ಕಲಬುರಗಿ: ಆಡಳಿತಾರೂಢ ಜೆಪಿಯು ಸುಮಾರು 8,252 ಕೋಟಿರೂಗಳ ಚುನಾವಣಾ ಬಾಂಡ್ ಗಳನ್ನು ಪಡೆದಿದ್ದು ಮೇಲ್ನೋಟಕ್ಕೆ ಇದೊಂದು ಅಧಿಕಾರ ದುರುಪಯೋಗದ ದುಷ್ಕøತ್ಯದಂತೆ ಕಂಡು ಬರುತ್ತಿದ್ದು ಇದರ ಒಟ್ಟು ಪ್ರಕರಣವನ್ನು ಸುಪ್ರಿಂ ಕೋರ್ಟ ಸುಪರ್ಧಿಯಲ್ಲಿ ಸಮಗ್ರ ತನಿಖೆ ನಡೆಸಿ ಅಗತ್ಯ ಕಾನೂನಿನ ಕ್ರಮ ವಹಿಸುವಂತೆ ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಕಾರ್ಯದರ್ಶಿ ಯು.ಬಸವರಾಜ ಒತ್ತಾಯಿಸಿದರು.
ಈ ಚುನಾವಣಾ ಬಾಂಡ್ ಪ್ರಕರಣಗಳು ಈಗ ಒಂದೊಂದಾಗಿ ಮಾದ್ಯಮಗಳಲ್ಲಿ ಬಯಲಾಗುತ್ತಿದ್ದು, ಇವು ಸರಕಾರದ ಅಧಿಕಾರ ದುರುಪಯೋಗ, ಭ್ರμÁ್ಟಚಾರ, ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ, ಬ್ಲಾಕ್ ಮೇಲ್ ಅಂಶಗಳನ್ನು ಅವು ಎತ್ತಿ ತೋರಿಸುತ್ತಿವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿಜೆಪಿಗೆ ಚುನಾವಣಾ ಬಾಂಡ್ ನೀಡಿದ ಔಷಧಿ ಹಾಗೂ ಲಾಟರಿ ಮತ್ತಿತರೆ ಕಂಪನಿಗಳು, ಒಕ್ಕೂಟ ಸರಕಾರದ ಈ.ಡಿ, ಐ.ಟಿ. ಮುಂತಾದ ಸಂಸ್ಥೆಗಳಿಂದ ದಾಳಿಗೊಳಗಾಗಿರುವುದು. ಅದೇ ರೀತಿ, ಹಲವು ಕಂಪನಿಗಳು ಚುನಾವಣಾ ಬಾಂಡ್ ನೀಡಿ ಲಾಭದಾಯಕ ಗುತ್ತಿಗೆಗಳನ್ನು ಪಡೆದಿರುವುದು ಕಂಡು ಬಂದಿದೆ ಎಂದರು.
ಇದನ್ನು ಸುಪ್ರಿಂ ಕೋರ್ಟ್ ಸುಪರ್ಧಿಯಲ್ಲಿ ವಿವಿಧ ಆಯಾಮಗಳ ಮೂಲಕ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನಿನ ಕ್ರಮವಹಿಸುವುದೊಂದೆ ಪರಿಹಾರವಾಗಿದೆಯೆಂದು ಸಿಪಿಐಎಂ ಆಗ್ರಹಿಸಿದರು.
ಕೇಜ್ರಿವಾಲ್ ರನ್ನು ಬಂಧ ಮುಕ್ತಗೊಳಿಸಿ:
ಪಾರ್ಲಿಮೆಂಟ್ ಚುನಾವಣೆ ಘೋಷಣೆಯಾದ ನಂತರ ದೇಶದಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ರಾಜಕೀಯ ದುರುದ್ದೇಶದಿಂದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ರನ್ನು ಬಂಧಿಸಿರುವುದು ತೀವ್ರ ಖಂಡನೀಯವಾಗಿದೆ ಮತ್ತು ಈ ಕೂಡಲೆ ಅವರನ್ನು ಬಂಧ ಮುಕ್ತಗೊಳಿಸಲು ಹೆಚ್ಚು ಕ್ಕೂಟ ಸರಕಾರವನ್ನು ಸಿಪಿಐಎಂ ಬಲವಾಗಿ ಒತ್ತಾಯಿಸಿದರು.
ಸಿಪಿಐಎಂ ಚಿಕ್ಕಬಳ್ಳಾಪುರ ಮತಕ್ಷೇತ್ರದಲ್ಲಿ ಮಾತ್ರವೇ ಸ್ಪರ್ಧಿಸಲು ಉದ್ದೇಶಿಸಿದೆ. ಆದ್ದರಿಂದ ಆ ಕ್ಷೇತ್ರದಲ್ಲಿ ಸಿಪಿಐಎಂಗೆ ಉಳಿದೆಡೆ ಬಹುತೇಕ ಕಾಂಗ್ರೆಸ್ ಪಕ್ಷಕ್ಕೆ ಮತನೀಡಿ ಗೆಲ್ಲಿಸಲು ಮನವಿ ಮಾಡಿದರು.
ಕೆ. ನೀಲಾ, ಮೌಲಾಮುಲ್ಲಾ, ಭೀಮಶೆಟ್ಟಿ ಯಂಪಳ್ಳಿ, ಎಂ.ಬಿ. ಸಜ್ಜನ್, ಶರಣಬಸಪ್ಪ ಮಮಶೆಟ್ಟಿ, ಶ್ರೀಮಂತ ಬಿರಾದಾರ ಇತರರಿದ್ದರು.