ಹೆಣ್ಣು ಅಬಲೆಯಲ್ಲ ಶಕ್ತಿಯ ಸೆಲೆ

0
91

ಕಲಬುರಗಿ : ದೇಶಾದ್ಯಂತ ಇತ್ತೀಚಿಗೆ ಅತಿ ಹೆಚ್ಚು ಮಹಿಳೆಯರ ಮೇಲೆ ದೌರ್ಜನ್ಯಗಳು ಕಂಡುಬರುತ್ತಲಿವೆ. ಇವುಗಳ ಕಡಿವಾಣಕ್ಕೆ ಕೇಂದ್ರ ಸರ್ಕಾರ ವಿಶೇಷ ಕಾನೂನನ್ನು ಜಾರಿಗೆ ತರಬೇಕು. ಪ್ರತಿಯೊಂದು ಕ್ಷೇತ್ರದಲ್ಲಿ ಹೆಣ್ಣು ಪುರುಷನಿಗೆ ಸರಿಸಮಾನವಾದ ಕೆಲಸ ಮಾಡುತ್ತಿದ್ದಾಳೆ ಹಾಗಾಗಿ ಹೆಣ್ಣು ಅಬಲೇಯಲ್ಲ, ಶಕ್ತಿಯ ಸೆಲೆಯೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ಪಾಟೀಲ ಅವರು ಹೇಳಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಕಲಬುರಗಿ ಹಾಗೂ ಗೋದುತಾಯಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ “ಅಂತರಾಷ್ಟ್ರೀಯ ಮಹಿಳಾ ದಿನ”ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಕಾರ್ಯಕ್ರಮದ ಆರಂಭಕ್ಕೆ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಗೋದುತಾಯಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಕಲ್ಪನಾ ಭೀಮಳ್ಳಿ ಅವರು, ಸಮಾಜದ ವಿವಿಧ ಸ್ಥಳಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಭದ್ರತೆ ಒದಗಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಸಮಾಜ ಸೇವೆ ಮಾಡಿತ್ತಿರುವ ಡಾ. ರಬೀಯಾ ಖಾನಮ್ ಚೀಫ್ ಟ್ರಸ್ಟಿ, ಹಮೀದ ಪ್ಯಾರೆ ಶಿಕ್ಷಣ ಮಹಾವಿದ್ಯಾಲಯ, ಡಾ. ಪುಟ್ಟಮಣಿ ದೇವಿದಾಸ ಪ್ರಾಧ್ಯಾಪಕರು, ಗೋದುತಾಯಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ಕು. ರೇಣುಕಾ ಆರ್. ಸ್ವಾಮಿ ಕಾರ್ಯಕ್ರಮ ಅಧಿಕಾರಿ ಹಿಂಗೂಲಾಂಬಿಕಾ ಶಿಕ್ಷಣ ಮಹಾವಿದ್ಯಾಲಯ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಆರ್. ಸುಲೇಖಾ ಮಾಲಿಪಾಟೀಲ ಅವರು ಮಹಿಳಾ ದಿನಾಚರಣೆ ಮೇಲೆ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ವೇದಿಕೆಯ ಮೇಲೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾಗಿರುವ ಅರುಣಕುಮಾರ ಲೋಯಾ, ಉಪ ಸಭಾಪತಿಗಳಾಗಿರುವ ಭಾಗ್ಯಲಕ್ಷ್ಮಿ ಎಂ, ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ, ಖಜಾಂಚಿ ಜಿ. ಎಸ್. ಪದ್ಮಾಜಿ, ಗೋದುತಾಯಿ ಮಹಿಳಾ ಪದವಿ ಮಹಾವಿದ್ಯಾಲಯದ ನಿರ್ದೇಶಕರಾಗಿರುವ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ್ ಅವರು ಜೀವನದ ನೈತಿಕತೆ ಮತ್ತು ಮೌಲ್ಯದ ಬಗ್ಗೆ ವಿದ್ಯಾರ್ಥಿಗಳ ಮನಮುಟ್ಟುವಂತೆ ತಿಳಿಸಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳಾದ ಅಪ್ಪಾರಾವ್ ಅಕ್ಕೋಣೆ, ಸುರೇಶ ಬಡಿಗೇರ, ಡಾ. ಪದ್ಮರಾಜ್ ರಾಸಣಗಿ, ನೈನಾ ಸೇಠಿಯಾ, ಡಾ. ಶರಣಬಸಪ್ಪ ವಡ್ಡನಕೇರಿ ಹಾಗೂ ಡಾ. ಜಾನಕಿ ಹೊಸೂರ ಪ್ರಾಂಶುಪಾಲರು ಗೋದುತಾಯಿ ಪದವಿ ಮಹಾವಿದ್ಯಾಲಯ ಕಲಬುರಗಿ ಅವರು ಉಪಸ್ಥಿತರಿದ್ದರು.

ಶ್ರೀಮತಿ ಸುಪ್ರೀಯಾ ನಾಗನಶೆಟ್ಟಿ ಅವರು ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಂಡಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here