ ಬಾರಿ ಮತದಾನ ಮಾಡಲಿದ್ದು.

ಈ ಸಂವಿಧಾನಬದ್ದ ಅವಕಾಶ ಬಳಿಸಿಕೊಂಡು ದೇಶ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಬೇಕು 2024ರ ಮೇ 7 ರಂದು ಮತದಾನ ದಿನದಂದು ತಪ್ಪದೇ ಮತಗಟ್ಟೆ ಹೋಗಿ ಮತವನ್ನು ಚಲಾಯಿಸಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಭಂವರ್ ಸಿಂಗಾ ಮೀನಾ ಅವರು ಎಲ್ಲಾರಿಗೂ ಮತದಾರರ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಜಾಥಾಕ್ಕೆ ಚಾಲನೆ: ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ಯ ಮತದಾರರಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಳ್ಳಲಾಗಿದ್ದ ಕಾಲ್ನಡಿಗೆ ಜಾಥಾಕ್ಕೆ ಕಲಬುರಗಿ ಎಸ್.ಬಿ. ಕಾಲೇಜು ಆವರಣದಲ್ಲಿ ಕಲಬುರಗಿ ನಗರ ಪೋಲಿಸ್ ಉಪ ಆಯುಕ್ತೆ ಕನಿಕಾ ಸಿಕ್ರಿವಾಲ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಭಂವರ್ ಸಿಂಗಾ ಮೀನಾ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಾಟೀಲ ಭುವನೇಶ ದೇವಿದಾಸ್ ಪಾಟೀಲ ಹಾಗೂ ಉಪ ಆಯುಕ್ತರಾದ ಮಾಧವ ಗಿತ್ತೆ ಅವರು ಚಾಲನೆ ನೀಡಲಾಯಿತು.

ಶರಣಬಸವ ವಿಶ್ವವಿದ್ಯಾಲಯದಿಂದ ಆರಂಭಗೊಂಡ ಈ ಈ ಜಾಥಾವು ಆನಂದ ಹೊಟೇಲ್, ಗೋವಾ ಹೊಟೇಲ್, ಜಗತ ಸರ್ಕಲ್ ಮಾರ್ಗವಾಗಿ ಕಡ್ಡಾಯ ಮತದಾನ, ನಮ್ಮ ಮತ ನಮ್ಮ ಹಕ್ಕು ಇತ್ಯಾದಿ ಕುರಿತು ಘೋಷಣೆಗಳೊಂದಿಗೆ ಸಾಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮುಕ್ತಾಯಗೊಂಡಿತು.

ಇದೇ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಅವರಣದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ. ಫೌಜಿಯಾ ತರನ್ನುಮ್ ಅವರು ಎಲ್ಲರಿಗೂ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿ, ಮತದಾನ ಮಹತ್ವ ಕುರಿತು ಎನ್.ಸಿ.ಸಿ. ಕ್ರೇಡಿಟ್, ಸ್ಕೌಟ್ ಆಂಡ್ ಗೈಡ್ಸ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಅಬ್ದುಲ್ ಅಜೀಮ್ ಪ್ರಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಶರಣಬಸವೇಶ್ವರ ವಿಜ್ಞಾನ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ರಾಮಕೃಷ್ಣ ರೆಡ್ಡಿ, ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸುರೇಶಕುಮಾರ ನಂದಾಗಾಂವ, ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಧಶರಥ ಮೇತ್ರೆ, ಸರಕಾರಿ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ಡಾ.ಸವಿತಾ ತಿವಾರಿ, ವಿ.ಜಿ. ಮಹಿಳಾ ಮಹಾವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ರಾಜೇಂದ್ರ ಕುಂಡ, ಪ್ರೊ ದಯಾನಂದ ಹೂಡಲ, ಮೇಜರ ಗೌರಮ್ಮ ಪಾಟೀಲ್, ಲೇಫ್ಟನೆಂಟ್ ಜಗನ್ನಾಥ ಧರಶೇಟ್ಟಿ, ಲೇಫ್ಟ್‍ನೆಂಟ್ ಪಾರ್ವತಿ ಪಾಟೀಲ್, ಲೇಫ್ಟ್‍ನೆಂಟ್ ಎಸ್.ಬಿ.ಪಾಟೀಲ, ವಿಜಯಕುಮಾರ, ಗೌಸಿಯಾ ಬೇಗಂ ನಸೀಮ್ ಫಾತಿಮಾ ಹಾಗೂ ಪ್ರೊ ಮಮತಾ ಉಪಸ್ಥಿತರಿದ್ದರು.

ಈ ಕಾಲ್ನಡಿಗೆ ಜಾಥಾದಲ್ಲಿ 800 ಎನ್.ಸಿ.ಸಿ. ಕ್ರೇಡಿಟ್, ಸ್ಕೌಟ್ ಆಂಡ್ ಗೈಡ್ಸ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here