ಬಿಜೆಪಿಯ ದ್ವಂದ್ವ ಧೋರಣೆಗೆ ಶಾಸಕ ಅಜಯ್‌ ಸಿಂಗ್‌ ವಾಗ್ದಾಳಿ

0
16

ಕಲಬುರಗಿ: ಪಿಎಸ್ ಐ ಪರೀಕ್ಷೆ ಅಕ್ರಮ ಆರೋಪಿ ಪಾಟೀಲ್‌ ಮನೆಗೆ ಕಲಬುರಗಿ ಲೋಕಸಭೆ ಅಭ್ಯರ್ಥಿ ಉಮೇಶ ಜಾಧವ ಭೇಟಿ ನೀಡಿರೋದನ್ನ ಕಟುವಾಗಿ ಟೀಕಿಸಿರುವ ಕೆಕೆಆರ್‌ಡಿಬಿ ಅಧ್ಯಕ್ಷರು, ಜೇವಗ್ರಿ ಶಾಸಕರೂ ಆಗಿರುವ ಡಾ. ಅಜಯ್‌ ಸಿಂಗ್‌ ಸೋಲಿನಹತಾಶೆಯಲ್ಲಿ ಬಿಜೆಪಿ ಪಕ್ಷ ಅಲ್ಲಿನ ಮುಖಂಡರು, ಲೋಕಸಭೆ ಅಖಾಡದಲ್ಲಿರುವವರು ಹೀಗೆಲ್ಲಾ ಸ್ಥಿಮಿತ ಕಳೆದುಕೊಂಡವರಂತೆ ವರರ್ತಿಸುತ್ತಿದ್ದಾರೆಂದು ಟೀಕಿಸಿದ್ದಾರೆ.

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಡಾ. ಅಜಯ್ಸಿಂಗ್‌ ಅವರು, ಬಿಜೆಪಿ ಈಚೆಗೆ ಬಿಡುಗಡೆ ಮಾಡಿರುವ ತನ್ನ ರಾಷ್ಟ್ರೀಯ ಪ್ರನಾಳಿಕೆಯಲ್ಲಿ ಯುವಕರಿಗಾಗಿ ಕೆಲವು ಸಂಗತಿ ಹೇಳಿದೆ, ಅವುಗಳಲ್ಲಿ ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ಕಾಯಿದೆ ತರುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ. ಮತ್ತೊಂದು ಕಡೆ ಮೋದಿ ಭ್ರಷ್ಟಾಚಾರಿಗಳ ವಿರುದ್ದ ಕಠಿಣ ಕ್ರಮದ ಮಾತುಗಳನ್ನಾಡುತ್ತಿದ್ದಾರೆ. ಇಲ್ಲಿ ಕಲಬುರಗಿಯಲ್ಲಿ ನೋಡಿದರೆ ಅದೇ ಪಕ್ಷದಿಂದ ಪುನರಾಯ್ಕೆ ಬಯಿಸಿ ಕಣದಲ್ಲಿರೋ ಅಭ್ಯರ್ಥಿ ಡಾ. ಜಾಧವ್‌ ಭ್ರಷ್ಟಚಾರಿಗಳ ಮನೆಗೆ ಹೋಗಿ ಬರುತ್ತಾರೆಂದರೆ ಇದೇನು ಸಂದೇಶ ಸಾರುತ್ತದೆ ಎಂಬುದನ್ನು ಜನ ಗಮನಿಸಬೇಕು ಎಂದು ಹೇಳಿದ್ದಾರೆ.

Contact Your\'s Advertisement; 9902492681

ಕರ್ನಾಟಕದಲ್ಲಿ ಪಂಚ ಗ್ಯಾರಂಟಿ ಯಶಸ್ವಿ ಅನುಷ್ಠಾನದಿಂದ ಜನ ಖುಷಿಯಲ್ಲಿದ್ದಾರೆ. ಇಡೀ ರಾಷ್ಟ್ರದಲ್ಲಿ ಲೋಕ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಯುವ, ನಾರಿ, ಕಾರ್ಮಿಕ ನ್ಯಾಯ ಎಂದು 25 ಕ್ಕೂ ಹೆಚ್ಚು ಗ್ಯಾರಂಟಿ ಘೋಷಿಸಿದೆ. ಇವುಗಳಿಂದ ಜನ ಕಾಂಗ್ರೆಸ್‌ ಪರ ಒಲವು ತೋರುತ್ತಿದ್ದಾರೆ. ಇದರಿಂದ ವಿಚಲಿತವಾಗಿರುವ ಬಿಜೆಪಿಯವರು ಒತ್ತಡಕ್ಕೆ ಸಿಲುಕಿ ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ಮರೆತು ವರ್ತಿಸುತ್ತಿದ್ದಾರೆಂದು ಡಾ. ಅಜಯ್‌ ಸಿಂಗ್‌ ಮಾತಲ್ಲೇ ಬಿಜೆಪಿಯವರನ್ನು ಕುಟುಕಿದ್ದಾರೆ.

ರಾಜ್ಯದಲ್ಲಿ 20 ಕ್ಕೂ ಹೆಚ್ಚು ಸ್ಥಾನ ಕಾಂಗ್ರೆಸ್‌ ಗೆಲ್ಲುತ್ತದೆ. ಕಲ್ಯಾಣ ನಾಡಲ್ಲಿ ಕಲಬುರಗಿ, ಬೀದರ್‌, ರಾಯಚೂರು ಸೇರಿದಂತೆ ಎಲ್ಲಾ ಪಂಚ ಸ್ಥಾನಗಳನ್ನೂ ಕಾಂಗ್ರೆಸ್ ಗೆಲ್ಲಲಿದೆ ಎಂದು ಡಾ. ಅಜಯ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

58,000 ಅಭ್ಯರ್ಥಿಗಳು ಪಿಎಸ್ ಐ ಪರೀಕ್ಷೆ ಬರೆದಿದ್ದರು. ಅಕ್ರಮ ಹಗರಣದ‌ ಬಯಲಿಗೆ ಬಂದ ನಂತರ ಒಟ್ಟು 114 ಜನರನ್ನು ಬಂಧಿಸಲಾಗಿತ್ತು, ಆಯ್ಕೆಯಾಗಿದ್ದ 54 ಅಭ್ಯರ್ಥಿಗಳು ಖಾಯಂ ಸಸ್ಪೆಂಡ್ ಮಾಡಲಾಗಿದೆ. ಅವರಲ್ಲಿ 24 ಅಭ್ಯರ್ಥಿಗಳು ಕಲಬುರಗಿ ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದರು. ಹಗರಣ ಚಿಗುರಿದ್ದೇ ಜಿಲ್ಲೆಯಿದಂ, ಅದೂ ಬಿಜೆಪಿಯೊಂದಿಗೆ ಸಂಬಂಧ ಹೊಂದಿದವರಿಂದಲೇ ಹಗರಣವಾಗಿದೆ,

ಸಾವಿರಾರು ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡಿದ ಪಿಎಸ್ಐ ಪರೀಕ್ಷೆ ಅಕ್ರಮ ಹಗರಣದ ಆರೋಪಿ ಮನೆಗೆ ಹೋಗಿ ಬೆಂಬಲ ಕೋರಿ ಬಂದಿರುವ ಸಂಸದ ಚುನಾವಣೆ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ನಡೆಯ ಬಗ್ಗೆ ಜಿಲ್ಲೆಯ ಜನರೇ ಕಣ್ಣು ತೆರೆದು ನೋಡುತ್ತಿದ್ದಾರೆ. ಅವರ ಧರಣೆ, ನಡೆ, ನುಡಜಿಗಳ ಬಗ್ಗೆ ಜನರೇ ಈ ಚುನಾವಣೆಯಲ್ಲಿ ಪಕ್ಕಾ ತೀರ್ಮಾನ ಕೈಗೊಳ್ಳುತ್ತಾರೆ. ಕಾಂಗ್ರೆಸ್‌ ಕೈ ಹಿಡಿದು ಬಿಜೆಪಿಯನ್ನ ಮನೆಗೆ ಕಳುಹಿಸೋದು ಗ್ಯಾರಂಟಿ ಎಂದು ಡಾ. ಅಜಯ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here