ಕಲಬುರಗಿ: ಕಳೆದ ರಾತ್ರಿಯಿಂದ ಶುರುವಾದ ಮಳೆರಾಯ ಬೆಳಗ್ಗೆ ಸ್ವಲ್ಪ ಹೊತ್ತು ಬಿಡುವು ಕೊಟ್ಟಂತೆ ಮಾಡಿ ಬೆಳಗಿನ 9 ಗಂಟೆ ಸುಮಾರಿಗೆ ಮತ್ತೆ ಜೋರಾಗಿ ಸುರಿಯಲಾರಂಭಿಸಿತು.
ದಿನಾಲು ಚುರುಗುಟ್ಟುವ ಬಿಸಿಲು ಹಾಗೂ ಧಗೆ ಆವರಿಸಿಕೊಂಡು ಸೂರ್ಯ ತನ್ನ ಪ್ರತಾಪ ಪ್ರದರ್ಶಿಸಬೇಕಿತ್ತು. ಆದರೆ, ಬೆಳಗ್ಗೆ 11-45 ಆದರೂ ಸೂರ್ಯನೇ ನಾಪತ್ತೆಯಾಗಿದ್ದಾನೆ. ಸಂಜೆ 7ರ ತರಹದ ವಾತಾವರಣ ಇದೆ. ತಂಪಾದ ಅನುಭೂತಿ ನೀಡುತ್ತಿದೆ. ರಾತ್ರಿಯಿಂದ ಧಾರಾಕಾರ ಮಳೆ ಇನ್ನೂ ಮುಂದುವರೆದಿದೆ.
ಬಹಳ ದಿನಗಳ ಬಳಿಕ ಹೀಗೊಂದು ವಾತಾವರಣ ಉಂಟಾಗಿರುವುದು ಮನಸ್ಸಿಗೆ ಹಿತ ನೀಡುವಂತಾಗಿದೆ.