ವೀರಶೈವ ಲಿಂಗಾಯತ ಮಹಾ ವೇದಿಕೆಯ ವತಿಯಿಂದ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿ ಸಾಧನೆಗೆ ಪ್ರೇರಣೆ

0
97

ಕಲಬುರಗಿ: ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪೆÇ್ರೀತ್ಸಾಹಿಸುವುದರಿಂದ ಭವಿಷ್ಯದಲ್ಲಿ ಮತ್ತಷ್ಟು ಸಾಧನೆ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂಬ ಆಶಾಭಾವನೆಯೊಂದಿಗೆ ಕಲಬುರಗಿಯ ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾ ಸಮಿತಿ ವತಿಯಿಂದ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ “ಪ್ರತಿಭಾ ಪುರಸ್ಕಾರ” ವನ್ನು ಜಿಲ್ಲೆಯ ಹರ ಗುರು ಚರ ಮೂರ್ತಿಗಳ ದಿವ್ಯಸಾನಿಧ್ಯದಲ್ಲಿ ಮತ್ತು ಸಮುದಾಯದ ಮುಖಂಡರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದು ಜಿಲ್ಲೆಯಲ್ಲಿ ಪಿಯುಸಿ ಪರೀಕ್ಷೆಯಲ್ಲಿ 85% ಹಾಗೂ ಅಧಿಕ ಅಂಕ ಪಡೆದುಕೊಂಡು ತೇರ್ಗಡೆಯಾದ್ ವಿದ್ಯಾರ್ಥಿಗಳು ತಮ್ಮ ತಮ್ಮ ಅಂಕಪಟ್ಟಿ ಮತ್ತು ಇತ್ತೀಚಿನ ಭಾವ ಚಿತ್ರವನ್ನು ವೀರಶೈವ ಲಿಂಗಾಯತ ಮಹಾ ವೇದಿಕೆಯ ಕಾರ್ಯಾಲಯಕ್ಕೆ ತಲುಪಿಸಿಬೇಕೆಂದು ರಾಜ್ಯ ಸಮಿತಿಯ ಶ್ರೀಧರ್ ಎಮ್ ನಾಗನಹಳ್ಳಿ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದ್ರಭದಲ್ಲಿ ಜಿಲ್ಲಾ ಅಧ್ಯಕ್ಷ ದಯಾನಂದ್ ಪಾಟೀಲ್, ಉಪಾಧ್ಯಕ್ಷ ಕಲ್ಯಾಣರಾವ್ ಪಾಟೀಲ್ ಕಣ್ಣಿ, ಪ್ರಧಾನ್ ಕಾರ್ಯದರ್ಶಿ ಸುನಿಲ್ ಮಹಾಗವಂಕರ್, ಕಾರ್ಯದರ್ಶಿ ಮಹೇಶ್ ಚಂದ್ರ ಪಾಟೀಲ್ ಕಣ್ಣಿ, ಸಂಘಟನ ಕಾರ್ಯದರ್ಶಿ ಆನಂದ್ ಕನಸೂರ್, ಜಿಲ್ಲಾ ಸಂಚಾಲಕ ಗುರುರಾಜ್ ಅಂಬಾಡಿ, ಸತೀಶ್ ಮಾಹುರ್, ಸತೀಶ್ ಕೋಣಿನ್, ಶಿವು ಸಾವಳಗಿ, ಗುರುರಾಜ್ ಸುಂಟಿನೂರ್, ಸುನಿಲ್ ಕೊಳ್ಕೊರ್, ಪ್ರಜ್ವಲ್ ಕೊರಳ್ಳಿ, ಅಣ್ಣಾರಾಯ ಹಿರೇಗೌಡ, ಕಿರಣ್ ಕಣ್ಣಿ, ಸಚಿನ್, ನಾಗೇಶ್ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here