ನೇಹಾ ಹತ್ಯೆ ಪ್ರಕರಣ; ಆರೋಪಿಗೆ ಎನ್‍ಕೌಂಟರ್ ಮಾಡುವಂತೆ ಭೀಮ್ ಆರ್ಮಿ ಒತ್ತಾಯ

0
13

ಸುರಪುರ: ಹುಬ್ಬಳ್ಳಿ ಬಿವಿಬಿ ಕಾಲೇಜ್ ಬಳಿ ವಿದ್ಯಾರ್ಥಿನಿ ನೇಹಾಳನ್ನು ಹತ್ಯೆ ಮಾಡಿದ ಪ್ರಕರಣದ ಆರೋಪಿಗೆ ಪೊಲೀಸರು ಎನ್‍ಕೌಂಟರ್ ಮಾಡುವಂತೆ ಒತ್ತಾಯಿಸಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಸಂಘಟನೆಯ ತಾಲೂಕು ಘಟಕದ ಮುಖಂಡರು ಒತ್ತಾಯಿಸಿದ್ದಾರೆ.

ನಗರದಲ್ಲಿ ತಹಸಿಲ್ದಾರ್‍ಗೆ ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು,ಫಯಾಜ್ ಒಬ್ಬ ಜಿಹಾದಿ ಮನಸ್ಸಿನವನು ನೇಹಾಳಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾನೆ,ಇಂತಹ ಘಟನೆ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿನಿಯರಲ್ಲಿ ಭಯ ಹುಟ್ಟಿಸಿದೆ,ಆದ್ದರಿಂದ ಕೂಡಲೇ ಇಂತಹ ಘಟನೆ ಮತ್ತೆ ನಡೆಯಬಾರದು ಎಂದರೆ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕು ಅಥವಾ ಹೈದರಾಬಾದ್‍ನಲ್ಲಿ ನಡೆದಂತೆ ಫಯಾಜ್‍ನನ್ನು ಎನ್‍ಕೌಂಟರ್ ಮಾಡಿದಾಗ ಬೇರೆಯವರಿಗೆ ಎಚ್ಚರಿಕೆಯಾಗಲಿದೆ.ಅಲ್ಲದೆ ರಾಜ್ಯಾಧ್ಯಂತ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಭದ್ರತೆ ನೀಡಬೇಕು,ಪೊಲೀಸರನ್ನು ಮಫ್ತಿಯಲ್ಲಿ ನಿಯೋಜಿಸಿ ವಿದ್ಯಾರ್ಥಿನಿಯರಿಗೆ ತೊಂದರೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Contact Your\'s Advertisement; 9902492681

ನಂತರ ಗೃಹ ಸಚಿವರಿಗೆ ಬರೆದ ಮನವಿಯನ್ನು ತಹಸಿಲ್ದಾರ್ ನಾಗಮ್ಮ ಕಟ್ಟಿಮನಿ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆ ತಾಲೂಕು ಅಧ್ಯಕ್ಷ ಶರಣಪ್ಪ ಹೊಸ್ಮನಿ,ಉಪಾಧ್ಯಕ್ಷ ಸುರೇಶ ರುಕ್ಮಾಪುರ,ಕಾರ್ಯದರ್ಶಿ ಬಲಭೀಮ ಅಚಕೇರಿ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here