ಕಲಬುರಗಿ: ಕರ್ನಾಟಕ ಕಾರ್ಯನಿರತ ದಿನ ಪತ್ರಿಕೆಗಳ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೆಸ್ವಾಮ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.
ಸಭೆಯಲ್ಲಿ ಸಂಪಾದಕರ ಸಮಸ್ಯೆಗಳು ಹಾಗು ಅದರ ಪರಿಹಾರ ಹೇಗೆ ಕಂಡುಕೊಳ್ಳಬೇಕೆಂದು ಎಳೆ ಎಳೆಯಾಗಿ ವಿವರಿಸಿದರು. ಕಲಬುರಗಿ ಜಿಲ್ಲಾ ಸಮಿತಿ ರಚನೆಗಾಗಿ ಎಲ್ಲ ಸಂಪಾದಕರು ಒಮ್ಮತದ ಅಭ್ಯರ್ಥಿಗಳನ್ನು ಅವಿರೋಧವಾಗಿ ಕಲಬುರಗಿ ಜಿಲ್ಲಾ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘಕ್ಕೆ ಆಯ್ಕೆಯಾದರು.
ಜಿಲ್ಲಾ ಅಧ್ಯಕ್ಷರಾಗಿ ಸಿದ್ರಾಮಪ್ಪ ಮಾಲಿಬಿರಾದಾರ, ಪ್ರಧಾನ ಕಾರ್ಯದರ್ಶಿಯಾಗಿ ಆನಂದ ಪಿ. ಮಣ್ಣೂರ, ಉಪಾಧ್ಯಕ್ಷರಾಗಿ ಸುರೇಶ ಗೌರೆ, ಅಜೀಜುಲ್ಲಾ ಸರ್ಮಸ್ತ, ಚಂದ್ರಕಾಂತ ಹಾವನೂರ, ಭರತ ಖಮಿತಕರ, ವಾಸುದೇವ ದೇಸಾಯಿ, ಖಜಾಂಚಿಯಾಗಿ ಗುರುರಾಜ ಕುಲಕರ್ಣಿ, ಕಾರ್ಯದರ್ಶಿಗಳಾಗಿ ಹಣಮಂತ ಬೋಧನಕರ್, ಶಿವಕುಮಾರ ಸಿಂಧೆ, ಸಹ ಕಾರ್ಯದರ್ಶಿಗಳಾಗಿ ವಿಜಯಕುಮಾರ ಜಿಡಗಿ, ಮಲ್ಲಿಕಾರ್ಜುನ ಜೋಗ, ಜಂಟಿ ಕಾರ್ಯದರ್ಶಿಗಳಾಗಿ ಜಯಪ್ರಕಾಶ ಪೂಜಾರಿ, ಅವಿನಾಶ ಕೊಳ್ಳೂರ, ಸಂಘಟನಾ ಕಾರ್ಯದರ್ಶಿಗಳಾಗಿ ಬಾಲಾಜಿ ಚಿತ್ತೇಕರ, ಅನೀಲ ಕಪನೂರ ಮತ್ತು ರಾಜ್ಯ ಸಮಿತಿಯ ಹಿರಿಯ ಸಲಹೆಗಾರರಾಗಿ ಸಿದ್ದಣ್ಣ ಮಾಲಗಾರ, ಶಿವರಾಯ ದೊಡ್ಮನಿ, ದೇವೇಂದ್ರಪ್ಪ ಕಪನೂರ, ಶಂಕರ ಕೋಡ್ಲಾ, ಮತ್ತು ಬಿ.ವ್ಹಿ.ಚಕ್ರವರ್ತಿಯವರನ್ನು ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚನ್ನಬಸವ ಬಾಗಲವಾಡ, ರಾಜ್ಯ ಖಜಾಂಚಿ ಖಾನಸಾಬ ಮೋಮಿನ, ರಾಜ್ಯ ಕಾರ್ಯದರ್ಶಿ ಸುರೇಶ ಶಿಂಧೆ ಮತ್ತು ರಾಜ್ಯ ಸಹ ಕಾರ್ಯದರ್ಶಿ ಬೌದ್ಧಪ್ರಿಯ ನಾಗಸೇನ ಮತ್ತಿತರರು ಉಪಸ್ಥಿತರಿದ್ದರೆಂದು ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಪಿ. ಮಣ್ಣೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.