ಮತ ಅಸ್ತ್ರದ ಮೂಲಕ ಮಹಿಳಾ ಶಕ್ತಿ ಪ್ರದರ್ಶನವಾಗಬೇಕು: ಡಾ. ಉಮೇಶ್ ಜಾಧವ್

0
10

ಶಹಾಬಾದ: ಮಹಿಳೆಯರು ಮತ ಎಂಬ ಅಸ್ತ್ರದ ಮೂಲಕ ಈ ಬಾರಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ದೇಶದ ಭದ್ರತೆ ಮತ್ತು ಭವಿಷ್ಯವನ್ನು ಕಾಪಾಡಲು ಬಿಜೆಪಿಗೆ ಮತ ಚಲಾಯಿಸಬೇಕು ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧ ವ್ ಹೇಳಿದರು.

ಶಹಾಬಾದ್ ನಲ್ಲಿ ಬುಧವಾರ ನಡೆದ ಮಹಿಳಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ 18ನೇ ಲೋಕಸಭೆಯ ಈ ಚುನಾವಣೆಯು ಅಳಿವು ಉಳಿವಿನ ಪ್ರಶ್ನೆ ಮತ್ತು ಬದುಕಿನ ಸುರಕ್ಷತೆಯ ದೊಡ್ಡ ಸವಾಲು ಇರುವ ಚುನಾವಣೆಯಾಗಿರುವುದರಿಂದ ದುಷ್ಟ ಶಕ್ತಿಗಳನ್ನು ದಮನಿಸಲು ಮಹಿಳೆಯರು ಒಗ್ಗಟ್ಟಾಗಿ ತಮ್ಮ ಮತ ಅಸ್ತ್ರ ಬಳಸಿ ಶಕ್ತಿಯನ್ನು ತೋರಿಸಬೇಕಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರ್ಗಿಗೆ ನಿರುದ್ಯೋಗ ಸಮಸ್ಯೆ ಹಾಗೂ ವಲಸೆ ಹೋಗುವುದನ್ನು ತಪ್ಪಿಸಲು ಮೆಗಾ ಜವಳಿ ಪಾರ್ಕ್ ಕೊಡುಗೆಯಾಗಿ ನೀಡಿದ್ದಾರೆ.

Contact Your\'s Advertisement; 9902492681

ಗುರುಮಠಕಲ್, ಯಾದಗಿರಿ, ಕಲ್ಬುರ್ಗಿ ಮುಂತಾದ್ದಡೆಗಳಿಂದ ಕೂಲಿ ಬಂಜಾರ ಸೇರಿದಂತೆ ಹಿಂದುಳಿದ ಸಮುದಾಯದವರು ಉದ್ಯೋಗಕ್ಕಾಗಿ ವಲಸೆ ಹೋಗುತ್ತಿರುವುದನ್ನು ತಪ್ಪಿಸಲು ಈ ಯೋಜನೆಯನ್ನು ನೀಡಲಾಗಿದೆ ಇದರಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ ಇದ್ದು ಸುಮಾರು ಒಂದು ಲಕ್ಷ ನೇರ ಹಾಗೂ ಎರಡು ಲಕ್ಷ ಪರೋಕ್ಷ ಉದ್ಯೋಗಗಳು ಸಿಗಲಿದೆ 60 ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ನಿರುದ್ಯೋಗ ಮತ್ತು ವಲಸೆ ಹೋಗುವುದನ್ನು ಕೊಡುಗೆಯಾಗಿ ನೀಡಿದ್ದು ಯಾವುದೇ ಯೋಜನೆಗಳನ್ನು ನೀಡದೆ ವಂಚನೆ ಮಾಡಿದೆ. ಆದರೆ ಮೋದಿ ಅವರು 10 ವರ್ಷದ ಆಡಳಿತದಲ್ಲಿ ಕಲಬುರ್ಗಿಗೆ 10,000 ಕೋಟಿ ರೂಪಾಯಿಯ ಮೆಗಾ ಯೋಜನೆಯನ್ನು ನೀಡಿದ್ದಾರೆ. ಕಾಂಗ್ರೆಸ್ಸಿನಿಂದ ಭಾರಿ ದೊಡ್ಡ ಅಪಾಯವಿದ್ದು ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ.

ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆಯ ಘಟನೆ ಆತಂಕವನ್ನು ಸೃಷ್ಟಿಸಿದೆ. ನೇಹಾಳ ತಾಯಿ ಸುಮಾರು 30 ಮೀಟರ್ ದೂರದಲ್ಲಿ ನಿಂತುಕೊಂಡಿದ್ದಾಗಲೇ ಹಂತಕ ಬಂದು 14 ಬಾರಿ ಚಾಕುವಿನಿಂದ ತಿವಿದು ಕೇವಲ 58 ಅಮಾಯಕ ಹೆಣ್ಣುಮಗಳು ಪ್ರಾಣ ಬಿಟ್ಟ ಬೀಭತ್ಸಕರ ಘಟನೆಯಾಗಿದ್ದು ಮಹಿಳೆಯರಿಗೆ ರಾಜ್ಯದಲ್ಲಿ ರಕ್ಷಣೆ ಇಲ್ಲ ಎಂಬುದಕ್ಕೆ ಇದು ಜ್ವಲಂತ ಸಾಕ್ಷಿಯಾಗಿದೆ.

ನಮ್ಮ ಮನೆಯ ಹೆಣ್ಣು ಮಕ್ಕಳ ರಕ್ಷಣೆಗಾಗಿ ಮತ್ತೊಮ್ಮೆ ಮೋದಿ ಅವರನ್ನು ಗೆಲ್ಲಿಸುವುದು ಅನಿವಾರ್ಯವಾಗಿದ್ದು 7ನೇ ತಾರೀಕಿಗೆ ಮುಂಜಾನೆಯೇ ಮತಗಟ್ಟೆಗೆ ತೆರಳಿ ಒಂದು ಮತವೂ ಬಿಟ್ಟು ಹೋಗದಂತೆ ಶೇಕಡ ನೂರರಷ್ಟು ಮತದಾನ ವಾಗುವಂತೆ ನೋಡಿಕೊಳ್ಳಬೇಕಾಗಿದೆ.

ಮತಗಟ್ಟೆಗೆ ತೆರಳಿ ಮತ ಹಾಕುವುದೆಂದರೆ, ಕಾಶಿ, ವೈಷ್ಣೋದೇವಿ ಯಾತ್ರೆ ಮಾಡಿದಂತೆ. ಮತಯಂತ್ರದಲ್ಲಿ ಮೊದಲನೇ ಸಂಖ್ಯೆ ಒಂದರಲ್ಲಿ ಕಮಲದ ಹೂವಿಗೆ ಬಟನ್ ಒತ್ತಿ ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕೆ ಪ್ರತಿಜ್ಞ ಕೈಗೊಳ್ಳಬೇಕಾಗಿದೆ. “ಯಕ್ಕ ಯಕ್ಕ ಬಿಜೆಪಿ ಪಕ್ಕಾ” ಎಂಬ ಸಂದೇಶವನ್ನು ಎಲ್ಲರಿಗೂ ತಲುಪಿಸಿವೆ ಎಂದು ಅವರು ಮನವಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here