ಬಡವರ ಸಂಸಾರ ಭಾರ ಕಮ್ಮಿ ಮಾಡಿದ ಪಂಚ ಗ್ಯಾರಂಟಿಗಳು: ಶಾಸಕ ಡಾ. ಅಜಯ್‌ ಸಿಂಗ್‌

0
7

ಕಲಬುರಗಿ: ಜೇವರ್ಗಿ ತಾಲ್ಲೂಕಿನಲ್ಲಿ ಅಲ್ಲಿನ ಸಾಸಕರಾದ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯ್ ಸಿಂಗ್‌ ಅವರಿಂದ ಕಾಂಗ್ರೆಸ್‌ ಪರ ಚುನಾವಣೆ ಪ್ರಚಾರ ಭರಾಟೆ ಹಾಗೂ ಮತ ಯಾಚನೆ ಭಾನುವಾರ ಕೂಡಾ ನಿರಂತರ ಸಾಗಿತು.

ಈ ದಿನ ಡಾ. ಅಜಯ್‌ ಸಿಂಗ್‌ ಅವರು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ
ರಾಧಾಕೃಷ್ಣ ದೊಡ್ಡಮನಿ ಅವರ ಪರವಾಗಿ ಗಂವಾರ ಗ್ರಾಮದಲ್ಲಿ ಸಭೆ ನಡೆಸಿ ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಹಳ್ಳಿಯಿಂದ ದಿಲ್ಲಿಯವರೆಗೂ ಪ್ರಗತಿ ಸಾಧ್ಯ. ಅದಕ್ಕಾಗಿ ಎಲ್ಲರು ಈ ಚುನಾವಣೆಯಲ್ಲಿ ರಾಧಾಕೃಷ್ಣ ದೊಡ್ಮನಿಯವರನ್ನು ಗೆಲ್ಲಿಸುವುದು ಅತ್ಯವಶ್ಯಕವಾಗಿದೆ ಎಂದರು.

Contact Your\'s Advertisement; 9902492681

ಪಂಚ ಗ್ಯಾರಂಟಿಗಳಿಂದ ಬಡವರ ಸಂಸಾರ ಬಾರ ತಗ್ಗಿದೆ. ರಾಧಾಕೃ,್ಣ ಅವರನ್ನು ರೆಲ್ಲಿಸುವ ಮೂಲಕ ೇದಶದಲ್ಲಿ ಕೈ ಬಲಪಡಿಸೋಣ, ಆ ಮೂಲಕ ಇನ್ನಷ್ಟು ಗ್ಯಾರಂಟಿಗಳು, ಪ್ರಗತಿ ಪರ್ವಕ್ಕೆ ಸ್ವಾಗತ ಮಾಡೋಣ ಎಂದರು.

ಆಂದೋಲ ಜಿಲ್ಲಾ ಪಂಚಾಯತಿಯ ವ್ಯಾಪ್ತಿಯ ಗಂವಾರ,ಮಾರಡಗಿ ಎಸ ಎ,ಮುದಬಾಳ ಕೆ, ಮುದಬಾಳ ಬಿ,ವರ್ಚನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಮುಖಂಡರು, ಜನತೆ ಪಾಲ್ಗೊಂಡಿದ್ದರು.

ಯಳವಾರ ಗ್ರಾಮದಲ್ಲಿ ಜಿಲ್ಲಾ ಪಂಚಾಯತಿಯ ವ್ಯಾಪ್ತಿಯ ಯಳವಾರ, ಲಕಣಾಪುರ, ಕೊಡಚಿ, ಚಿಗರಳ್ಳಿ ಸೋಮನಾಥಹಳ್ಳಿ , ಸಿಗರತಳ್ಳಿ, ಖಾದ್ಯಪುರ, ಪಂಚಾಯಿತಿ ವ್ಯಾಪ್ತಿಯ ಮುಖಂಡರೊಂದಿಗೆ ಸಭೆ ನಡೆಸಿ ಮತಯಾಚನೆ ಮಾಡಲಾಯಿತು.

ನಂತರ ಜೇವರ್ಗಿ ತಾಲ್ಲೂಕಿನ ಇಜೇರಿ ಗ್ರಾಮದಲ್ಲಿ ನಡೆದ ಸಭೆಯಲ್ಲಿಯೂ ಸಾರ್ವಜನಿಕರು ಸಾಸಕರಾದ ಡಾ. ಅಜಯ್‌ ಸಿಂಗ್‌ ಮಾತನ್ನಾಲಿಸಲು ಹೆಚ್ಚಿಗೆ ಸೇರಿದ್ದರು. ಇಜೇರಿ, ಮುತಕೂಡ, ಸಾತಕೇಡ ಪಂಚಾಯತಿಯ ವ್ಯಾಪ್ತಿಯ ಮುಖಂಡರು, ಸಾರ್ವಜನಿಕರು ಪಾಲ್ಗೊಂಡು ಗಮನ ಸೆಳೆದರು.

ಈ ಸಂದರ್ಭದಲ್ಲಿ ಜೇವರ್ಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿದ್ದಲಿಂಗ ರೆಡ್ಡಿ ಇಟಗಿ,ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕಾಶಿಮ್ ಪಟೇಲ್ ಮುದುಬಾಳ್, ಗೌಡಪಗೌಡ ಪಾಟೀಲ್ ಆಂದೋಲ ಗುರುಲಿಂಗಪ್ಪ ಗೌಡ ಪಾಟೀಲ್ ಆಂದೋಲ, ಬಸವರಾಜ್ ಪಾಟೀಲ್ ಗಂವಾರ, ಮಾಜಿದ ಗಿರಣಿ , ಸೂಫಿ ಸಾಬ್ ಗಂವಾರ ಸೇರಿದಂತೆ ಅನೇಕ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಯುವ ಕಾರ್ಯಕರ್ತರು. ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here