ವಿದ್ಯಾಸಾಗರ ಸಾಂಸ್ಕøತಿಕ ಭವನ ಕಾಮಗಾರಿಗೆ ಅಡಿಗಲ್ಲು

0
37

ವಾಡಿ: ಪಟ್ಟಣದಲ್ಲಿ ಕ್ರಾಂತಿಕಾರಿ ಚಿಂತನೆಯ ಸಂಘಟನೆಗಳಾದ ಎಐಡಿಎಸ್‍ಒ ಹಾಗೂ ಎಐಡಿವೈಒ ವತಿಯಿಂದ ನಿರ್ಮಿಸಲಾಗುತ್ತಿರುವ ನವೋದಯದ ಹರಿಕಾರ ಈಶ್ವರಚಂದ್ರ ವಿದ್ಯಾಸಾಗರ ಹೆಸರಿನ ಸಾಂಸ್ಕøತಿಕ ಭವನದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಲಾಯಿತು.

ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಪ್ರಗತಿಪರ ಚಿಂತಕ, ಸಾಮಾಜಿಕ ಹೋರಾಟಗಾರ ಎಂ.ಶಶಿಧರ್ ಮೈಸೂರ, ಸಮಾಜದಲ್ಲಿ ದಿನೇದಿನೆ ಕುಸಿಯುತ್ತಿರುವ ಮಾನವೀಯ ಮೌಲ್ಯಗಳನ್ನು ಮರುಸ್ಥಾಪಿಸಲು ಸಾಂಸ್ಕøತಿಕ ಚಳವಳಿ ಸಂಘಟಿಸುವುದು ಅತ್ಯಂತ ಅಗತ್ಯವಾಗಿದೆ. ಸಮಾಜವನ್ನು ಪ್ರಗತಿಯತ್ತ ಮುನ್ನಡೆಸಬಲ್ಲ ಕಲೆ, ಸಾಹಿತ್ಯ, ಸಂಗೀತ, ನಾಟಕ, ಸಿನೆಮಾಗಳು ಉಳಿಯಬೇಕಿದೆ.

Contact Your\'s Advertisement; 9902492681

ಸಾಂಸ್ಕøತಿಕ ಚಳವಳಿಯನ್ನು ಜೀವಂತವಾಗಿಡಲು ಜನಪರ ವೇದಿಕೆಗಳ ಅಗತ್ಯವಿದೆ. ಅಲ್ಲದೆ ಈ ಚಟುವಟಿಕೆಗಳನ್ನು ನಡೆಸಲು ಸಾಂಸ್ಕøತಿಕ ಭವನ ಬೇಕಾಗುತ್ತದೆ. ವಾಡಿ ಪಟ್ಟಣದಲ್ಲಿ ಸಾಂಸ್ಕøತಿಕ ಭವನದ ಕೊರತೆ ಮನಗಂಡ ಹೋರಾಟದ ಸಂಘಟನೆಗಳು, ಪ್ರಗತಿಪರ ಮನಸ್ಸುಗಳಿಂದ ಧನ ಸಹಾಯ ಪಡೆದು ಕಾರ್ಮಿಕ ನಗರಿಯಲ್ಲಿ ವಿದ್ಯಾಸಾಗರ ಸಾಂಸ್ಕøತಿಕ ಭವನ ನಿರ್ಮಿಸಲು ಹೊರಟಿರುವುದು ನಿಜಕ್ಕೂ ಉತ್ತಮ ಕಾರ್ಯ ಎಂದರು.

ಧರ್ಮ, ಜಾತಿ, ದೇವರ ಹೆಸರಿನ ಕಲುಷಿತ ರಾಜಕೀಯ ವಾತಾವರಣ ನಮ್ಮ ಯುವಜನರನ್ನು ದಾರಿತಪ್ಪುವಂತೆ ಮಾಡುತ್ತಿದೆ. ಮನುಷ್ಯರೆಲ್ಲ ಒಂದೇ ಎಂದು ಸಂಘಟಿತರಾಗುತ್ತಿರುವ ಯುವಜನರನ್ನು ಈ ಜಾತಿ ರಾಜಕಾರಣ ಒಡೆದುಹಾಕುತ್ತಿದೆ. ಸಿನೆಮಾ ಮತ್ತು ಜಾಹಿರಾತುಗಳ ಮೂಲಕ ಅಶ್ಲೀಲತೆ ಹರಿಬಿಟ್ಟು ಕುಸಂಸ್ಕøತಿಯ ವಾತಾವರಣ ಸೃಷ್ಠಿಸಲಾಗುತ್ತಿದೆ. ಪರಿಣಾಮ ಸಮಾಜದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳನ್ನು ನಿಯಂತ್ರಿಸಲು ಸಾಂಸ್ಕøತಿಕ ಚಳವಳಿ ಮತ್ತೆ ಪುಟಿದೇಳಬೇಕಿದೆ. ಜಾತಿ, ಧರ್ಮ, ಭಾಷೆ ಲೆಕ್ಕಿಸದೆ ಮನಸ್ಸುಗಳನ್ನು ಕಟ್ಟಬಲ್ಲ ಸೌಹಾರ್ಧತೆಯ ಚರ್ಚೆ, ಸಂವಾದ, ಕವಿಗೋಷ್ಠಿ, ಸಾಂಸ್ಕøತಿಕ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕಿದೆ. ಅಂಥಹ ಉತ್ತಮ ವಾತಾವರಣ ಸೃಷ್ಠಿಗೆ ವಿದ್ಯಾಸಾಗರ ಸಾಗರ ಸಾಂಸ್ಕøತಿಕ ಭವನ ಬಳಕೆಯಾಗಲಿ ಎಂದು ಶುಭಕೋರಿದರು.

ಎಐಡಿಎಸ್‍ಒ ಅಧ್ಯಕ್ಷ ವೆಂಕಟೇಶ ದೇವದುರ್ಗ, ಎಐಡಿವೈಒ ಉಪಾಧ್ಯಕ್ಷ ರಾಜು ಒಡೆಯರಾಜ, ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಕಾರ್ಯದರ್ಶಿ ಶರಣು ಹೇರೂರ, ಪ್ರಗತಿಪರ ಚಳುವಳಿಯ ಮುಖಂಡರಾದ ವೀರಭದ್ರಪ್ಪ ಆರ್.ಕೆ, ಎಸ್.ಎಂ.ಶರ್ಮಾ, ಶರಣುಕುಮಾರ ದೋಶೆಟ್ಟಿ, ಮಲ್ಲಣ್ಣ ದಂಡಬಾ, ಗೌತಮ ಪರ್ತೂರ, ದೌಲಪ್ಪ ದೊರೆ, ಸಿದ್ಧಾರ್ಥ ತಿಪ್ಪನೋರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here