ಚಿಂಚೋಳಿ: ಬೈಕ್ ಸವಾರನ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ 2.29,150 ನಗದು ಜಪ್ತಿ

0
181

ಚಿಂಚೋಳಿ: ಕರ್ನಾಟಕ ತೆಲಂಗಾಣ ಮಧ್ಯೆ ಬೈಕ್ ಸವಾರನ ಓರ್ವ ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ ರೂ. 2,29,150 ಮೊತ್ತವನ್ನು ಚಿಂಚೋಳಿ ತಾಲ್ಲೂಕಿನ ಕುಸ್ರಂಪಳ್ಳಿ ಚೆಕ್ ಪೋಸ್ಟ್ ಸಿಬ್ಬಂದಿಗಳು ಜಪ್ತಿ ಮಾಡಿಕೊಂಡಿದ್ದಾರೆ.

ರಾಜ್ಯ ಹೆದ್ದಾರಿ 122ರಲ್ಲಿ ಬರುವ ಬೈಕ ಸವಾರನನ್ನು ತಡೆದು ತಪಾಸಣೆ ನಡೆಸಿದ ಸಹಾಯಕ ಚುನಾವಣಾಧಿಕಾರಿ ಸಂತೋಷ ಇನಾಂದಾರ ಅವರು ಈ ಕುರಿತು ಮಾಹಿತಿ ನೀಡಿದ್ದು, ಎಫ್ ಎಸ್.ಸಿ ತಂಡದ ಅಧಿಕಾರಿ ಪ್ರಭುಲಿಂಗ ವಾಲಿ ಮತ್ತು ಸಹಾಯಕ ಜಗನ್ನಾಥ ರಡ್ಡಿ ತುಮಕುಂಟಾ, ತಹಶೀಲ್ದಾರ ಕಚೇರಿಯ ಚುನಾವಣಾ ಶಾಖೆಯ ಸಹಾಯಕ ಶೋಯೇಬ್ ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿ ಹಣ ಜಪ್ತಿ ಮಾಡಿ ಖಜಾನೆಗೆ ತಂದು ಒಪ್ಪಿಸಿದ್ದಾರೆ.

Contact Your\'s Advertisement; 9902492681

ಚೆಕ್ ಪೋಸ್ಟ ಸಿಬ್ಬಂದಿ ಜಾವೀದ್ ಪಟೇಲ್, ಸಹಾಯಕ ವೀರೇಂದ್ರ ಜಾಬಶೆಟ್ಟಿ, ಪೊಲೀಸ ಕಾನಸ್ಟೇಬಲ ಹಂಸಪಾಲರೆಡ್ಡಿ ಹಾಗೂ ಗೃಹ ರಕ್ಷಕರು ಮತ್ತು ಹಣ ಪತ್ತೆ ಮಾಡಿದ್ದರು. ಉಡುಮನಳ್ಳಿಯ ವಿಶಾಲ ಎಂಬುವವರು ಬೈಕ್ ಮೇಲೆ ಚಿಂಚೋಳಿ ಕಡೆಗೆ ಹೊರಟಾಗ ಚೆಕ್ ಪೋಸ್ಟ ಸಿಬ್ಬಂದಿ ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ.

ಹಣ ಎಲ್ಲಿಂದ ತಂದಿದ್ದೀರಿ ದಾಖಲೆಯಿದ್ದರೆ ಸಲ್ಲಿಸಿ  ಹಣ ಒಯ್ಯಿರಿ ಎಂದರೆ, ವ್ಯಕ್ತಿಯ ಬಲಕಿಯ ಹಣಕ್ಕೆ ಸಂಬಂಧಿಸಿದಂತೆ ದಾಖಲೆಯಿರಲಿಲ್ಲ ಎಂದು ಎಸ್ಎಸ್ಟಿ ಅಧಿಕಾರಿ ಪ್ರಭುಲಿಂಗ ವಾಲಿ ವಿವರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here