ಮತದಾರರಿಗೆ ಮೋದಿಯೇ ಗ್ಯಾರಂಟಿ: ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್

0
38

ಕಲಬುರಗಿ: ಕಾಂಗ್ರೆಸ್ಸಿನ ಗ್ಯಾರಂಟಿಗಳಿಂದಾಗಿ ಜನ ಈಗಾಗಲೇ ಮೋಸ ಹೋಗಿದ್ದು ದೇಶಕ್ಕೆ ಮೋದಿ ಅವರದೇ ಗ್ಯಾರಂಟಿ ಖಚಿತ ಎಂದು ಮಾಜಿ Enquiry ದತ್ತಾತ್ರೇಯ ಪಾಟೀಲ್ ರೇವೂರ್ ಹೇಳಿದರು.

ಕಲಬುರಗಿಯಲ್ಲಿ ಗುರುವಾರ ನಡೆದ ದಕ್ಷಿಣ ಮಂಡಲ ಪಟ್ಟಣ ಮಹಾಶಕ್ತಿ ಕೇಂದ್ರದ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಕಾಂಗ್ರೆಸ್ಸಿನ ಸುಳ್ಳು ಗ್ಯಾರಂಟಿಯಿಂದ ದೊಡ್ಡ ಮೋಸವಾಗಿದ್ದು ಇದನ್ನು ಮನೆ ಮನೆಗೆ ತಿಳಿಸಬೇಕಾಗಿದೆ ಕಳೆದ ಬಾರಿ ಗ್ಯಾರಂಟಿಯ ಹೆಸರು ಹೇಳಿ ಜನರನ್ನು ಕಾಂಗ್ರೆಸ್ ಮರಳು ಮಾಡಿದೆ ಈ ಬಾರಿ ಸತ್ಯ ಅರಿವಾಗಿದ್ದು ಎಲ್ಲರಲ್ಲೂ ಬಿಜೆಪಿ ಕಡೆ ಒಲವು ಹೆಚ್ಚಾಗಿದೆ. ಕೇಂದ್ರ ಸರಕಾರ ನೀಡುತ್ತಿದ್ದ ಕೃಷಿ ಸನ್ಮಾನ್ಯಧಿಯನ್ನು ನಿಲ್ಲಿಸಲಾಗಿದೆ ಬಿಎಸ್ ಯಡಿಯೂರಪ್ಪ ಅವರು 6,000 ಕ್ಕೆ ಮತ್ತೆ 4000 ಸೇರಿಸಿ 10,000 ನೀಡುತ್ತಿದ್ದ ಹಣ ಈಗ ಬಂದ್ ಮಾಡಲಾಗಿದೆ. ಗ್ಯಾರಂಟಿ ಎಂದು ಹೇಳಿ ಒಂದು ಕಡೆಯಿಂದ ಕಿತ್ತುಕೊಂಡು ಇನ್ನೊಂದು ಕಡೆಗೆ ಕೊಡುವ ಕಾಂಗ್ರೆಸ್ಸಿನ ಆಡಳಿತ ಎಲ್ಲರಿಗೂ ಗೊತ್ತಾಗಿದೆ. ಮದ್ಯ ದರ ಹೆಚ್ಚಳ ಮಾಡಿ ಹಣ ಸಂಗ್ರಹಿಸಲು ಸರಕಾರ ಮುಂದಾಗಿದೆ. ಬಿಜೆಪಿಯ ಭದ್ರ ಕೋಟೆ ಕಲ್ಬುರ್ಗಿ ದಕ್ಷಿಣ ಮತಕ್ಷೇತ್ರ ಎಂದು ಮತ್ತೊಮ್ಮೆ ಸಾಬೀತು ಮಾಡುವ ಚುನಾವಣೆ ಇದಾಗಿದ್ದು ದಿವಂಗತ ಚಂದ್ರಶೇಖರ್ ಪಾಟೀಲ ರೇವೂರ್ ಕನಸು ಸಾಕಾರಗೊಳಿಸಲು ಬಿಜೆಪಿಗೆ ಮತ ಚಲಾಯಿಸಬೇಕು ಎಂದು ಕರೆ ನೀಡಿದರು.

Contact Your\'s Advertisement; 9902492681

ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾದ ಅವಧಿಯಿಂದ ಪ್ರಧಾನಿ ತನಕ ಕಲ್ಬುರ್ಗಿಯ ಜೊತೆ ನಿಕಟ ನಂಟು ಹೊಂದಿದ್ದು ಈ ಭಾಗದ ಜನರ ಮೇಲೆ ಅಪಾರವಾದ ಪ್ರೀತಿ ವಿಶ್ವಾಸವನ್ನು ಇಟ್ಟುಕೊಂಡು ಅಭಿವೃದ್ಧಿ ಕೆಲಸಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಮೆಗಾ ಜವಳಿ ಪಾರ್ಕ್,ಬೆಂಗಳೂರಿಗೆ ರೈಲು,ಹುಮ್ನಾಬಾದ್- ರಾಮ ಮಂದಿರ ತನಕ ಸರ್ವಿಸ್ ರಸ್ತೆ, ರೈಲು ನಿಲ್ದಾಣ ಅಭಿವೃದ್ಧಿ ಹೀಗೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದರು.

ಭಾರತವು ಮೂರನೇ ಆರ್ಥಿಕ ಶಕ್ತಿಯಾಗಿ ಬೆಳೆಯಲು, ಅಭಿವೃದ್ಧಿ ಹೊಂದಿದ ಭಾರತವನ್ನು ಕಾಣಲು ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸಲು ಮತದಾರರು ಈ ಬಾರಿ ಕಮಲದ ಗುರುತಿಗೆ ಮತ ಹಾಕಲು ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here