ಸುರಪುರ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ನಗರದ ವಿದ್ಯಾರ್ಥಿಗಳಿಗೆ ವಂಚನ

0
77

ಸುರಪುರ: ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ ಯಾದಗಿರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಂಯುಕ್ತಾಶ್ರಯದಲ್ಲಿ ನಗರದ ಸರಕಾರಿ ಬಾಲಕರ ಪ್ರೌಢಶಾಲೆಯ ಆವರಣದಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನ ಒಲೇಕರ್ ಹಾಗೂ ತಾಲೂಕು ಪಂಚಾಯಿತಿ ಅಧ್ಯಕ್ಷ ಶಾರದ ಬೇವಿನಹಳ್ಳಿ ಉದ್ಘಾಟಿಸಿದರು ವೇದಿಕೆ ಮೇಲೆ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಂಜೀವ ದರ್ಬಾರಿ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ಉಪಪ್ರಾಚಾರ್ಯ ಯಲ್ಲಪ್ಪ ಕಾಡ್ಲೂರ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಅಮರೇಶ್ ಕುಂಬಾರ್ ಬಿಸಿಯೂಟದ ತಾಲೂಕ್ ಅಧಿಕಾರಿ ಮೌನೇಶ್ ಕಂಬಾರ್ ಶಿಕ್ಷಕರ ಸಂಘದ ಅಧ್ಯಕ್ಷ ಸೋಮರಡ್ಡಿ ಮಂಗಿಹಾಳ ಹಳ್ಳೆಪ್ಪ ಕಾಂಜಾಂಜಿ ಶರಣು ದೇವರಗೋನಾಲ ಖಾದರ್ ಪಟೇಲ್ ಬಿ.ಆರ್.ಪೋಲೀಸ್ ಪಾಟೀಲ್ ಚಂದ್ರಶೇಖರ್ ಉಕ್ರಾಣಿ ಸಣ್ಣ ಹನುಮಂತ ಸೇರಿದಂತೆ ಅನೇಕರಿದ್ದರು.

Contact Your\'s Advertisement; 9902492681

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ನಡೆಸುವ ಪೂರ್ವದಲ್ಲಿ ತಾಲ್ಲೂಕಿನಲ್ಲಿರುವ ಮಟ್ಟದಲ್ಲಿ ಪ್ರತಿಭಾ ಕಾರ್ಯಕ್ರಮಗಳನ್ನು ನಡೆಸಿ, ಕ್ಲಸ್ಟರ್ ಮಟ್ಟದ ಕಾರ್ಯಕ್ರಮಗಳಲ್ಲಿ ಪ್ರಥಮ ದ್ವಿತೀಯ ಸ್ಥಾನ ಬಂದ ವಿದ್ಯಾರ್ಥಿಗಳಿಂದ ತಾಲೂಕು ಮಟ್ಟದ ಕಾರ್ಯಕ್ರಮ ನಡೆಸುವಂತೆ ಸರಕಾರದ ನಿಯಮವಿದೆ. ಆದರೆ ಸುರಪುರ ಮತ್ತು ರಂಗ ಪೇಟೆಯ ಕ್ಲಸ್ಟರ್ ಮಟ್ಟದಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಸದೆ ತಾಲೂಕು ಮಟ್ಟದ ಕಾರ್ಯಕ್ರಮ ನಡೆಸಿ ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶದಿಂದ ವಂಚಿತ ಗೊಳಿಸಲಾಗಿದೆ ಎಂದು ಅನೇಕರು ಕಾರ್ಯಕ್ರಮದ ಕುರಿತು ಆರೋಪಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here