ಮೇ 1 ರಂದು ಪೊಲಿಂಗ್‌ ಸಿಬ್ಬಂದಿಗೆ ಎರಡನೇ ಹಂತದ ತರಬೇತಿ: ಬಸ್ ವ್ಯವಸ್ಥೆ

0
118

ಕಲಬುರಗಿ: ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿ-ಸಿಬ್ಬಂದಿಗಳಿಗೆ ಮೇ 1 ರಂದು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಹಂತದ ತರಬೇತಿ ಹಮ್ಮಿಕೊಂಡಿರುವುದರಿಂದ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರದಿಂದ ಇತರೆ ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಮತ್ತೆ ವಾಪಸ್ ಬರಲು ಒಟ್ಟಾರೆ 86 ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಮತದಾನ ದಿನದಂದು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಪೊಲಿಂಗ್ ಸಿಬ್ಬಂದಿ ಚುನಾವಣಾ ಕೆಲಸದ ಆದೇಶ ಪತ್ರ ಕಡ್ಡಾಯವಾಗಿ ತೋರಿಸಿ ಉಚಿತ ಪ್ರಯಾಣ ಮಾಡಬಹುದಾಗಿದೆ. ಚುನಾವಣಾ ಸಿಬ್ಬಂದಿ ಬೆಳಿಗ್ಗೆ 6 ಗಂಟೆಗೆ‌ ಆಯಾ ವಿಧಾನಸಭಾ ಕ್ಷೇತ್ರದ ತರಬೇತಿ ಕೇಂದ್ರದಲ್ಲಿ ಹಾಜರಾಗಬೇಕು‌ ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಅಫಜಲಪೂರ ಕ್ಷೇತ್ರದಿಂದ ತೆರಳಲು 11, ಜೇವರ್ಗಿಯಿಂದ 12, ಚಿತ್ತಾಪುರ ಮತ್ತು ಸೇಡಂದಿಂದ ತಲಾ 8, ಚಿಂಚೋಳಿಯಿಂದ 9, ಗುಲಬರ್ಗಾ ಗ್ರಾಮೀಣ ಮತ್ತು ಗುಲಬರ್ಗಾ ಉತ್ತರದಿಂದ ತಲಾ 6, ಗುಲಬರ್ಗಾ ದಕ್ಷಿಣದಿಂದ 16 ಹಾಗೂ ಆಳಂದದಿಂದ 10 ಸೇರಿ ಒಟ್ಟು 86 ಬಸ್ ವ್ಯವಸ್ಥೆ ಮಾಡಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here