ಮಳೆ ಶಾಂತವಾದರೂ ನಿಲ್ಲದ ಸಂತ್ರಸ್ಥರ ಪರದಾಟ: ಎಕರೆಗೆ 25 ಸಾವಿರ ಪರಿಹಾರ ವಿತರಣೆಗೆ ಆಗ್ರಹ 

0
39

ಆಳಂದ: ಕಳೆದೊಂದು ವಾರದಿಂದ ಧಾರಾಕಾರ ಸುರಿದ ಮಳೆಗೆ ಹಳ್ಳ,ಕೋಳ್ಳಗಳು,ತುಂಬಿ ಹರಿಯುತ್ತಿದ್ದು,ಜನರು ಪರಿಹಾರ ಕೆಂದ್ರಗಳತ್ತ ಮುಖ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಎಲ್ಲಾ ನದಿ, ಹಳ್ಳ,ಕೋಳ್ಳಗಳು ತುಂಬಿ ಹರಿಯುತ್ತಿದ್ದು,ಅನೇಕ ಗ್ರಾಮಗಳು ಹಾಗೂ ಮನೆಗಳು ಜಲಾವೃತಗೋಂಡಿದ್ದು,ಇಡೀ ಜನಜೀವನ ಅಸ್ಥವ್ಯಸ್ಥಗೋಂಡಿದೆ.

ಈ ಮಧ್ಯೆ ಅನೇಕ ಗ್ರಾಮಗಳಲ್ಲಿನ ತೆಗ್ಗು ಪ್ರದೇಶದಲ್ಲಿ ಮಳೆ ನೀರು ನುಗ್ಗಿ,ಹೋಲ,ಗದ್ದೆಗಳು ಹಾಗೂ ಮನೆಗಳು ಹಾನಿಯಾಗಿವೆ.ಬೆಣ್ಣೆತೋರಾ, ಅಮರ್ಜಾ, ಜಲಾಶಯ ತುಂಬಿದ್ದು, ಹಿಂಭಾಗ ಹಾಗೂ ಪಕ್ಕದ ನಾಲೆಗಳಿಂದ ನೀರು ಹರಿಯುತ್ತಿದೆ, ಇದರಿಂದಾಗಿ ಮಟಕಿ,ಸಾಲೆಗಾಂವ,ಧಂಗಾಪುರ, ಭೂಸನೂರ,ಜವಳಿ,ಬಟ್ಟರ್ಗಾ,ಹಿತ್ತಲಶಿರೂರ ಗ್ರಾಮಕ್ಕೆ ಜಲಕಂಟಕ ಎದುರಾಗಿದೆ.ನರೋಣಾ ಗ್ರಾಮದ ಮನೆಯಲ್ಲಿನ ದಿನಬಳಕೆ ಸಾಮಾನುಗಳು, ಧವಸ,ಧಾನ್ಯ ಎಲ್ಲವೂ ನೀರಿನಲ್ಲಿ ಕೋಚ್ಚಿ ಹೋಗಿದ್ದು, ಒಂದು ಊಟಕ್ಕೂ ಗ್ರಾಮಸ್ಥರು ಪರದಾಡುತ್ತಿದ್ದಾರೆ.

Contact Your\'s Advertisement; 9902492681

ರೈತ ಮುಖಂಡರ ಮುಂದೆ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಹೇಳಿಕೋಂಡಿದ್ದು,ಗ್ರಾಮಸ್ಥರ ಅಳಲು ಕೇಳಿದ ತಹಶೀಲ್ದಾರರು ತಕ್ಷಣ ಪರಿಹಾರ ಕ್ರಮಕ್ಕೆ ಮುಂದಾಗುವುದಾಗಿ ಭರವಸೆ ನೀಡಿದ್ದಾರೆ.

ಬೆಳೆ ಪರಿಹಾರಕ್ಕೆ ಒತ್ತಾಯ: ಸತತ ಮಳೆಯಿಂದ ಬೆಳೆ ಹಾಗೂ ಜಮೀನು ಹಾನಿಗೀಡಾಗಿ ರೈತರಿಗೆ ನಷ್ಟವಾಗಿದೆ.ಸರ್ಕಾರ ಕೂಡಲೇ ಇಂಥ ಪರಿಸ್ಥಿತಿಯಲ್ಲಿ ಪರಿಹಾರ ನೀಡಬೇಕೆಂದು ಜಯ ಕರ್ನಾಟಕ ಸಂಘಟನೆ ತಾಲೂಕಾಧ್ಯಕ್ಷ ಬಸವರಾಜ ಎಸ್, ಕೋರಳ್ಳಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಎಕರೆಗೆ ೨೫ ಸಾವಿರ ಕೊಡಿ: ಮಳೆಯಿಂದ ಹಾನಿಯಾದ ಬೆಳೆಗಳ ರೈತರಿಗೆ ಎಕರೆಗೆ ೨೫ ಸಾವಿರ ಪರಿಹಾರ ಹಾಗೂ ಬೆಳೆ ವಿಮೆ ತಕ್ಷಣವೇ ಬಿಡುಗಡೆ ಮಾಡಬೇಕೇಂದು ಅಖಿಲ ಭಾರತ ಕಿಸಾನ ಸಭಾ ಅಧ್ಯಕ್ಷ ಮೌಲಾ ಮುಲ್ಲಾ ಅವರು ತಹಶೀಲ್ದಾರ ಮೂಲಕ ಮನವಿ ನೀಡಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ನಿಂಬರ್ಗಾ ವಲಯ ಹಾನಿ: ನಿಂಬರ್ಗಾ ವಲಯದಲ್ಲಿ ಮಳೆಯಿಂದ ಹಾನಿಯಾದ ಬೆಳೆ ಪರಿಹಾರ ಹಾಗೂ ಹಾನಿಯಾದ ರಸ್ತೆ,ಸೇತುವೆಗಳ ದರಸ್ಥಿ ಕೈಗೋಳ್ಳಬೇಕು ಎಂದು ಕರವೇ ನಿಂಬರ್ಗಾ ವಲಯ ಅಧ್ಯಕ್ಷ ಬಸವಣ್ಣಪ್ಪಾ ಯಳಸಂಗಿ ಅವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಸರ್ಕಾರಕ್ಕೆ ವರದಿ: ತೋಟಗಾರಿಕೆ ಸೇರಿ ಖುಷ್ಕಿ ಹಾಗೂ ನೀರಾವರಿ ಬೆಳೆ ಹಾನಿ ಕುರಿತು ಸರ್ವೆ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.ಮಳೆಯಿಂದಾದ ಸರ್ವ ಹಾನಿಯ ಕುರಿತು ಅಧಿಕಾರಿಗಳ ಮೂಲಕ ಸರ್ವೆ ಕೈಗೊಂಡು ಸರ್ಕಾರಕ್ಕೆ ವಿಸ್ತೃತ ವರದಿ ಸಿದ್ದಪಡಿಸಿ ಸಲ್ಲಿಸಲಾಗುವುದೆಂದು ತಹಶೀಲ್ದಾರ ದಯಾನಂದ ಪಾಟೀಲ ಭರವಸೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here