ಡಾ. ಅಂಬೇಡ್ಕರ್ ಸಮಾನತೆಯ ಹರಿಕಾರ; ಪ್ರೊ, ಎಚ್. ಟಿ. ಫೋತೆ

0
33

ಕಲಬುರಗಿ: ಡಾ ಬಿಆರ್ ಅಂಬೇಡ್ಕರ್ ಅವರನ್ನು ಸಮಾನತೆಯ ಸಂಕೇತವಾಗಿ ನೋಡಲಾಗುತ್ತದೆ. ನಮ್ಮ ದೇಶದ ಸಂವಿಧಾನವನ್ನು ರೂಪಿಸುವಲ್ಲಿ ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ, ಎಚ್. ಟಿ. ಫೋತೆ ಅವರು ಹೇಳಿದರು.

ಕಲಬುರಗಿ ನಗರದ ರಾಜಾಜಿನಗರದ ಪೂಜಾ ಕಾಲೋನಿಯಲ್ಲಿ ದಲಿತ ಮುಖಂಡ ವಾಸು ವಂಟಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜಯಂತೋತ್ಸವದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

Contact Your\'s Advertisement; 9902492681

ಭೀಮ್ ರಾವ್ ಅಂಬೇಡ್ಕರ್ ಅವರು ಶಿಕ್ಷಣ ತಜ್ಞ, ನ್ಯಾಯಶಾಸ್ತ್ರಜ್ಞ ಮತ್ತು ಸಾಮಾಜಿಕ-ರಾಜಕೀಯ ಸುಧಾರಕರಾಗಿ ಕೆಲಸ ಮಾಡಿದ್ದರಿಂದ ಬಹು ಪ್ರತಿಭೆಯನ್ನು ಹೊಂದಿರುವ ವ್ಯಕ್ತಿಯಾಗಿದ್ದರು ಇವತ್ತಿಗೂ ಅಂಬೇಡ್ಕರ್ ಅವರನ್ನು ನನ್ನ ಜನ ಯಾರೊಬ್ಬರಿಗೂ ಅರ್ಥ ಆಗಲಿಲ್ಲ ಹೀಗಾಗಿ ನಾವು ಇನ್ನೂ ತುಂಬಾ ಹಿಂದುಳಿದವರು ಆಗಿದ್ದೇವೆ ಎಂದು ಅವರು ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎಚ್ ಎಸ್ ಜಂಗೆ ಮಾತನಾಡಿ ಸ್ವತಂತ್ರ ಭಾರತದಲ್ಲಿ, ಡಾ. ಬಾಬಾ ಸಾಹೇಬ್ ಭೀಮರಾವ ಅಂಬೇಡ್ಕರ್ ಅವರ ವಿವಿಧ ರಂಗಗಳಲ್ಲಿ ಅವರ ಕೊಡುಗೆ ಅಮೂಲ್ಯವಾಗಿದೆ ಮತ್ತು ಅವರ ಸಾಧನೆಗಳ ಪಟ್ಟಿ ದೊಡ್ಡದಾಗಿದೆ. ಅವರು ಕೆಳಜಾತಿಗಳು ಅಥವಾ ಅಸ್ಪೃಶ್ಯರ ವಿರುದ್ಧದ ತಾರತಮ್ಯವನ್ನು ನಿಷೇಧಿಸಿದರು ಮತ್ತು ನಮ್ಮ ದೇಶವಾಸಿಗಳಲ್ಲಿ ಸಮಾನತೆಯನ್ನು ಸ್ಥಾಪಿಸಲು ಬಯಸಿದ್ದರು. ಸೌಹಾರ್ದ, ಸಮಾನತೆ, ಭ್ರಾತೃತ್ವ ಇರುವ ಸಮಾಜದಲ್ಲಿ ನಂಬಿಕೆ ಇದೆ ಎಂದರು.

ಅಂಬೇಡ್ಕರ್ ಅವರಿಗೆ ವಿಶ್ವದ ನಂಬರ್ 1 ವಿದ್ವಾಂಸರು ಎಂದು ಕರೆಯುತ್ತಾರೆ ಮತ್ತು ಅವರು ಅರ್ಥಶಾಸ್ತ್ರ ವಿಷಯದಲ್ಲಿ ಪಿಎಚ್‌ಡಿ ಮಾಡಲು ದಕ್ಷಿಣ ಏಷ್ಯಾ ಪ್ರದೇಶದ ಮೊದಲ ವ್ಯಕ್ತಿಯಾಗಿದ್ದಾರೆ.”ಜೀವನವು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು” ಎಂಬ ಅವರ ಘೋಷಣೆಯು ಜಾಗತಿಕವಾಗಿ ಅನೇಕ ಜನರಿಗೆ ಸರಿಯಾದ ಮಾರ್ಗವನ್ನು ತೋರಿಸಿದೆ. ಎಂದು ಅವರು ಹೇಳಿದರು.

ಪ್ರೊ, ಶ್ರೀರಾಮುಲು, ಡಾ. ಗುಂಡಪ್ಪ ಸಿಂಗೆ, ಡಾ. ಮಲ್ಲೇಶ್ ಸಜ್ಜನ, ಅಣ್ಣಪ ಜಂಗೆ, ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಅರ್ಜುನ ಬದ್ರೆ, ಗೌತಮ್ ವಂಟಿ, ಡಾ. ರಾಜಕುಮಾರ ಎಂ ದಣ್ಣೂರ, ರವಿಕುಮಾರ್ ಪಾಟೀಲ, ರವಿ ಕಡಗಂಚಿ, ಡಾ. ಸೇವಂತಾ ವಗ್ಗೆ, ಡಾ. ಶ್ರೀಮಂತ ಹೋಳ್ಕರ್ ಶರತಕುಮಾರ ಕಟ್ಟಿಮನಿ, ಹಲವು ಜನರು ಭಾಗವಹಿಸಿದ್ದರು. ಡಾ. ವಿಜಯಕುಮಾರ ಬಿಳಗಿ ನಿರೂಪಿಸಿದರು. ಅಣವೀರ ಬಿರಾದಾರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here