ಕಡಗಂಚಿಯ ಬಸವ ಶಾಂತಿ ಫಾರ್ಮ್‌ಗೆ ವಾಟರ್‌ ಮ್ಯಾನ್‌ ಡಾ. ರಾಜೇಂದ್ರ ಸಿಂಗ್‌ ಭೇಟಿ

0
23

ಕಲಬುರಗಿ:ಸಂಚಾರದಲ್ಲಿರುವ ಭಾರತದ ಜಲ ಪುರುಷ, ವಾಟರ್‌ ಮ್ಯಾನ್‌ ಹಾಗೂ ಮ್ಯಾಗಸ್ಸೆಸ್ಸ್ ಪಾರಿತೋಷಕ ಪುರಸ್ಕೃತ ಜಲ ತಜ್ಞ ಡಾ. ರಾಜೇಂದ್ರ ಸಿಂಗ್‌ ಅವರು ಶುಕ್ರವಾರ ಇಲ್ಲಿನ ಕಲಬುರಗಿ- ಆಳಂದ ರಸ್ತೆಯಲ್ಲಿರುವ ಕಡಗಂಚಿ ಬಳಿಯ ಬಸವ ಶಾಂತ ಭೂಸನೂರ್‌ ಫಾರ್ಮ್‌ಗೆ ಭೇಟಿ ನೀಡಿದ್ದರು.

ಸುಮಾರು 55 ಎಕರೆ ಜಮೀನಿನಲ್ಲಿ ಕಳೆದೊಂದು ದಶಕದಿಂದ ಇಲ್ಲಿ ಕೈಗೊಂಡಿರುವ ಹಂತಹಂತವಾದಂತಹ ಪ್ರಗತಿ ವಿಷಯಗಳನ್ನೆಲ್ಲ ಅರಿತು ಡಾ. ರಾಜೇಂದ್ರ ಸಿಂಗ್‌ ಸಂತಸಗೊಂಡರು. ಜಮೀನಿನ ಒಡೆಯ, ಪ್ರಗತಿಪರ ರೈತ ಹಣಮಂತ ಭೂಸನೂರ್‌ ಈ ಸಂದರ್ಭದಲ್ಲಿ ಜೊತೆಗಿದ್ದು ತಾವು ಹೊಲದಲ್ಲಿ ಕೈಗೊಂಡ ಮಲೆ ನೀರು ಕೋಯ್ಲು, ನೀರು ಿಂಗಿಸುವ ವಿಧಾನಗಳನ್ನು ವಿವರಿಸಿದರು.

Contact Your\'s Advertisement; 9902492681

ಇದಲ್ಲದೆ ಹೊಲದಲ್ಲಿ ತೋಡಿರುವ ಭಾವಿ, ಅಲ್ಲಿ ಕೈಗೊಳ್ಳಲಾಗಿರುವ ಅಂತರ್ಜಲ ಹೆಚ್ಚಳದ ಪದ್ಧತಿಗಳು, ಉಪಾಯಗಳನ್ನೆಲ್ಲ ವಿವರಿಸಿದರು. ಇಲ್ಲಿನ ಅಭಿವೃದ್ಧಿಯನ್ನು ಖುದ್ದು ಕಂಡ ರಾಜೇಂದ್ರ ಸಿಂಗ್‌ ಅವರು ಹೊಲದ ಬದುವಿಗುಂಟ ಬೇವಿನ ಮರಗಳನ್ನು, ಕರಿ ಬೇವಿನ ಮರಗಳ ಸಾಲು ಸಾಲಾಗಿ ನೆಡಬೇಕು ಎಂದು ಸಲಹೆ ನೀಡಿದರು.

ಹೊಲದಲ್ಲಿರುವ ಮರಗಳು, ಬದುವಿನ ಬಲಿ ಇರುವ ಮರಗಳನ್ನು ಯಾವುದೇ ಕಾರಣಕ್ಕೂ ತುಂಡು ಮಾಡಬೇಡಿರಿ, ಇನ್ನೂ ಹೆಚ್ಚು ಮರಗಳನ್ನು ನೆಟ್ಟು ಪೋಷಿಸಿರಿ ಎಂದು ಕಿವಿಮಾತು ಹೇಳಿದರಲ್ಲದೆ ಬಸವ ಸಾಂತಿ ಫಾರ್ಮ್‌ ಮುಂದಿನ ದಿನಗಳಲ್ಲಿ ಹಸಿರಿನಿಂದ ನಳನಳಿಸಲಿ ಎಂದು ಹಾರೈಸಿದರು.

ಹೊಲದಲ್ಲಿನ ಮಾವಿನ ತೋಪು, ಪೇರು ಮರಗಳ ಸಾಲು, ಅಂಜೂರ್‌, ಸೀತಾಫಲ, ನಿಂಬೆ ಹೀಗೆ ತರಹವಾರಿ ಮರಗಳ ನೆಡು ತೋಪುಗಳನ್ನೆಲ್ಲ ಸುತ್ತಾಡಿ ರಾಜೇಂದ್ರ ಸಿಂಗ್‌ ಅವರು ಸಂತಸಪಟ್ಟರು. ನಾಲ್ಕಾರು ವಿಧಗಳ ಮಾವಿನ ತಳಿಗಳು ಹಣ್ಣು ಬಿಟ್ಟು ನಳನಳಿಸೋದನ್ನ ಕಂಡು ತಾವೇ ಹಣ್ಣನ್ನು ಕಿತ್ತುಕೊಂಡು ತಿಂದು ಖುಷಿಪಟ್ಟರು.

ತಾವೂ ಸೇರಿದಂತೆ ಐವರು ಸಹೋದರರು ಸೇರಿಕೊಂಡು ಕಲ್ಲು ತುಂಬಿದ್ದ ಹೊಲವನ್ನೇ ಉತ್ತು, ಹಸನು ಮಾಡಿ ಬಾವಿ ತೋಡಿ, ಬೋರ್‌ ಕೊರೆದು ನೀರಿನ ಸೆಲೆ ಉಕ್ಕಿಸಿ ಇಲ್ಲೆಲ್ಲಾ ಸದಾ ಎಲ್ಲಾ ಋತುಗಳಲ್ಲಿಯೂ ಹಣ್ಣುಗಳು ದೊರಕುವಂತೆ ಮಾಡಿರುವ ಹಿಂದಿನ ಶ್ರಮ, ಕೃಷಿಯ ಸಾಹಸವನ್ನೆಲ್ಲ ಹಣಮಂತ ಭೂಸನೂರ್‌ ಅವರು ಡಾ. ರಾಜೇಂದ್ರ ಸಿಂಗ್‌ ಅವರಿಗೆ ವಿವರಿಸಿದರು.

ನಂತರ ಬಸವ ಶಾಂತಿಯಲ್ಲಿನ ಪ್ರಗತಿಯ ಕುರಿತಾದ ಕಲ್ಲರಳಿ ಹಣ್ಣಾಗಿ ಕೃತಿಯನ್ನೂ ಕೊಟ್ಟು, ಕಡಗಂಚಿ ಮಠದ ಲಕ್ಷ್ಮೀ ಆನೆಯಿಂದ ಹೂವಿನ ಮಾಲೆ ಹಾಕಿಸಿ ಜಲ ಪುರುಷ ರಾಜೇಂದ್ರ ಸಿಂಗ್‌ ಇವರನ್ನು ಸತ್ಕರಿಸಿದರು. ಮುಖಂಡರಾದ ವೈಜನಾತ ಪಾಟೀಲ್‌ ಪಡಸಾವಳಗಿ, ಗಣೇಶ ಪಾಟೀಲ್‌ , ಮಲ್ಲಿಕಾರ್ಜುನ ಭೂಸನೂರ್‌, ರಿತೇಶ ಭೂಸನೂರ್‌ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here