ಪ್ರಿಯಾಂಕ ಖರ್ಗೆಗೆ ಮತ ಕೇಳುವ ನೈತಿಕ ಹಕ್ಕಿಲ್ಲ: ಸಂಸದ ಡಾ. ಉಮೇಶ್ ಜಾಧವ್

0
97

ಸೇಡಂ: ಸನಾತನ ಹಿಂದೂ ಧರ್ಮವನ್ನು ಅವಹೇಳನ ಮಾಡಿದ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಉದಯ ಸ್ಟಾಲಿನ್ ಹೇಳಿಕೆಯನ್ನು ಸಮರ್ಥಿಸಿ ಮಾತನಾಡಿದ ಪ್ರಿಯಾಂಕ ಖರ್ಗೆಯವರಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಸೇಡಂ ಮಂಡಲ ಅಡಕಿ ಮಹಾಶಕ್ತಿ ಕೇಂದ್ರದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದ ಅವರು ಉದಯ ಸ್ಟಾಲಿನ್ ಹಿಂದೂ ಧರ್ಮವನ್ನು ಕ್ಯಾನ್ಸರ್,ಏಡ್ಸ್, ಮಲೇರಿಯಾ, ಡೆಂಗ್ಯೂ ಜ್ವರ ಎಂದು ಹೀಯಾಳಿಸಿ ಸನಾತನ ಧರ್ಮೀಯರನ್ನು ಅವಹೇಳನ ಮಾಡಿ ಹೇಳಿಕೆ ಕೊಟ್ಟಾಗ ಕಲಬುರ್ಗಿಯ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆಯವರು ಪರೋಕ್ಷವಾಗಿ ಆ ಹೇಳಿಕೆಯನ್ನು ಸಮರ್ಥಿಸಿಕೊಂಡು ಸನಾತನ ಧರ್ಮ ದವರನ್ನು ಅಪಮಾನ ಮಾಡಿದ್ದಾರೆ ಎಂದು ಹೇಳಿದರು.

Contact Your\'s Advertisement; 9902492681

ಕಾಂಗ್ರೆಸಿಗೆ ಧರ್ಮದಲ್ಲಿ ಮತ್ತು ದೇವರಲ್ಲಿ ನಂಬಿಕೆ ಇಲ್ಲ ಅವಹೇಳನ ಮಾಡಿ ಹಿಂದೂ ದೇವರಿಗೆ ಮತ್ತು ಧರ್ಮಕ್ಕೆ ಅಪಮಾನ ಮಾಡುತ್ತಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಮತ ಕೇಳುವ ನೈತಿಕ ಹಕ್ಕನ್ನು ಅವರು ಕಳೆದುಕೊಂಡಿದ್ದಾರೆ ಎಂದು ದೂರಿದರು.

ವಸುದೈವ ಕುಟುಂಬಕಂ ಎಂಬ ತತ್ವದೊಂದಿಗೆ ಎಲ್ಲರಿಗೂ ಪ್ರೀತಿ – ವಿಶ್ವಾಸವನ್ನು ಹಂಚಿಕೊಳ್ಳುವ ಧರ್ಮವಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಧರ್ಮವನ್ನು ಅವಹೇಳನ ಮಾಡುವುದು, ದೇಗುಲಗಳನ್ನು ಕಟ್ಟದಂತೆ ತಡೆಯುವುದು ಪಕ್ಷದ ಸಂಸ್ಕೃತಿಯಾಗಿದೆ. ಬೆಳಿಗ್ಗೆ ಎದ್ದು ಪೂಜೆ ಮಾಡುವುದು, ತಂದೆ ತಾಯಿಗೆ ನಮಸ್ಕಾರ ಮಾಡುವುದು ಹಾಗೂ ಹಬ್ಬ ಹರಿದಿನಗಳನ್ನು ಆಚರಣೆ ಮಾಡುವುದು ಸಂಪ್ರದಾಯ ಮತ್ತು ಸಂಸ್ಕೃತಿಯಾಗಿದೆ. ಈಗಿನ ಸೇಡಂ ಶಾಸಕರು ಮತ್ತು ಸಚಿವರಾದ ಶರಣಪ್ರಕಾಶ್ ಪಾಟೀಲ್ ಅವರ ಕುಮ್ಮಕ್ಕಿನಿಂದ ಅಡಕಿ ಗ್ರಾಮದ ಕಸ್ತೂರಿ ರಂಗನಾಥ ದೇವಾಲಯವನ್ನೇ ಕಟ್ಟಲು ಬಿಡದೆ ಇಲ್ಲಿನ ಭಕ್ತರನ್ನು ಜೈಲು ಸೇರುವಂತೆ ಮಾಡಿದ ನೋವಿನ ಸಂಗತಿ ಎಂದರು.

ಮುಂದಿನ ಪೀಳಿಗೆಯ ರಕ್ಷಣೆಗಾಗಿ ಏಕತೆಯನ್ನು ಕಾಪಾಡಲು, ಅಭಿವೃದ್ಧಿಯನ್ನು ಸಾಧಿಸಲು ನರೇಂದ್ರ ಮೋದಿಯವರನ್ನು ಬೆಂಬಲಿಸಬೇಕಾಗಿದೆ. 60 ವರ್ಷಗಳ ಆಡಳಿತವನ್ನು ಮಾಡಿದ ಕಾಂಗ್ರೆಸ್ಸಿನ ಸಾಧನೆಗಿಂತ ಮೋದಿಯವರ ಹತ್ತು ವರ್ಷದ ಆಡಳಿತವು ಕ್ರಾಂತಿಯನ್ನು ಸೃಷ್ಟಿಸಿದೆ. ಕಾಂಗ್ರೆಸಿಗರು ಮುಂಜಾನೆಯಿಂದ ರಾತ್ರಿಯವರೆಗೆ ಮೋದಿ ಏನು ಮಾಡಿದ್ದಾರೆ? ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ? ಕಲ್ಬುರ್ಗಿಗೆ ಏನು ಮಾಡಿದ್ದಾರೆ? ಜಾಧವ್ ಕೊಡುಗೆ ಏನು,? ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಅವರಿಗೆ ಗೊತ್ತಿಲ್ಲ ಕಲ್ಬುರ್ಗಿಗೆ ಅತ್ಯಧಿಕ ಅನುದಾನವನ್ನು ಕೊಟ್ಟದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಲ್ಬುರ್ಗಿಯಲ್ಲಿ 10 ಸಾವಿರ ಕೋಟಿ ರೂಪಾಯಿ ವೆಚ್ಚದಿಂದ ಒಂದು ಲಕ್ಷ ನೇರ ಮತ್ತು ಎರಡು ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಸುವ, ಐದನೇ ಕ್ಲಾಸಿನವರೆಗೆ ಕಲಿತವರಿಗೂ 25 ರಿಂದ 50 ಸಾವಿರ ಸಂಬಳ ಪಡೆಯುವ ಮೆಗಾ ಟೆಕ್ಸ ಟೈಲ್ ಪಾರ್ಕ್, 2100 ಕೋಟಿ ರೂಪಾಯಿ ವೆಚ್ಚದಲ್ಲಿ ಅಫ್ಜಲ್ಪುರ ಹಾಗು ಜೇವರ್ಗಿ ಮಧ್ಯೆ ಹಾದು ಹೋಗುವ ಅಂತರಾಷ್ಟ್ರೀಯ ಗುಣಮಟ್ಟದ ಸೂರತ್ – ಚೆನ್ನೈ ಬಂದರುಗಳನ್ನು ಜೋಡಿಸುವ ರಸ್ತೆ, ತುರ್ತು ಸಂದರ್ಭಗಳಲ್ಲಿ ಬೇಕಾದರೆ ವಿಮಾನ ಕೂಡ ಇಳಿಯಲು ಸಾಧ್ಯವಾಗುವ ಭಾರತ್ ಮಾಲಾ ರಸ್ತೆ ನಿರ್ಮಾಣವಾಗುತ್ತಿರುವುದು ಇವರ ಕಣ್ಣಿಗೆ ಕಾಣುತ್ತಿಲ್ಲ. ಈ ರಸ್ತೆ ನಿರ್ಮಾಣದಿಂದಾಗಿ ಅನೇಕ ಫ್ಯಾಕ್ಟರಿಗಳು ಮುಂದಿನ ದಿನಗಳಲ್ಲಿ ತಲೆ ಎತ್ತಲಿವೆ. ಆದರೆ ಶರಣಪ್ರಕಾಶ್ ಪಾಟೀಲ್ ಅವರು ಕೇಂದ್ರ ಸರಕಾರ ಮತ್ತು ಎಂಪಿಯವರಿಂದ ಒಂದು ಬುಟ್ಟಿ ಮಣ್ಣು ಹಾಕಲು ಸಾಧ್ಯವಾಗಿಲ್ಲ ಎಂದು ಸುಖಾಸುಮ್ಮನೆ ಆರೋಪವನ್ನು ಮಾಡುತ್ತಿದ್ದಾರೆ ಎಂದರು.

ಸೇಡಂನಲ್ಲೇ ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಅಂಚೆ ಕಚೇರಿ ನಿರ್ಮಿಸಲಾಗಿದೆ. ಅಭಿವೃದ್ಧಿ ಕೆಲಸಗಳು ಕೇವಲ ಐದಲ್ಲ 50ಕ್ಕೂ ಹೆಚ್ಚು ಇದೆ. ಕರೋನಾ ಸಂದರ್ಭದಲ್ಲಿ ಒಂದು ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಡಳಿತ ಇರದೆ ಇರುತ್ತಿದ್ದರೆ ಭಾರತದ ಒಟ್ಟು ಜನಸಂಖ್ಯೆಯ ಸುಮಾರು ಅರ್ಧದಷ್ಟು ಜನ ಜೀವ ಕಳೆದುಕೊಳ್ಳಬೇಕಾದ ಅಪಾಯವಿತ್ತು ಎಂದು ಹೇಳಿದರು.

ಸ್ವದೇಶಿಯಾಗಿ ಲಸಿಕೆಯನ್ನು ತಯಾರು ಮಾಡಿ ಭಾರತೀಯರಿಗೆ ಮತ್ತು ಹಲವು ರಾಷ್ಟ್ರಗಳಿಗೆ ಮಾನವೀಯತೆಯಿಂದ ಪೂರೈಸಿದ ಹೆಗ್ಗಳಿಕೆ ಭಾರತಕ್ಕೆ ಸಲ್ಲುತ್ತದೆ. ಇಂತಹ ವಿಶ್ವ ನಾಯಕನನ್ನು ಮತ್ತೆ ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸಲು ಹಾಗೂ ಕಲ್ಬುರ್ಗಿಯಿಂದ ಎರಡನೇ ಬಾರಿಗೆ ಕಮಲ ಪಕ್ಷವನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸುವ ಮೂಲಕ ಮೋದಿ ಅವರ ಕೈ ಬಲಪಡಿಸಬೇಕು ಎಂದು ವಿನಂತಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ರಾಜಕುಮಾರ್ ಪಾಟೀಲ್ ತೆಲುಗು ಬಿಜೆಪಿ ಜಿಲ್ಲಾ ಗ್ರಾಮೀಣ ಅಧ್ಯಕ್ಷರಾದ ಶಿವರಾಜ್ ಪಾಟೀಲ್ ರದ್ದೇವಾಡಗಿ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ಮಾತನಾಡಿದರು ಮಂಡಲ ಅಧ್ಯಕ್ಷರಾದ ಶರಣು ಶಂಕರ್ ಹಿಂದುಳಿದ ವರ್ಗಗಳ ಮೋರ್ಚಾದ ಅವ್ವನ ಮ್ಯಾಕೇರಿ, ಮುಕುಂದ ದೇಶಪಾಂಡೆ, ನಾಗರೆಡ್ಡಿ ಪಾಟೀಲ್, ಜ್ಯೋತಿ ಶಾಬಾದಕರ್, ಅನಂತರಿಟಿ ಪಾಟೀಲ್ ವೆಂಕಟರೆಡ್ಡಿ ಪಾಟೀಲ್ ಶಿವರಾಜ ರೆಡ್ಡಿ ಪಾಟೀಲ್ ಗೋವಿಂದ ಅಡಕಿ ನಾಗರಾಜ್ ಭಟ್ ತಿರುಪತಿ ರೆಡ್ಡಿ ಅಡಕಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here